ಆಲ್ ರೌಂಡರ್ ದೀಪ್ತಿ ಶರ್ಮ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 3.2 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ದೆಹಲಿಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ದೀಪ್ತಿ ಶರ್ಮಾ ಅವರನ್ನು 3.2 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ಖರೀದಿಸಿದೆ.
ದೀಪ್ತಿ ಶರ್ಮ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ನಡುವೆ ಪೈಪೋಟಿ ಏರ್ಪಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ಮೂಲಧನವಾದ 50 ಲಕ್ಷ ರೂ.ನಿಂದ ಆರಂಭಿಸಿತು. ಈ ವೇಳೆ ಯುಪಿ ವಾರಿಯರ್ಸ್ ಆರ್ ಟಿಎಂ ಕಾರ್ಡ್ ಬಳಸಿ ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿತು.
ಆದರೆ ನಂತರ ನಡೆದ ಹೈಡ್ರಾಮಾದಲ್ಲಿ ಹರಾಜು ಮೊತ್ತಕ್ಕೆ ಪೈಪೋಟಿ ಏರ್ಪಟ್ಟಿದ್ದರಿಂದ 3.2 ಕೋಟಿ ರೂ.ವರೆಗೂ ತಲುಪಿತು. ಈ ನಾಟಕೀಯ ಬೆಳವಣಿಗೆಯಿಂದ ಸ್ವತಃ ಸೌರವ್ ಗಂಗೂಲಿ ಕೂಡ ಅಚ್ಚರಿ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ ಆಲ್‌ರೌಂಡರ್‌ಗಳಾದ ಸೋಫಿ ಡಿವೈನ್ (2 ಕೋಟಿ ರೂ.) ಮತ್ತು ಅಮೆಲಿಯಾ ಕೆರ್ (3 ಕೋಟಿ ರೂ.) ಕೂಡಾ ಹೆಚ್ಚಿನ ಬೆಲೆಗೆ ಮಾರಾಟವಾದರು. ಸೋಫಿ ಡಿವೈನ್ ಅವರನ್ನು 2 ಕೋಟಿ ರೂಗೆ ಗುಜರಾತ್ ಟೈಟನ್ಸ್ ( Gujarat Giants) ಖರೀದಿಸಿತು. 3 ಕೋಟಿಗೆ ಅಮೆಲಿಯಾ ಕೆರ್ ಮುಂಬೈ ಇಂಡಿಯನ್ಸ್ (MI) ಪಾಲಾದರು.
ಅನುಭವಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಗಳಾದ ಮೆಗ್ ಲ್ಯಾನಿಂಗ್ ಅವರನ್ನು UPW ಖರೀದಿಸಿತು. ಆದರೆ ಅಲಿಸಾ ಹೀಲಿ ಮಾರಾಟವಾಗಲಿಲ್ಲ.


