ಚೆನ್ನೈ : ಭಾರತದ ಅತಿದೊಡ್ಡ ಮನೋರಂಜನಾ ಉದ್ಯಾನವನ ಸರಪಳಿಯಾದ ವಂಡರ್‌ಲಾ ಹಾಲಿಡೇಸ್, ಇಂದು ತನ್ನ ಐದನೇ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಉದ್ಯಾನವನ ಯೋಜನೆಯಾದ ವಂಡರ್‌ಲಾ ಚೆನ್ನೈ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, ಇದು ಭಾರತದ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಲ್ಯಾಂಡ್‌ಸ್ಕೇಪ್ ಭವಿಷ್ಯದ ಮೈಲಿಗಲ್ಲಾಗಿದೆ.
ಚೆನ್ನೈನ ಸುಂದರವಾದ ಹಳೆಯ ಮಹಾಬಲಿಪುರಂ ರಸ್ತೆಯ ಉದ್ದಕ್ಕೂ 64.30 ಎಕರೆಗಳಷ್ಟು (ಇದರಲ್ಲಿ 37 ಎಕರೆಗಳನ್ನು ಪ್ರಸ್ತುತ ಅಭಿವೃದ್ಧಿಪಡಿಸಲಾಗಿದೆ) ವ್ಯಾಪಿಸಿರುವ ಮತ್ತು ರೂ. 611 ಕೋಟಿಗಳಿಗೂ ಹೆಚ್ಚು ಹೂಡಿಕೆಯೊಂದಿಗೆ ನಿರ್ಮಿಸಲಾದ ವಂಡರ್‌ಲಾ ಚೆನ್ನೈ, ಭವಿಷ್ಯದ ನಾವೀನ್ಯತೆ ಮತ್ತು ಪ್ರಾಚೀನ ತಮಿಳು ವಾಸ್ತುಶಿಲ್ಪದ ಸಮ್ಮಿಲನವನ್ನು ಸಂಯೋಜಿಸುವ ದಿಟ್ಟ ಹೊಸ ಅಧ್ಯಾಯವನ್ನು ಪ್ರತಿನಿಧಿಸುತ್ತದೆ. ಪಾರ್ಕ್ ಅನ್ನು 2025 ಡಿಸೆಂಬರ್ 1ರಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಇತರ ಮುಖ್ಯ ಗಣ್ಯರಿಂದ ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ ಮತ್ತು 2025 ಡಿಸೆಂಬರ್ 2ರಂದು ಸಾರ್ವಜನಿಕರಿಗೆ ತೆರೆಯಲಾಗುತ್ತದೆ.
ಅರುಣ್ ಕೆ. ಚಿಟ್ಟಿಲಪ್ಪಿಲ್ಲಿ (ಕಾರ್ಯನಿರ್ವಾಹಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು), ಧೀರನ್ ಚೌಧರಿ (ಸಿಒಒ), ಅಜಿಕೃಷ್ಣನ್ ಎ ಜಿ (ವಿಪಿ-ಎಂಜಿನಿಯರಿಂಗ್) ಮತ್ತು ವೈಶಾಖ್ ರವೀಂದ್ರನ್ (ಪಾರ್ಕ್ ಹೆಡ್ – ಚೆನ್ನೈ) ಅವರು ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆಯನ್ನು ಮಾಡಿದರು.
ವಂಡರ್‌ಲಾ ಚೆನ್ನೈ ಹೈ ಥ್ರಿಲ್, ಕುಟುಂಬ, ಮಕ್ಕಳು ಮತ್ತು ನೀರಿನ ವಿಭಾಗಗಳಲ್ಲಿ 43 ವಿಶ್ವ ದರ್ಜೆಯ ಸವಾರಿಗಳನ್ನು ಹೊಂದಿದ್ದು, ಇವುಗಳನ್ನು ಪ್ರತಿದಿನ 6,500 ಸಂದರ್ಶಕರಿಗೆ ಮನರಂಜನೆ ಒದಗಿಸಲು ನಿರ್ಮಿಸಲಾಗಿದೆ. ವಂಡರ್‌ಲಾ ಚೆನ್ನೈನ ಟಿಕೆಟ್‌ಗಳು ₹1,489 ಮೂಲ ಬೆಲೆಯಿಂದ ಪ್ರಾರಂಭವಾಗುತ್ತವೆ, ಆನ್‌ಲೈನ್ ಬುಕಿಂಗ್‌ಗಳಿಗೆ 10% ರಿಯಾಯಿತಿ ಲಭ್ಯವಿದೆ ಮತ್ತು ಮಾನ್ಯ ಐಡಿಯನ್ನು ಪ್ರಸ್ತುತಪಡಿಸುವ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚುವರಿ 20% ರಿಯಾಯಿತಿ ಜೊತೆಗೆ ಗುಂಪುಗಳು ಮತ್ತು ಋತುಗಳಿಗೆ ಇತರ ಕ್ಯುರೇಟೆಡ್ ಕೊಡುಗೆಗಳನ್ನು ನೀಡಲಾಗುತ್ತದೆ.
