ಪೀಣ್ಯ ಬಳಿಯ ಚೊಕ್ಕಸಂದ್ರದಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಕೋಮಾದಲ್ಲಿದ್ದ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರೀತಿ ಸಿಂಗ್ (26) ಮೃತ ಮಹಿಳೆ, ಆರೋಪಿ ಛೋಟೆಲಾಲ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಪತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಮದ್ಯ ಸೇವಿಸಿ ಮನೆಗೆ ಬಂದಿದ್ದ ಛೋಟೆಲಾಲ್ ಹೆಂಡತಿ ಬಳಿ ಕುಡಿಯಲು ನೀರು ಕೇಳಿದ್ದ, ನಾನು ಈಗ ಕೆಲಸಕ್ಕೆ ಹೋಗಬೇಕು. ನೀನೇ ನೀರು ತೆಗೆದುಕೊಂಡು ಕುಡಿ ಎಂದು ಆಕೆ ಹೇಳಿದ್ದಾಳೆ. ಮದ್ಯದ ಮತ್ತಿನಲ್ಲಿದ್ದ ಆತ ಹೆಂಡತಿಯ ಈ ಮಾತು ಕೇಳಿ ಸಿಟ್ಟಿಗೆದ್ದು, ಲಟ್ಟಣಿಗೆಯಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಆಕೆ ಕೋಮಾಗೆ ಜಾರಿದ್ದಳು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರೂ ಫಲಿಸದೆ ಆಕೆ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಛೋಟೆಲಾಲ್ ನನ್ನು ಬಂಧಿಸಿದ್ದಾರೆ.
ಯುವತಿ ನಾಪತ್ತೆ, ಯುವಕನಿಗೆ ಚೂರಿ ಇರಿತ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಯುವತಿ ನಾಪತ್ತೆಯಾಗಿರುವುದಕ್ಕೆ ಕಾರಣವೆಂದು ಆರೋಪಿಸಿ ಆಕೆಯ ಕುಟುಂಬದವರು ಪೊಲೀಸರು ಠಾಣೆ ಬಳಿಯೇ ಯುವಕನಿಗೆ ಚಾಕು ಇರಿದಿದ್ದಾರೆ. ಜಾಕೀರ್ ಹಾಗೂ ಆತನ ಸ್ನೇಹಿತ ಆರ್ಮುಗಮ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾರೆ. ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 1 ರಿಂದ ಬೇಬಿ ಆಯೇಷಾ ಕಾಣೆಯಾಗಿದ್ದಾಳೆ. ಇದಕ್ಕೆ ಮಹೇಂದ್ರನೇ ಕಾರಣವೆಂದು ಯುವತಿಯ ಸಂಬಂಧಿಕರು ಶಂಕಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಪೌರಕಾರ್ಮಿಕರ ಕಾಲೊನಿಯ ಮಹೇಂದ್ರ ಸಂಬಂಧಿ ಆರ್ಮುಗಮ್, ಮಹೇಂದ್ರ ಕಾಣೆಯಾಗಿದ್ದಾನೆಂದು ದೂರು ಕೊಡಲು ಠಾಣೆಗೆ ಬಂದಿದ್ದರು. ಈ ವೇಳೆ ಠಾಣೆ ಬಳಿಯೇ ಜಾಕೀರ್ ಹಾಗೂ ಆತನ ಸ್ನೇಹಿತರು ಆರ್ಮುಗಮ್ ಕುತ್ತಿಗೆಗೆ ಇರಿದಿದ್ದಾರೆ.