Menu

WTL ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ!

wtl

ಬೆಂಗಳೂರು: ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಭಾರತದ ಮೊದಲ ಆವೃತ್ತಿಗೆ ಸಂಬಂಧಿಸಿದಂತೆ ಫಾರ್ಮಾಟ್, ವೇಳಾಪಟ್ಟಿ ಮತ್ತು ಟಿಕೆಟ್ ವಿವರಗಳನ್ನು ಪ್ರಕಟಿಸಿದೆ.

ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ SM ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಟೂರ್ನಮೆಂಟ್ ಭಾರತ ಹಾಗೂ ಜಗತ್ತಿನ ಟೆನಿಸ್ ಅಭಿಮಾನಿಗಳಿಗೆ ಉತ್ಸಾಹಭರಿತ ಕ್ರೀಡಾ ಅನುಭವ ನೀಡಲಿದೆ. ಫೇಸ್ 1 ಟಿಕೆಟ್‌ಗಳು ಲೀಗ್‌ನ ಅಧಿಕೃತ ಟಿಕೆಟ್ ಪಾಲುದಾರ ‘ಬುಕ್ ಮೈ ಶೋ’ ಆಪ್ ಮತ್ತು ವೆಬ್‌ಸೈಟ್‌ನಲ್ಲಿ ಈಗ ಲಭ್ಯವಿದೆ.

2025ರ ವರ್ಲ್ಡ್ ಟೆನಿಸ್ ಲೀಗ್ ನಾಲ್ಕು ಸೆಟ್‌ಗಳಲ್ಲಿ ನಡೆಯಲಿದ್ದು — ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್ ಮತ್ತು ಎರಡು ಡಬಲ್ಸ್ ಸೆಟ್‌ಗಳನ್ನು ಒಳಗೊಂಡಿರುತ್ತದೆ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ನಾಯಕರು ಡಬಲ್ಸ್ ಸಂಯೋಜನೆಯನ್ನು ಆಯ್ಕೆ ಮಾಡುವ ಅವಕಾಶ ಹೊಂದಿರುತ್ತಾರೆ. ಹೆಚ್ಚು ಗೇಮ್‌ಗಳನ್ನು ಗೆಲ್ಲುವ ತಂಡವೇ ಟೈನಲ್ಲಿ ಗೆಲುವು ಸಾಧಿಸುತ್ತದೆ. ಪ್ರತಿಯೊಂದು ಗೇಮ್, ಪ್ರತಿಯೊಂದು ಪಾಯಿಂಟ್ ಬಹಳ ಮಹತ್ವದ್ದಾಗಿದೆ.

ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಒಂದೊಂದು ಬಾರಿ ಮುಖಾಮುಖಿಯಾಗಲಿದ್ದು, ಅಗ್ರ ಎರಡೂ ತಂಡಗಳು ಫೈನಲ್‌ಗೆ ತಲುಪುತ್ತವೆ. ಪ್ರತಿದಿನ ಎರಡು ಟೈಗಳು ನಡೆಯುತ್ತವೆ ಮತ್ತು ನಾಲ್ಕು ದಿನಗಳ ಕಾಲ ಸ್ಪರ್ಧೆಗಳು ನಿರಂತರವಾಗಿ ನಡೆಯಲಿವೆ. ಪಂದ್ಯಗಳು ಸಾಂಪ್ರದಾಯಿಕ ಸ್ಕೋರಿಂಗ್ ಅನುಸರಿಸಲಿದ್ದು, ಡ್ಯೂಸ್ ಸನ್ನಿವೇಶದಲ್ಲಿ ಗೋಲ್ಡನ್ ಪಾಯಿಂಟ್ ಮತ್ತು 6-6ಕ್ಕೆ ಟೈ-ಬ್ರೇಕ್ ಇರುತ್ತದೆ. ನಾಲ್ಕನೇ ಸೆಟ್‌ನಲ್ಲಿ ಹಿಂಬಾಲಿಸುತ್ತಿರುವ ತಂಡ ಜಯ ಸಾಧಿಸಿದರೆ, ಪಂದ್ಯ ಓವರ್‌ಟೈಮ್‌ಗೆ ಸಾಗುತ್ತದೆ. ಅಲ್ಲಿಯೂ ಅಂಕಗಳು ಸಮನಾದರೆ “ಸೂಪರ್ ಶೂಟೌಟ್” ಮೂಲಕ ಅಂತಿಮ ಜಯಶೀಲರನ್ನು ನಿರ್ಧರಿಸಲಾಗುತ್ತದೆ.