ವಂಡರ್‌ಲಾ ಹಾಲಿಡೇಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಕೆ ಚಿಟ್ಟಿಲಪ್ಪಿಲ್ಲಿ,” “ವಂಡರ್‌ಲಾ ಚೆನ್ನೈ ಒಂದು ದಶಕದ ಕನಸಿನ ಪರಾಕಾಷ್ಠೆಯಾಗಿದ್ದು, ತಮಿಳುನಾಡು ಸರ್ಕಾರದ ನಿರಂತರ ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿ ಇದನ್ನು ಸಾಧಿಸುವುದು ಸಾಧ್ಯವಾಗಿದೆ. ಭಾರತದ ಅತ್ಯಂತ ಮುಂದುವರಿದ ಮತ್ತು ತಲ್ಲೀನಗೊಳಿಸುವ ಮನೋರಂಜನಾ ಉದ್ಯಾನವನ ಎಂಬ ನಮ್ಮ ನಂಬಿಕೆಯನ್ನು ನಾವು ರಚಿಸಿದ್ದೇವೆ. ವಂಡರ್‌ಲಾ ಚೆನ್ನೈ ನಿಜವಾಗಿಯೂ ತಮಿಳುನಾಡಿನ ಜನರಿಗೆ ಸೇರಿದ್ದು ಅವರ ಸೃಜನಶೀಲತೆ, ಸಂಸ್ಕೃತಿ ಮತ್ತು ವಾತ್ಸಲ್ಯವನ್ನು ಪ್ರತಿಫಲಿಸಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ಉದ್ಯಾನದ ಪ್ರತಿಯೊಂದು ಮೂಲೆಯೂ ಅದರ ದೇವಾಲಯ-ಪ್ರೇರಿತ ವಿನ್ಯಾಸದಿಂದ ಹಿಡಿದು ಅದರ ಅಧಿಕೃತ ಸ್ಥಳೀಯ ವಿಶಿಷ್ಟಗುಣಗಳವರೆಗೆ ಆ ಕಥೆಯನ್ನು ಹೇಳುತ್ತದೆ. ಈ ಅನಾವರಣ ದಕ್ಷಿಣ ಭಾರತದಾದ್ಯಂತ ನಮ್ಮ ಉಪಸ್ಥಿತಿಗೆ ಕಾರಣವಾಗುವುದಲ್ಲದೇ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಕ್ಕಾಗಿ ತಮಿಳುನಾಡಿನ ಪ್ರಗತಿಪರ ದೃಷ್ಟಿಕೋನಕ್ಕೆ ನಮ್ಮ ಪ್ರಬಲ ಮೆಚ್ಚುಗೆಯನ್ನು ಪ್ರತಿಫಲಿಸುತ್ತದೆ” ಎಂದು ಹೇಳಿದರು.
“ವಂಡರ್‌ಲಾ ಚೆನ್ನೈ ಉದ್ಘಾಟಿಸುವ ಮೂಲಕ ವಂಡರ್‌ಲಾದ ಸುರಕ್ಷತೆ, ನಾವೀನ್ಯತೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸಲು ನಾವು ಹೆಮ್ಮೆಪಡುತ್ತೇವೆ. ರೈಡ್ ಕಾರ್ಯಾಚರಣೆಗಳು ಮತ್ತು ಅತಿಥಿ ಸೇವೆಗಳಿಂದ ಹಿಡಿದು ನೈರ್ಮಲ್ಯ ಮತ್ತು ಜನಸಂದಣಿ ನಿರ್ವಹಣೆಯವರೆಗೆ ಉದ್ಯಾನವನದ ಪ್ರತಿಯೊಂದು ಅಂಶವನ್ನು ತಡೆರಹಿತ ಅನುಭವವನ್ನು ನೀಡಲು ಸಾಧ್ಯವಾಗುವಂತೆ ನಿಖರವಾಗಿ ಯೋಜಿಸಲಾಗಿದೆ.
ರೈಡ್‌ಗಳು ಮತ್ತು ಆಕರ್ಷಣೆಗಳಷ್ಟೇ ಅಲ್ಲದೇ ವಂಡರ್‌ಲಾ ಚೆನ್ನೈನ ಆಚರಣೆಯ ತಾಣವಾಗಬೇಕು ನಮ್ಮ ಅಪೇಕ್ಷೆಯಾಗಿದೆ, ಕುಟುಂಬಗಳು ಮತ್ತು ಸಮುದಾಯಗಳು ಹಬ್ಬಗಳು, ಮೈಲಿಗಲ್ಲುಗಳನ್ನು ಸಂಭ್ರಮಿಸುವ ಮತ್ತು ಹಂಚಿಕೊಳ್ಳುವ ಸ್ಥಳವಾಗಬೇಕೆನ್ನುವುದು ನಮ್ಮ ಅಪೇಕ್ಷೆಯಾಗಿದೆ. ಆಲೋಚನಾಪೂರ್ಣವಾಗಿ ವಿನ್ಯಾಸಗೊಳಿಸಲಾದ ಮೌಲ್ಯಯುತ ಕೊಡುಗೆಗಳು, ಕ್ಯುರೇಟೆಡ್ ಕಾಲೋಚಿತ ಕಾರ್ಯಕ್ರಮಗಳು ಮತ್ತು ಪ್ರವೇಶಿಸಬಹುದಾದ ಬೆಲೆಗಳೊಂದಿಗೆ, ತಮಿಳುನಾಡಿನಲ್ಲಿ ಪ್ರತಿಯೊಬ್ಬರ ಕ್ಯಾಲೆಂಡರ್‌ನ ಭಾಗವಾಗಿ ವಿಶ್ವ ದರ್ಜೆಯ ಮನರಂಜನೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ” ಎಂದು ವಂಡರ್‌ಲಾ ಹಾಲಿಡೇಸ್‌ನ ಸಿಒಒ ಧೀರನ್ ಚೌಧರಿ ಹೇಳಿದರು.


