ಮಂಗಳೂರು ನಗರದ ಕೂಳೂರು ರಾಯಲ್ ಓಕ್ ಶೋರೂಂ ಮುಂಭಾಗ ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಮಹಿಳಾ ಸವಾರರೊಬ್ಬರ ಮೇಲೆ ಕ್ಯಾಂಟರ್ ಲಾರಿ ಹರಿದು ಮೃತಪಟ್ಟಿದ್ದಾರೆ.
ಉಡುಪಿಯ ಪರ್ಕಳದ ಮಾಧವಿ ಮೃತ ಮಹಿಳೆ. ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಿಬ್ಬಂದಿ ಮಾಧವಿ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ದ್ವಿಚಕ್ರ ವಾಹನವು ರಸ್ತೆ ಹೊಂಡಕ್ಕೆ ಬಿದ್ದು, ಮಾಧವಿ ರಸ್ತೆಗೆ ಬಿದ್ದಿದ್ದಾಗ ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೇಗುಲ, ಮನೆ ಆರೋಪಿಗಳ ಬಂಧನ
ದೇವಾಲಯ, ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೋಲಾರದ ಕಾಮಸಮುದ್ರ ಪೊಲೀಸರು ಬಂಧಿಸಿದ್ದಾರೆ.
ಚಿತ್ತೂರು ಜಿಲ್ಲೆಯ ನಿಮ್ಮಕಂಪಲ್ಲಿ ಗ್ರಾಮದ ವಾಸಿ ಕೆ.ಚಿನ್ನಸ್ವಾಮಿ (57), ಸೇಲಂ ಜಿಲ್ಲೆಯ ಮೆಟ್ಟೂರು ವಾಸಿ ಮಣಿ ಬಾಬು (55) ಬಂಧಿತ ಆರೋಪಿಗಳು. ಬಂಗಾರಪೇಟೆ ತಾಲೂಕಿನ ಕುಂದರಸನಹಳ್ಳಿ ಗ್ರಾಮದ ಕಾಳಿಕಾಂಬ ದೇವಸ್ಥಾನ, ದೋಣಿಮಡಗು ಗ್ರಾಮದ ಸತೀಶ್‌ರೆಡ್ಡಿ, ಸೀನಪ್ಪ ಕೊಂಗರಹಳ್ಳಿ ಗ್ರಾಮದ ವೆಂಕಟೇಶಪ್ಪ, ಮುನಿಯಮ್ಮ, ಶೇಖ್ ಲಿಯಾಕತ್ ಮತ್ತು ಗೌರಮ್ಮ ಮನೆಗಳಲ್ಲಿ ಕಳ್ಳತನವಾಗಿತ್ತು.
ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 3.78 ಲಕ್ಷ ರೂ. ಮೌಲ್ಯದ 34 ಗ್ರಾಂ ಚಿನ್ನಾಭರಣ, 380 ಗ್ರಾಂ ಬೆಳ್ಳಿ ಆಭರಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.