Menu

ಯೆಮೆನ್‌ ಪ್ರಜೆಯ ಕೊಲೆ ಪ್ರಕರಣ: ಕೇರಳದ ನಿಮಿಷಾಗೆ ಜು.16 ರಂದು ಗಲ್ಲು

ಯೆಮೆನ್‌ ಪ್ರಜೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾರನ್ನು ಜು.16 ರಂದು ಗಲ್ಲಿಗೇರಿಸಲಾಗುವುದು. ಅವರಿಗೆ ಮರಣದಂಡನೆ ವಿಧಿಸಲು ಯೆಮೆನ್‌ ಅಧ್ಯಕ್ಷರು ಕಳೆದ ವರ್ಷ ಅನುಮೋದನೆ ನೀಡಿದ್ದರು.

ನಿಮಿಷಾ ಪ್ರಿಯಾ ಉದ್ಯೋಗ ನಿಮಿತ್ತ 2008 ರಲ್ಲಿ ಯೆಮನ್‌ಗೆ ತೆರಳಿದರು. ಹಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ ಸ್ವಂತ ಕ್ಲಿನಿಕ್‌ ತೆರೆದರು. ಯೆಮನ್‌ನಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಸ್ಥಳೀಯರೊಂದಿಗೆ ಪಾಲುದಾರಿಕೆ ಕಡ್ಡಾಯ. ಈ ಹಿನ್ನೆಲೆಯಲ್ಲಿ 2014 ರಲ್ಲಿ ತಲಾಲ್ ಅಬ್ದೋ ಮಹ್ದಿ ಅವರ ಸಂಪರ್ಕಕ್ಕೆ ಬಂದರು. ನಂತರ ಅವರಿಬ್ಬರ ಜೊತೆ ಮನಸ್ತಾಪ ಉಂಟಾಗುತ್ತದೆ.

ಅಬ್ದೋ ಮಹ್ದಿ ವಿರುದ್ಧ ದೂರು ದಾಖಲಿಸಿದ ನಂತರ 2016 ರಲ್ಲಿ ಆತನನ್ನು ಬಂಧಿಸಲಾಯಿತು. ಜೈಲಿನಿಂದ ಬಿಡುಗಡೆಯಾದ ಆತ ಆಕೆಗೆ ಬೆದರಿಕೆ ಹಾಕುತ್ತಿದ್ದ. ನಿಮಿಷಾ ಮಹ್ದಿಗೆ ನಿದ್ರಾಜನಕ ಚುಚ್ಚುಮದ್ದು ನೀಡಿದ್ದು, ಅದು ಅತಿಯಾಗಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಆಕೆಯನ್ನು ಬಂಧಿಸಿ, 2018 ರಲ್ಲಿ ಕೊಲೆ ಆರೋಪ ಹೊರಿಸಲಾಯಿತು. ನ್ಯಾಯಾಲಯವು ಆಕೆಯನ್ನು ದೋಷಿ ಎಂದು ತೀರ್ಪು ನೀಡಿತು. ಈ ನಿರ್ಧಾರವನ್ನು ದೇಶದ ಉನ್ನತ ನ್ಯಾಯಾಂಗ ಮಂಡಳಿಯು 2023ರ ನವೆಂಬರ್‌ನಲ್ಲಿ ಎತ್ತಿಹಿಡಿಯಿತು.

Related Posts

Leave a Reply

Your email address will not be published. Required fields are marked *