ಬೆಂಗಳೂರು: ದೇಶದ ಅತಿದೊಡ್ಡ ಮನರಂಜನಾ ಪಾರ್ಕ್ ಸರಪಳಿಯಾದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ 25 ವರ್ಷ ಪೂರೈಸುತ್ತಿರುವ ಸಮಯದಲ್ಲಿ ದೇಶದ ಅತಿದೊಡ್ಡ ಎಲ್ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ‘ಮಿಷನ್ ಇಂಟರ್ ಸ್ಟೆಲ್ಲಾರ್’ ಅನಾವರಣಗೊಳಿಸಿದೆ
ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿರುವ ಮಿಷನ್ ಇಂಟರ್ ಸ್ಟೆಲ್ಲಾರ್ ಅನ್ನು ಬೆಂಗಳೂರಿನ ವಂಡರ್ ಲಾದಲ್ಲಿ ಪರಿಚಯಿಸಿದ್ದು, ನಟಿ ಆಶಿಕಾ ರಂಗನಾಥ್ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಧ್ಯಕ್ಷ ಮತ್ತು ಎಂಡಿ ಅರುಣ್ ಕೆ ಚಿಟ್ಟಿಲಪ್ಪಿಲ್ಲಿ, ಸಿಒಒ ಧೀರನ್ ಚೌಧರಿ, ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ನ ಬೆಂಗಳೂರು ಪಾರ್ಕ್ ಮುಖ್ಯಸ್ಥ ರುದ್ರೇಶ್ ಎಚ್ ಎಸ್ ಉಪಸ್ಥಿತರಿದ್ದರು.
ಈ ಬಗ್ಗೆ ಮಾತನಾಡಿದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಂಡಿ ಅರುಣ್ ಕೆ.ಚಿಟ್ಟಿಲಪ್ಪಿಲ್ಲಿ, “ಮಿಷನ್ ಇಂಟರ್ ಸ್ಟೆಲ್ಲಾರ್ ನೊಂದಿಗೆ, ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಉತ್ಸಾಹದೊಂದಿಗೆ ತಡೆರಹಿತವಾಗಿ ಬೆರೆಸುವ ಅದ್ಭುತ ಮನರಂಜನೆಯ ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ. ಮಿಷನ್ ಇಂಟರ್ ಸ್ಟೆಲ್ಲಾರ್ ವಿಶ್ವ ದರ್ಜೆಯ ಅನುಭವಗಳನ್ನು ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ವರ್ಷ ವಂಡರ್ ಲಾದ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ತಂತ್ರಜ್ಞಾನದ ಅನುಭವ ಪರಿಚಯಿಸಲು ಸಂತೋಷವಾಗುತ್ತಿದೆ ಎಂದರು.
ಮಿಷನ್ ಇಂಟರ್ ಸ್ಟೆಲ್ಲಾರ್ ವಿಶೇಷತೆಗಳು
3500 ಚದರ ಅಡಿ ವಿಸ್ತೀರ್ಣದ ಆವರಣದಲ್ಲಿ ನಿರ್ಮಿಸಲಾಗಿರುವ 22 ಮೀ.x15 ಮೀ. ವಿಸ್ತೀರ್ಣದ ಎಲ್ ಇಡಿ ಪರದೆ ಮೇಲೆ ದೃಶ್ಯ ವೈಭವ ಮೆರೆಯಲಿದೆ.
ಇಟಲಿಯಿಂದ ಆಮದು ಮಾಡಿಕೊಳ್ಳಲಾದ 60 ಅತಿಥಿಗಳಿಗೆ ಹೈಡ್ರಾಲಿಕ್ ಲಿಫ್ಟ್ ಆಸನ ವ್ಯವಸ್ಥೆಯು ಸವಾರರನ್ನು 40 ಅಡಿ ಎತ್ತರಕ್ಕೆ ಕೊಂಡೊಯ್ದು ಬಾಹ್ಯಾಕಾಶದ ದೃಶ್ಯ ವೈಭವ ಆನಂದಿಸಲಿದ್ದಾರೆ. ಹೈಟೆಕ್ ಲೇಸರ್ ಪ್ರೊಜೆಕ್ಷನ್ ಗಳೊಂದಿಗೆ ಚಲನೆಯನ್ನು ಸಿಂಕ್ರೊನೈಸ್ ಮಾಡಲಾಗಿದ್ದು, ಅಮೆರಿಕದ ಲಾಸ್ ಏಂಜಲಿಸ್ ನಲ್ಲಿ ರೂಪಿಸಲಾಗಿದೆ.
ಶಕ್ತಿಯುತ ಧ್ವನಿ ವ್ಯವಸ್ಥೆ: 46,000-ವ್ಯಾಟ್ ಧ್ವನಿ ವ್ಯವಸ್ಥೆಯು ಬಹುಸಂವೇದನಾ ಅನುಭವ. ಬಾಹ್ಯಾಕಾಶ ಪ್ರಯಾಣದ ವಾಸ್ತವಿಕತೆ
ವಾಸ್ತುಶಿಲ್ಪದ ಅದ್ಭುತ: 23 ಮೀಟರ್ ಎತ್ತರದ ಛಾವಣಿಯೊಂದಿಗೆ 8 ಅಂತಸ್ತಿನ ಗುಮ್ಮಟ ಆಕಾರದ ಕಟ್ಟಡದೊಳಗೆ ಅದ್ಭುತ ದೃಶ್ಯ
ಆರಾಮ ಮತ್ತು ಅನುಕೂಲತೆ: ಪೂರ್ವವೀಕ್ಷಣೆ ಹಾಲ್ ಮತ್ತು ಕ್ಯೂ ಪ್ರದೇಶದೊಂದಿಗೆ 6500 sq. ft. ಹವಾನಿಯಂತ್ರಿತ ಸ್ಥಳವು ಅತಿಥಿಗಳ ಆರಾಮವನ್ನು ಖಚಿತಪಡಿಸುತ್ತದೆ.