ಮುಂಬರುವ ದಿನಗಳಲ್ಲಿ ಶೇ. 90ರಷ್ಟು ಉದ್ಯೋಗಾವಕಾಶಗಳು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ದೊರೆಯುವ ಸಾಧ್ಯತೆಗಳಿರುವುದರಿಂದ ಮಹಿಳೆಯರಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅಗತ್ಯವಿರುವ ಕೌಶಲ ಗಳನ್ನು ಒದಗಿಸಲು ಕಾರ್ಯಯೋಜನೆಗಳನ್ನು ಸಿದ್ಧಪಡಿಸಬೇಕಾಗಿದೆ. ಮೇಡಂ ಮೇರಿ ಕ್ಯೂರಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆಯಾಗಿದ್ದಾರೆ. ಎಲಿಜಬೆತ್ ಬ್ರಾಗ್ ಅವರು ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಮಹಿಳೆ. ಅವರು ಬಕ್ಲಿರ್ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
ವಿಜ್ಞಾನದಲ್ಲಿ ಮಹಿಳೆಯರ ಮತ್ತು ಬಾಲಕಿಯರ ಗಮನಾರ್ಹ ಸಾಧನೆಗಳನ್ನು ಗೌರವಿಸಲು ಮತ್ತು ವಿಜ್ಞಾನ – ತಂತ್ರ ಜ್ಞಾನ, ಎಂಜಿನಿಯರಿಂಗ್-ಗಣಿತ ವಿಷಯಗಳಲ್ಲಿ ಆಸಕ್ತಿ ಇರುವವರನ್ನು ಆ ಕ್ಷೇತ್ರದಲ್ಲಿ ಉನ್ನತ ಸಾಧನೆಗೆ ಪ್ರೋತ್ಸಾಹಿ ಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ ೧೧ರಂದು ಜಗತ್ತಿನಾದ್ಯಂತ ವಿಜ್ಞಾನದಲ್ಲಿ ಮಹಿಳಾ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.
ಇಡೀ ವಿಶ್ವ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕೆಂದರೆ ಲಿಂಗ ಸಮಾನತೆಯತ್ತ ಒತ್ತು ಕೊಡುವುದರ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಬಾಲಕಿಯರನ್ನು ಒಳಗೊಳ್ಳುವ ಯೋಜನೆಗಳನ್ನು ರೂಪಿಸಿ, ಅದನ್ನು ಕಾರ್ಯಗತ ಗೊಳಿಸಲು ಶ್ರಮಿಸಬೇಕಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದು ಎಷ್ಟು ಸತ್ಯವೋ, ಮಹಿಳೆ ಯೊಬ್ಬಳು ವಿಜ್ಞಾನದಲ್ಲಿ ತನ್ನನ್ನು ತೊಡಗಿಸಿಕೊಂಡರೆ ಪ್ರಯೋಗಾಲಯವೊಂದು ತೆರೆದಂತೆ ಎಂಬುದು ಕೂಡಾ ಅಷ್ಟೇ ಕಟುಸತ್ಯ.
ಆ ಒಂದು ಪ್ರಯೋಗಾಲಯ ಸಾವಿರಾರು ಮಹಿಳೆಯರು ವಿಜ್ಞಾನದಲ್ಲಿ ಆಸಕ್ತಿ ಹೊಂದಲು ಹಾಗೂ ಸಂಶೋಧನೆ ಕೈಗೊಳ್ಳಲು ಸ್ಫೂರ್ತಿ ನೀಡುವುದರ ಮೂಲಕ ಮಹಿಳಾ ವಿಜ್ಞಾನಿಗಳ ಅದ್ಭುತವಾದ ಲೋಕವನ್ನೇ ಸೃಷ್ಟಿಸಿದಂತಾ ಗುವುದು. ಇಪ್ಪತೊಂದನೇ ಶತಮಾನದ ಅಗಾಧವಾದ ಸವಾಲುಗಳನ್ನು ಎದುರಿಸುವುದು ಸಾಧ್ಯವಾಗಬೇಕಾದರೆ ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದ ಮಾತ್ರ ಸಾಧ್ಯ. ವಿಶ್ವಕ್ಕೆ ವಿಜ್ಞಾನವೆಂಬುದು ಎಷ ಅಗತ್ಯವೋ, ಅಷ್ಟೇ ಅಗತ್ಯ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರನ್ನು ವ್ಯಾಪಕವಾಗಿ ತೊಡಗಿಸಿಕೊಳ್ಳುವುದು. ವಿಶ್ವವನ್ನು ಕಾಡುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳಿಗೆ ಮಹಿಳೆಯರನ್ನು ವಿಜ್ಞಾನದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಪರಿಹಾರ ಕಂಡುಹಿಡಿಯಬಹುದಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾವಂತ ಮಹಿಳೆಯರಿದ್ದರೂ, ಅವರಿಗೆ ಕೆಲವು ಮೂಲಭೂತ ಸೌಕರ್ಯಗಳ ಕೊರತೆಗಳಿಂದಾಗಿ, ವಿಜ್ಞಾನ ಕಲಿಯಬೇಕೆಂದರೆ ದೂರದ ನಗರ ಪ್ರದೇಶಗಳಿಗೆ ಹೋಗಬೇಕೆಂಬ ಅನಿವಾರ್ಯತೆ ಗಳಿಂದಾಗಿ ಅವರು ವಿಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವು ಕಾರಣಗಳನ್ನು ನೋಡಲಾಗಿ ವಿಜ್ಞಾನ ಸಂಶೋಧನೆಗಳು ದೀರ್ಘಕಾಲದವುಗಳು ಎಂಬ ತಪ್ಪು ಕಲ್ಪನೆಗಳಿಂದ, ಕುಟುಂಬ ನಿರ್ವಹಣೆಯ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಮಹಿಳೆಯರ ಹೆಗಲ ಮೇಲೆ ಹೇರುವುದರಿಂದ ಅವರು ಸಂಶೋಧನೆಗಳಿಂದ ವಿಮುಖರಾಗುತ್ತಿರುವುದು ಕೂಡಾ ನೋವಿನ ಸಂಗತಿ. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಯೆಂದರೆ ಅದು ಕೇವಲ ಆಧುನಿಕ ಉಪಕರಣಗಳ ಬಳಕೆಯಷ್ಟೇ ಅಲ್ಲ. ಮಹಿಳೆಯರಿಗೂ ಪುರುಷರಿಗೆ ಸರಿ ಸಮನಾಗಿ ವಿಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಂಪೂರ್ಣವಾಗಿ ಮುಕ್ತ ಅವಕಾಶ ಒದಗಿಸುವುದು ಪ್ರತಿ ಯೊಬ್ಬರ ಆದ್ಯ ಕರ್ತವ್ಯ ಎಂಬುದನ್ನು ಅರ್ಥೈಸಿಕೊಂಡು ಆ ನಿಟ್ಟಿನಲ್ಲಿ ಪ್ರಾಮಾಣಿಕವಾದ ಕೆಲಸಗಳಾದಾಗ ಮಾತ್ರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಿಜವಾದ ಅಭಿವೃದ್ಧಿ ಎಂಬುದನ್ನು ಒಪ್ಪಿಕೊಳ್ಳಬಹುದಾಗಿದೆ.
ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅಗತ್ಯವಿರುವ ಕೌಶಲ ಗಳನ್ನು ಒದಗಿಸಲು ಕಾರ್ಯಯೋಜನೆಗಳನ್ನು ಸಿದ್ಧಪಡಿಸಬೇಕಾಗಿದೆ. ಮೇಡಂ ಮೇರಿ ಕ್ಯೂರಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆಯಾಗಿದ್ದಾರೆ. ಎಲಿಜಬೆತ್ ಬ್ರಾಗ್ ಅವರು ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಮಹಿಳೆ. ಅವರು ಬಕ್ಲಿರ್ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಕ್ಯಾಥರೀನ್ ಜಾನ್ಸನ್ ನಾಸಾಗೆ ಆರ್ಬಿಟಲ್ ಮೆಕ್ಯಾನಿಕ್ಸ್ ಅನ್ನು ಲೆಕ್ಕಾಚಾರ ಮಾಡುವ ಗಣಿತಜ್ಞೆಯಾಗಿದ್ದರು. ಲಿಲಿಯನ್ ಗಿಲ್ಬ್ರೆತ್ ಇವರು ಮೊದಲ ಕೈಗಾರಿಕಾ/ಸಾಂಸ್ಥಿಕೆ ಮನಶಾಸ್ತ್ರಜ್ಞೆ ಮತ್ತು ಅಮೆರಿಕದ ಮೊದಲ ಎಂಜಿನಿಯರಿಂಗ್ ಮಹಿಳೆ. ಪಿಎಚ್ಡಿ ಗಳಿಸಿದ ಮೊದಲ ಅಮೆರಿಕನ್ ಮಹಿಳಾ ಎಂಜಿನಿಯರ್ಗಳಲ್ಲಿ ಒಬ್ಬರು. ಪಡ್ಯೂರ್ ವಿಶ್ವವಿದ್ಯಾಲಯದ ಮೊದಲ ಮಹಿಳಾ ಎಂಜಿನಿಯರಿಂಗ್ ಪ್ರಾಧ್ಯಾಪಕಿಯಾಗಿದ್ದಾರೆ. ರುತ್ ಬೆನೆರಿಟೊ ಇವರು ಒಬ್ಬ ಅಮೆರಿಕನ್ ರಸಾಯನಶಾಸ್ತ್ರಜ್ಞೆ. ಒಟ್ಟು ೫೫ ಪೇಟೆಂಟ್ಗಳನ್ನು ಹೊಂದಿರುವ ಸಂಶೋಧಕಿಯೂ ಹೌದು. ಎಡಿತ್ ಕ್ಲಾರ್ಕ ಇವರು ಎಲೆಕ್ಟ್ರಿಕ್ ಎಂಜಿನಿಯರ್ ಆಗಿ ವೃತ್ತಿಪರ ಉದ್ಯೋಗಿ ಯಾದ ಮೊದಲ ಅಮೆರಿಕನ್ ಮಹಿಳೆ ಮತ್ತು ಅಮೆರಿಕದ ಮೊದಲ ಮಹಿಳಾ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪ್ರಾಧ್ಯಾಪಕ ರಾದರು.
