Wednesday, February 18, 2026
Menu

ಹಲ್ಲಿನ ಚಿಕಿತ್ಸೆಗೆಂದು ಜೇವರ್ಗಿಯ ಆಸ್ಪತ್ರೆಗೆ ಬಂದಿದ್ದ ಮಹಿಳೆ ಕೋಮಾಗೆ

ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಖಾಸಗಿ ಆಸ್ಪತ್ರೆಗೆ ಹೋಗಿರುವ ಮಹಿಳೆ ಕೋಮಾ ಸ್ಥಿತಿ ತಲುಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ವೈದ್ಯರ ಯಡವಟ್ಟು ಈ ಸ್ಥಿತಿಗೆ ಕಾರಣವೆಂದು ಕುಟುಂಬ ಹೇಳಿದರೆ, ವೈದ್ಯರ ತಪ್ಪಿಲ್ಲ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ.

ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯ ನಿವಾಸಿ ನಾಜಿಯಾ ಬೇಗಂ ಕೋಮಾ ತಲುಪಿರುವ ಮಹಿಳೆ. ಇವರು ಒಂದುವರೆ ತಿಂಗಳಿನಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ನಾಜಿಯಾಗೆ ಇಬ್ಬರು ಮಕ್ಕಳಿದ್ದಾರೆ. ಆಕೆ ಜನವರಿ 1ರಂದು ಹಲ್ಲು ನೋವು ಎಂದು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬಂದವರು ಕೋಮಾ ಸ್ಥಿತಿ ತಲುಪಿದ್ದಾರೆ.

ಜನವರಿ 2ರಂದು ಹಲ್ಲು ತೆಗೆಯಲು ವೈದ್ಯರು ಅನೆಸ್ತೇಶಿಯಾ ನೀಡಿದ್ದಾರೆ. ಅದಾದ ಕೆಲವೇ ನಿಮಿಷದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಕೋಮಾ ತಲುಪಿದ್ದಾರೆ. ಆವತ್ತಿನಿಂದ ಆಸ್ಪತ್ರೆ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಆಕೆಯ ಆರೋಗ್ಯದಲ್ಲಿ ಏರುಪೇರಾಗಿ ಕೋಮಾಗೆ ಹೋದಾಗ ಆಡಳಿತ ಮಂಡಳಿ ಎಚ್ಚೆತ್ತುಕೊಂಡು, ಕುಟುಂಬ ಸದಸ್ಯರಿಂದ ಹಣ ಪಡೆಯದೆ 45 ದಿನಗಳಿಂದ 8 ಲಕ್ಷಕ್ಕೂ ಅಧಿಕ ಹಣವನ್ನು ಭರಿಸಿ ಚಿಕಿತ್ಸೆ ಕೊಡುತ್ತಿದೆ. ಆದರೆ ಆರೋಗ್ಯದಲ್ಲಿ ಮಾತ್ರ ಬದಲಾವಣೆಯಾಗಿಲ್ಲ. ವೈದ್ಯರು ನಾಜೀಯಾಗೆ ಫಿಜಿಯೋಥೆರಫಿ ಚಿಕಿತ್ಸೆ ಬೇಕು, ಅದು ನಮ್ಮ ಬಳಿ ಇಲ್ಲ .ಗಾಗಿ ಬೆಂಗಳೂರು ಅಥವಾ ಹೈದ್ರಾಬಾದ್‌ನ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *