Thursday, January 30, 2025
Menu

ಕಿಡ್ನಿ ಮಾರಿ ಬಂದ ಹಣಕ್ಕಾಗಿ ಮಹಿಳೆಯರಿಗೆ ಬೆದರಿಕೆ

ಮಾಗಡಿ : ಕಳೆದ ಮೂರು ವರ್ಷಗಳ ಹಿಂದೆ ಪಟ್ಟಣದ ತಿರುಮಲೆ ನಿವಾಸಿ ಗೀತಾ ಹಾಗೂ ಶಾಂತ ಎಂಬುವರು ಹಣಕಾಸಿನ ಸಮಸ್ಯೆಯಿಂದ ತಮ್ಮ ಕಿಡ್ನಿ ಮಾರಾಟ ಮಾಡಿದ್ದು ಈಗ ಕಿಡ್ನಿ ಮಾರಾಟ ಮಾಡಲು ಸಹಾಯ ಮಾಡಿದ ಪಟ್ಟಣದ ಜ್ಯೋತಿನಗರದ ಮಂಜುನಾಥ್ ಎಂಬುವರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ತಿರುಮಲೆ ನಿವಾಸಿ ಗೀತಾ ರವರ ಗಂಡ ಕಳೆದ 11 ವರ್ಷಗಳ ಹಿಂದೆ ನರಸಿಂಹಯ್ಯ ಸಾವನ್ನಪ್ಪಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರಿಗೂ ಮದುವೆ ಮಾಡಲಾಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ಕಷ್ಟ ಇದ್ದ ಹಿನ್ನೆಲೆಯಲ್ಲಿ ಮೂರು ವರ್ಷದ ಹಿಂದೆ ಕಿಡ್ನಿ ಮಾರಾಟ ಮಾಡಿದ್ದು ಎರಡುವರೆ ಲಕ್ಷ ಹಣ ಪಡೆಯಲಾಗಿತ್ತು

ಈಗ ಕಿಡ್ನಿ ಮಾರಾಟ ಮಾಡಲು ಸಹಾಯ ಮಾಡಿದ ಜ್ಯೋತಿನಗರದ ಮಂಜುನಾಥ್ ನಿನ್ನ ಮಗಳಿಂದ ಕಿಡ್ನಿ ಕೊಡಿಸು ಇಲ್ಲವಾದರೆ ನಿನಗೆ ನೀಡಿದ್ದ ಎರಡೂವರೆ ಲಕ್ಷ ಹಣ ಹಿಂದಿರುಗಿಸುವಂತೆ ಕಿರುಕುಳ ನೀಡುತ್ತಿದ್ದು ಹಣ ನೀಡದಿದ್ದರೆ ಕಿಡ್ನಿ ಮಾರಾಟ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿಸಿ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಆಗುತ್ತಿದ್ದು ಶಾಂತ ಎಂಬುವರು ಕೂಡ ಕಿಡ್ನಿ ಮಾರಾಟ ಮಾಡಿದ್ದು ಅವರಿಂದ ಬೆದರಿಕೆ ಹಾಕಿ ಮಂಜುನಾಥ್ ಹಣ ಪಡೆದಿದ್ದು ಈಗ ನನ್ನ ಬಳಿಯು ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದು ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಗೀತಾ ತಿಳಿಸಿದ್ದಾರೆ.

ಮಾಗಡಿ ಪೋಲಿಸರು ಪ್ರಕರಣ ದಾಖಲಿಸಿ ಆರೋಪಿ ಪತ್ತೆ ಕಾರ್ಯ ಆರಂಭಿಸಿದ್ದಾರೆ ಕಳೆದ ಹಲವು ವರ್ಷಗಳ ಹಿಂದೆ ಮಾಗಡಿ ತಾಲ್ಲೂಕಿನಲ್ಲಿ ಕಿಡ್ನಿ ಮಾರಾಟ ಜಾಲ ಸಕ್ರಿಯವಾಗಿ ನಡೆದಿದ್ದು ಈಗ ಮತ್ತೆ ಕಿಡ್ನಿ ಮಾರಾಟ ಮಾಡುವ ಜಾಲ ಸಕ್ರಿಯವಾಗಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ಕಿಡ್ನಿ ಮಾರಾಟದ ಸುಳಿವಿನ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ್ದು ಆರೋಪಿ ಮಂಜುನಾಥ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Related Posts

Leave a Reply

Your email address will not be published. Required fields are marked *