ಮದುವೆಗೆಂದು ಬಂದಿದ್ದ ಮಹಿಳೆ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡು ಕುಣಿಗಲ್‌ನಲ್ಲಿ ಪುರುಷನೊಬ್ಬನ ಮನೆಯಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ.
ಗುರುವಾರ ರಾತ್ರಿ ಕಾಣೆಯಾಗಿದ್ದ ಮಹಿಳೆ ಕುಣಿಗಲ್‌ನಲ್ಲಿ ಪತಿಯ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದ್ದು, ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯಾವಳಿಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕ ಕುಣಿಗಲ್ನ ಗೊಟ್ಟಿಕೆರೆಯಲ್ಲಿ ಡೇವಿಡ್ ಮನೆಯಲ್ಲಿ ಪೊಲೀಸರು ಪತ್ತೆ ಮಾಡಿದ್ದು, ಬೇಲೂರು ಪೊಲೀಸರು ಕೂಡ ಕಾರ್ಯಾ ಚರಣೆಯಲ್ಲಿ ಭಾವಹಿಸಿದ್ದರು.
ಡೇವಿಡ್ ಮನೆಯಲ್ಲಿ ಪ್ರಿಯಾಂಕ ಎರಡು ದಿನಗಳಿಂದ ವಾಸವಿದ್ದರು ಎನ್ನಲಾದೆ. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಸೀನ್ ಕ್ರಿಯೇಟ್ ಮಾಡಿ ನಾಪತ್ತೆಯಾಗಿದ್ದ ಪ್ರಕರಣ ಬೇಲೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.
ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯ ನಿವಾಸಿ ಡೇವಿಡ್ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಪ್ರಿಯಾಂಕ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆಂದು ಬಂದಿದ್ದು, ಬಳಿಕ ಕಾಣೆಯಾಗಿದ್ದರು. ಹಾಸನದ ಬೇಲೂರು ಬಸ್ ನಿಲ್ದಾಣದ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಘಟನೆಗೂ ಮೊದಲು ಸಂಜೆ ಕುಟುಂಬ ಸದಸ್ಯರಿಗೆ ಕರೆ ಮಾಡಿ ‘ಯಾರೋ ಒಬ್ಬರ ಜೊತೆಯಲ್ಲಿದ್ದೇನೆ’ ಎಂದು ಹೇಳಿ ಫೋನ್ ಕಟ್ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಳು.
ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ಮಹಿಳೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ಮತ್ತಷ್ಟು ಸಂಶಯ ಮೂಡಿಸಿತ್ತು. ಮಹಿಳೆ ಪತ್ತೆಯಾಗಿದ್ದ ಮನೆ ಮಾಲೀಕ ಶಿವಣ್ಣ ಅವರು, ಬಾಡಿಗೆದಾರ ಡೇವಿಡ್ ಮನೆಯಲ್ಲಿ ಮಹಿಳೆ ಇದ್ದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಬಂದು ಇಬ್ಬರನ್ನೂ ಕರೆದೊಯ್ದ ನಂತರವೇ ವಿಚಾರ ತಿಳಿಯಿತು. ಡೇವಿಡ್ ಒಂದು ವರ್ಷದಿಂದ ಬಾಡಿಗೆಗೆ ವಾಸವಾಗಿದ್ದ. ಹೆಂಡತಿ ಎಂದು ಹೇಳಿ ಮಹಿಳೆಯೊಂದಿಗೆ ಡೇವಿಡ್ ವಾಸವಿದ್ದ, ಆ ಮಹಿಳೆ ಆರು ತಿಂಗಳ ಹಿಂದೆ ಅಪ್ಪ-ಅಮ್ಮನಿಗೆ ಹುಷಾರಿಲ್ಲ ವೆಂದು ಹೋದವಳು ಮರಳಿ ಬಂದಿಲ್ಲ. ಅಂದಿನಿಂದ ಡೇವಿಡ್ ಒಬ್ಬನೇ ವಾಸವಾಗಿದ್ದ ಎಂದು ತಿಳಿಸಿದ್ದಾರೆ.


