ನವದೆಹಲಿ: ಭಾರತವು ಪಾಕಿಸ್ತಾನದೊಂದಿಗೆ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ಕೆಲವು ದಿನಗಳ ನಂತರ, ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಅಜಯ್ ಬಂಗಾ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ದಾಳಿ ನಡೆಸಿ 100 ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ. ಇದೀಗ ಭಾರತ ಪಾಕಿಸ್ತಾನದ ಮೇಲೆ ಆರ್ಥಿಕ ನಿರ್ಬಂಧ ಹೇರಲು ಪ್ರಯತ್ನಿಸುತ್ತಿದೆ. ಭಾರತ ಗುರುವಾರ ಪಾಕಿಸ್ತಾನದಲ್ಲಿನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಹೊಡೆದುರುಳಿಸುವ ಮೂಲಕ ಮತ್ತೆ ಆಪರೇಷನ್ ಶುರು ಮಾಡಿದೆ.
ಒಂದು ದಿನದ ಪ್ರವಾಸದ ಸಂದರ್ಭದಲ್ಲಿ, ವಿಶ್ವಬ್ಯಾಂಕ್ ಅಧ್ಯಕ್ಷರು ಗುರುವಾರ ಬೆಳಿಗ್ಗೆ ದೆಹಲಿಯಿಂದ ಲಕ್ನೋಗೆ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಅವರ ಸಮ್ಮುಖದಲ್ಲಿ ಪಾಲುದಾರರೊಂದಿಗೆ ದುಂಡುಮೇಜಿನ ಚರ್ಚೆ ಸೇರಿದಂತೆ ಹೋಟೆಲ್ ತಾಜ್‌ನಲ್ಲಿ ಸರಣಿ ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ನಂತರ, ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಅವರ ನಿವಾಸದಲ್ಲಿ ಚರ್ಚೆ ನಡೆಯಲಿದೆ. ಲಕ್ಕೋದಲ್ಲಿ ತಮ್ಮ ಕಾರ್ಯಕ್ರಮಗಳ ನಂತರ, ವಿಶ್ವಬ್ಯಾಂಕ್ ಅಧ್ಯಕ್ಷರು ಚಿನ್ಹಾಟ್ ಬ್ಲಾಕ್‌ನಲ್ಲಿರುವ ಟೇಕ್-ಹೋಮ್ ರೇಷನ್ ಸ್ಥಾವರಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಸ್ಥಾವರದ ಕಾರ್ಯಾಚರಣೆಗಳನ್ನು ಪರಿಶೀಲಿಸಲಿದ್ದಾರೆ.