ಪಂದ್ಯಗಳ ವೇಳಾಪಟ್ಟಿ

ಡೇ 1 | ಡಿಸೆಂಬರ್ 17

• ಪಂದ್ಯ 1: VB ರಿಯಾಲ್ಟಿ ಹಾಕ್ಸ್ vs ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್
• ಪಂದ್ಯ 2: AOS ಈಗಲ್ಸ್ vs ಗೇಮ್ ಚೇಂಜರ್ಸ್ ಫಾಲ್ಕನ್ಸ್

ಡೇ 2 | ಡಿಸೆಂಬರ್ 18
• ಪಂದ್ಯ 1: ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ vs AOS ಈಗಲ್ಸ್
• ಪಂದ್ಯ 2: ಗೇಮ್ ಚೇಂಜರ್ಸ್ ಫಾಲ್ಕನ್ಸ್ vs VB ರಿಯಾಲ್ಟಿ ಹಾಕ್ಸ್

ಡೇ 3 | ಡಿಸೆಂಬರ್ 19
• ಪಂದ್ಯ 1: AOS ಈಗಲ್ಸ್ vs VB ರಿಯಾಲ್ಟಿ ಹಾಕ್ಸ್
• ಪಂದ್ಯ 2: ಗೇಮ್ ಚೇಂಜರ್ಸ್ ಫಾಲ್ಕನ್ಸ್ vs ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್

ಡೇ 4 | ಡಿಸೆಂಬರ್ 20
• ಫೈನಲ್ ಪಂದ್ಯ

ಮೊದಲ ದಿನ VB ರಿಯಾಲ್ಟಿ ಹಾಕ್ಸ್ ಮತ್ತು ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ ನಡುವಿನ ಕಾದಾಟದಿಂದ ಟೂರ್ನಮೆಂಟ್ ಪ್ರಾರಂಭವಾಗಲಿದೆ. ನಂತರ AOS ಈಗಲ್ಸ್ ತಂಡ ಹಾಲಿ ಚಾಂಪಿಯನ್‌ಗಳಾದ ಗೇಮ್ ಚೇಂಜರ್ಸ್ ಫಾಲ್ಕನ್ಸ್ ವಿರುದ್ಧ ಮೈದಾನಕ್ಕಿಳಿಯಲಿದೆ.

2ನೇ ದಿನದಲ್ಲಿ ಬೆಳಗ್ಗೆ ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್–AOS ಈಗಲ್ಸ್ ಮುಖಾಮುಖಿಯಾಗಲಿದ್ದು, ಸಂಜೆ ಗೇಮ್ ಚೇಂಜರ್ಸ್ ಫಾಲ್ಕನ್ಸ್–VB ರಿಯಾಲ್ಟಿ ಹಾಕ್ಸ್ ನಡುವೆ ರೋಚಕ ಪೈಪೋಟಿ ನಡೆಯಲಿದೆ. ಆ ದಿನ ಮೆಡ್ವೆದೇವ್, ಬೋಪಣ್ಣ, ಶಪೋವಾಲೋವ್ ಹಾಗೂ ಸ್ವಿಟೋಲಿನಾ ಮುಂತಾದ ತಾರೆಗಳು ಕಣಕ್ಕಿಳಿಯಲಿದ್ದಾರೆ.

3ನೇ ದಿನ AOS ಈಗಲ್ಸ್ ಮತ್ತು VB ರಿಯಾಲ್ಟಿ ಹಾಕ್ಸ್ ನಡುವಿನ ಪಂದ್ಯ ಉತ್ಸಾಹ ತರುವಂತದ್ದು. ನಂತರ ಗೇಮ್ ಚೇಂಜರ್ಸ್ ಫಾಲ್ಕನ್ಸ್ ಮತ್ತು ಅಸ್ಸಿ ಮ್ಯಾವೆರಿಕ್ಸ್ ಕೈಟ್ಸ್ ನಡುವಿನ ಪೈಪೋಟಿ ಸ್ಫೂರ್ತಿದಾಯಕವಾಗಲಿದೆ. ಡಿಸೆಂಬರ್ 20ರಂದು ಗ್ರ್ಯಾಂಡ್ ಫೈನಲ್ ನಡೆಯಲಿದೆ.

Related Posts

Leave a Reply

Your email address will not be published. Required fields are marked *