ಈ ದಿನ ಹೇಗೆ ಆಚರಿಸಬಹುದು?
ವಿಜ್ಞಾನಕ್ಕೆ ಮಹಿಳೆಯರ ಕೊಡುಗೆಗಳನ್ನು ತಿಳಿದುಕೊಳ್ಳುವುದು- ಜೀವನದುದ್ದಕ್ಕೂ ಹಲವಾರು ರೀತಿಯ ಹೋರಾಟ ಗಳನ್ನು ನಡೆಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಶೋಧನಗೆಳ ಮೂಲಕ ಗುರುತಿಸಿ ಕೊಂಡಿರುವ ಮಹಿಳೆಯರ ಕೊಡುಗೆಗಳನ್ನು ಸ್ಮರಿಸುವುದು ಹಾಗೂ ಅವುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುವುದು. ತನ್ನ ಶೈಕ್ಷಣಿಕ ಉತ್ಸಾಹವನ್ನು ಹುಡುಕಲು ಬಾಲಕಿಯರನ್ನು ಪ್ರೋತ್ಸಾಹಿ ಸುವುದು- ಬಾಲಕಿಯರಿಗೆ ವಿಜ್ಞಾನ-ತಂತ್ರಜ್ಞಾನ, ಎಂಜಿನಿಯರಿಂಗ್- ಗಣಿತದಲ್ಲಿ ಅವರ ಆಸಕ್ತಿ ಗುರುತಿಸಿ, ಅವರಿಗೆ ಆ ಕ್ಷೇತ್ರದಲ್ಲಿ ಉನ್ನತವಾದ ಸಾಧನೆಗೈಯಲು ಪ್ರೋತ್ಸಾಹಿಸುವುದು ಕೂಡಾ ತುಂಬಾ ಮಹತ್ವದ್ದು. ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾದರೆ ಜಗತ್ತಿನಲ್ಲಿ ಆಗಬಹುದಾದ ಮಹತ್ತರ ಬದಲಾವಣೆಗಳ ಕುರಿತು ಯೋಚಿಸುವುದು.
ವಿಜ್ಞಾನದಲ್ಲಿ ಮಹಿಳಾ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನ ಏಕೆ ಮುಖ್ಯ?
ವಿಜ್ಞಾನದಲ್ಲಿ ಲಿಂಗ ಸಮಾನತೆ ಉತ್ತೇಜಿಸುವ ಜಾಗತಿಕ ಉಪಕ್ರಮವಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲಕಿಯರಿಗೆ ಅವರ ಚಿಕ್ಕ ವಯಸ್ಸಿನಲ್ಲಿಯೇ ವಿಜ್ಞಾನ-ತಂತ್ರಜ್ಞಾನ, ಎಂಜಿನಿಯರಿಂಗ್-ಗಣಿತ ವಿಷಯಗಳಲ್ಲಿ ಆಸಕ್ತಿಯನ್ನು ಗುರುತಿಸಲು, ಅಭಿವೃದ್ಧಿಪಡಿಸಲು ಕೂಡ ಜಾಗೃತಿಯನ್ನು ಮೂಡಿಸುತ್ತದೆ. ಅಂತಾರಾಷ್ಟ್ರೀಯ ವಿಜ್ಞಾನ ಸಮುದಾಯದೊಳಗೆ ಬೆಳೆಯಲು ಅವಕಾಶ ಕಲ್ಪಿಸಿಕೊಡುವುದು.
– ರಾಜು ಭೂಶೆಟ್ಟಿ
ಲೇಖಕ, ಹುಬ್ಬಳ್ಳಿ