Menu

ಕಾಟನ್ ಪೇಟೆಯಲ್ಲಿ ಮಹಿಳೆಯ ಹತ್ಯೆಗೈದು ಹಣ, ಚಿನ್ನಾಭರಣ ಕಳವು

ಬೆಂಗಳೂರಿನ ಕಾಟನ್ ಪೇಟೆ ಪ್ರದೇಶದ ದರ್ಗಾ ರಸ್ತೆಯ ಮನೆಯಲ್ಲಿ 40 ವರ್ಷದ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕದ್ದು ಹಂತಕ ಪರಾರಿಯಾಗಿದ್ದಾನೆ. ಲತಾ (40) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಲತಾ ಬೀದರ್ ಮೂಲದವರಾಗಿದ್ದು, ಪತಿ ಪ್ರಕಾಶ್ ಮತ್ತು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರಕಾಶ್ ಹೋಲ್‌ಸೇಲ್ ಬಟ್ಟೆ ವ್ಯಾಪಾರಿ. ಕೊಲೆಯ ಸಮಯದಲ್ಲಿ ಲತಾ ಮನೆಯಲ್ಲಿಯೇ ಒಂಟಿಯಾಗಿದ್ದರು. ಲತಾ ಅವರಿಗೆ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಗಳ ಮದುವೆಗೆಂದು ಸಂಗ್ರಹಿಸಿದ್ದ ಚಿನ್ನಾಭರಣ ಮನೆಯಲ್ಲಿಯೇ ಇಡಲಾಗಿದ್ದು, ಅದನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.  ಮಧ್ಯಾಹ್ನ ಪ್ರಕಾಶ್ ಊಟಕ್ಕೆ ಮನೆಗೆ ಬಂದಾಗ ಲತಾ ಕೊಲೆಯಾಗಿದ್ದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಟನ್ ಪೇಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಲಾಗಿದ್ದು ಹಂತಕನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಲತಾ ಅವರಿಗೆ ಇಬ್ಬರು ಮಕ್ಕಳಿದ್ದು, ಮಗಳು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರೆ ಮಗ ಶಾಲೆಗೆ ಹೋಗಿದ್ದನು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *