ಬೆಂಗಳೂರಿನಲ್ಲಿ ತಡರಾತ್ರಿ ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಸುಮಾರು 2 ಕಿ.ಮೀ. ದೂರದವರೆಗೆ ಹಿಂಬಾಲಿಸಿಕೊಂಡು ಬೈಕ್ ನಲ್ಲಿ ಮೂವರು ಪುಂಡರು ಕಿರುಕುಳ ನೀಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸಿ ಹೋಗುತ್ತಿದ್ದ ಯುವತಿಗೆ ಮತ್ತೊಂದು ಸ್ಕೂಟಿಯಲ್ಲಿ ಬಂದ ಮೂವರು ಯುವಕರು ಸುಮಾರು 2 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಬೆನ್ನಟ್ಟಿ ಕಿರುಕುಳ ನೀಡಿದ್ದಾರೆ.
ಡಿ.25ರಂದು ರಾತ್ರಿ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಹಿಂದೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಪುಂಡರ ಹಾವಳಿಯ ವೀಡಿಯೋ ಚಿತ್ರೀಕರಿಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೆಲ್ಮೆಟ್ ಕೂಡ ಧರಿಸದೇ ಅಡ್ಡಾದಿಡ್ಡಿ ಚಾಲನೆ ಮಾಡಿದ ಪುಂಡರು ಬೇಕು ಅಂತಲೇ ಯುವತಿಯ ಸ್ಕೂಟಿಯ ಮುಂದೆ ಹೋಗಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಾಲನೆ ಮಾಡಿದ್ದಾರೆ. ಅಲ್ಲದೇ 2 ಕಿ.ಮೀ ಯುವತಿಯನ್ನು ಫಾಲೋ ಮಾಡಿರುವ ವೀಡಿಯೋವನ್ನು ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬರು ಎಕ್ಸ್ ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಸುದ್ದುಗುಂಟೆ ಪಾಳ್ಯ ಪೊಲೀಸರು ಈ ವೀಡಿಯೋ ಗಮನಿಸಿ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಿರುಕುಳ ನೀಡಿದ ಪುಂಡರ ಬೈಕ್ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡೋದಾಗಿ ಉತ್ತರ ನೀಡಿದ್ದಾರೆ.
Saw a girl being harassed by a group of guys for several kms on a main road, & this was before 10. I took a video as evidence and intervened in they immediately fled. @BlrCityPolice @blrcitytraffic pic.twitter.com/7cVrINuYug
— Abhinav Vasudevan (@abhyn0w) December 24, 2025


