ಕೊಪ್ಪಳ: ಡಿ.ಎ.ಆರ್.ಪೊಲೀಸರ ಫೈರಿಂಗ್ ತರಬೇತಿ ವೇಳೆ ಗುಂಡು ಮಹಿಳೆಯೊಬ್ಬರಿಗೆ ತಗುಲಿದ ಘಟನೆ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಬಳಿ ಘಟನೆ ಜಬ್ಬಲಗುಡ್ಡದ ಕುಮ್ಮಟದುರ್ಗ ಗುಡ್ಡದ ಪೊಲೀಸ್ ತರಬೇತಿ ಸ್ಥಳದಲ್ಲಿ ಮಂಗಳವಾರ ನಡೆದಿದೆ.
ಗುಂಡು ಬಿದ್ದ ಮಹಿಳೆಯನ್ನು ರೇಣುಕಮ್ಮ ಜಗದೀಶ್ ಕಬ್ಬೇರ ಎಂದು ಗುರುತಿಸಲಾಗಿದೆ. ಈ ಮಹಿಳೆಯು ಕುರಿ ಕಾಯಲು ಪೊಲೀಸರು ತರಬೇತಿ ಸ್ಥಳದಲ್ಲಿ ಬಂದಿದ್ದಾಗ ಗುಂಡೇಟು ಬಿದ್ದಿದೆ.
ಗಾಯಗೊಂಡ ಮಹಿಳೆ ರೇಣುಕಮ್ಮಳನ್ನು ತಾಲ್ಲೂಕಿನ ಮುನಿರಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.