Saturday, January 10, 2026
Menu

ರಾತ್ರಿ ಇಲಿ ಪಾಷಾಣ ಆರ್ಡರ್‌ ಮಾಡಿದ ಮಹಿಳೆ: ಜೀವವುಳಿಸಿದ ಡೆಲಿವರಿ ಬಾಯ್‌

ತಮಿಳುನಾಡಿನಲ್ಲಿ ರಾತ್ರಿ ಮಹಿಳೆಯೊಬ್ಬರು ಇಲಿ ಪಾಷಾಣ ಆರ್ಡರ್‌ ಮಾಡಿದ್ದು, ಡೆಲಿವರಿ ಬಾಯ್‌ಗೆ ಮಹಿಳೆ ಸಂಕಷ್ಟದಲ್ಲಿದ್ದಾಳೆಂದು ಅರಿವಾಗಿ ಸಮಯ ಪ್ರಜ್ಞೆಯಿಂದ ಆಕೆಯ ಜೀವವುಳಿಸಿದ್ದಾನೆ. ಬಳಿಕ ಆತ ವೀಡಿಯೊ ಮಡಿ ಈ ವಿಷಯ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್‌ ಆಗಿಆತನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಡೆಲಿವರಿ ಬಾಯ್‌ ವೀಡಿಯೋದಲ್ಲಿ ಹೇಳಿರುವ ವಿಚಾರ ಇಷ್ಟು,  ಮಹಿಳೆಯೊಬ್ಬರು ತಡ ರಾತ್ರಿ ಮೂರು ಪ್ಯಾಕೆಟ್‌ ಇಲಿ ವಿಷ ಆರ್ಡರ್ ಮಾಡಿದ್ದಾರೆ. ಆರ್ಡರ್‌ನಂತೆ ಇಲಿ ವಿಷ ಪ್ಯಾಕೆಟ್‌ಗಳನ್ನು ಹಿಡಿದು ಎಲಿವರಿ ಬಾಯ್‌ ಮಹಿಳೆಯ ಮನೆಗೆ ತೆರಳಿದ್ದ, ಆತನಿಗೆ ಅಪಾಯದ ಸೂಚನೆ ಸಿಕ್ಕಿದೆ. ಇಲಿ ವಿಷ ಆರ್ಡರ್ ಪಾರ್ಸೆಲ್ ಮಾಡಿ ವಿಳಾಸದಲ್ಲಿ ಕೊಂಚ ಗೊಂದಲವಿದ್ದ ಡೆಲಿವರಿ ಬಾಯ್‌ ಕರೆ ಮಾಡಿ ವಿಳಾಸ ಕೇಳಿದ್ದಾನೆ. ಆಕೆ ವಿಳಾಸ ಹೇಳುವಾಗ ಆಕೆ ಏನೋ ಸಮಸ್ಯೆಯಲ್ಲಿರುವುದು ಆತನ ಗಮನಕ್ಕೆ ಬಂದಿದೆ.

ಮಹಿಳಯ ವಿಳಾಸ ತಲುಪಿದ ಡೆಲಿವರಿ ಬಾಯ್‌ ಬಾಗಿಲು ತಟ್ಟಿದಾಗ ಮಹಿಳೆ ಬಾಗಿಲು ತೆರದಿದ್ದಾಳೆ. ಮಾತನಾಡುವಾಗ ಆಕೆಯ ಮಾತುಗಳು ತೊದಲುತ್ತಿತ್ತು, ಕಣ್ಣೀರು ಕಾಣಿಸುತ್ತಿತ್ತು. ಗಟ್ಟಿ ನಿರ್ಧಾರ ಮಾಡಿ ಇಲಿ ವಿಷ ಆರ್ಡರ್ ಮಾಡಿರುವುದು ಗೊತ್ತಾಗುತ್ತಿತ್ತು.

ಆಗ ಡೆಲಿವರಿ ಬಾಯ್‌, ಮೇಡಮ್, ಸಮಯಕ್ಕೆ ಸರಿಯಾಗಿ ಆರ್ಡರ್ ತಲುಪಿಸಲು ವೇಗವಾಗಿ ಬರುವಾಗ ನಿಮ್ಮ ಆರ್ಡರ್ ಎಲ್ಲೋ ಬಿದ್ದು ಹೋಗಿರುವುದು ಬಂದು ನೋಡಿದಾಗ ಗೊತತಾಯಿತು. ಹೀಗಾಗಿ ಹೇಳಿ ಹೋಗೋಣ ಎಂದು ಬಂದೆ ಎಂದಿದ್ದಾನೆ. ಆಕೆ ಮಾತನಾಡಲಿಲ್ಲ, ನೀವು ಇಲಿ ವಿಷವನ್ನು ಈ ಹೊತ್ತಿನಲ್ಲಿ ಆರ್ಡರ್ ಮಾಡಿರುವ ಉದ್ದೇಶ ನನಗೆ ಗೊತ್ತು. ಆದರೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮಹಿಳೆಗೆ ಹೇಳಿದ್ದಾನೆ.

ಇಲಿಗಳು ಹೆಚ್ಚಾಗಿದೆ, ಹಾಗಾಗಿ ಆರ್ಡರ್ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಡೆಲಿವರಿ ಬಾಯ್‌ ಈ ಹೊತ್ತಿನಲ್ಲಿ ಮೂರು ಪ್ಯಾಕೆಟ್ ಆರ್ಡರ್ ಮಾಡಿದ್ದೀರಿ. ನಿಮ್ಮ ಕಣ್ಣೀರು, ನೋವು ಕಾಣಿಸುತ್ತಿದೆ. ದಯವಿಟ್ಟು ದುಡುಕಿನ ನಿರ್ಧಾರ ಬೇಡ. ಈ ಕಷ್ಟ ಸಮಯ ಕೆಲವೇ ಕ್ಷಣಗಳು ಮಾತ್ರ, ಬಳಿಕ ಎಲ್ಲವೂ ಸರಿಯಾಗಲಿದೆ. ನಿಮ್ಮ ಜೀವ ಅಮೂಲ್ಯ, ಪೋಷಕರು, ಕುಟುಂಬಸ್ಥರು, ಆಪ್ತರು ಎಲ್ಲರು ನಿಮ್ಮೊಂದಿಗಿದ್ದಾರೆ. ಆದರೆ ನೀವು ದುಡುಕಿನ ನಿರ್ಧಾರ ತೆಗೆದುಕೊಂಡರೆ ಅವರ ಪಾಡೇನು, ಅವರ ನೋವು ಅರಿತಿದ್ದೀರ, ನಿಮ್ಮ ನಿರ್ಧಾರ ಬದಲಿಸಬೇಕು ಎಂದು ಮಹಿಳೆಯ ಮನ ಒಲಿಸುವ ಪ್ರಯತ್ನ ಮಾಡಿದ್ದಾನೆ. ಬಳಿಕ ನಿಮ್ಮ ಆರ್ಡರ್ ನನ್ನ ಬಳಿ ಇದೆ, ಈ ಆರ್ಡರ್ ನೀವು ಕ್ಯಾನ್ಸಲ್ ಮಾಡಬೇಕು ಎಂದು ಮನವಿ ಮಾಡಿದ್ದಾನೆ. ಆಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ. ಅಲ್ಲಿಂದ ಹೊರಬಂದ ಆತ ದಾರಿಯಲ್ಲಿ ನಿಂತು ನಡೆದ ಘಟನೆಯ ಬಗ್ಗೆ ವೀಡಿಯೊ ಮೂಲಕ ಹೇಳಿದ್ದಾನೆ.

Related Posts

Leave a Reply

Your email address will not be published. Required fields are marked *