Menu

ವೇಶ್ಯಾವಾಟಿಕೆಗೆ ಅತ್ತೆಯ ಒತ್ತಾಯ ಆರೋಪ: ಬೀದರ್‌ನಲ್ಲಿ ಮಹಿಳೆ ಆತ್ಮಹತ್ಯೆ

ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ವೇಶ್ಯಾವಾಟಿಕೆಗೆ ಅತ್ತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಸೊಸೆ 11 ತಿಂಗಳ ಮಗುವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಅಂಜನಾಬಾಯಿ ಶೇಖರ್ ಪಾಟೀಲ್(22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಪತಿ ಮನೆಯವರಿಂದ ನಿತ್ಯ ಕಿರುಕುಳ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜತೆ ಅಂಜನಾಬಾಯಿ ವಿವಾಹ ನಡೆದಿದ್ದು, ಮದುವೆ ಬಳಿಕ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಿ ಯುವತಿಗೆ ನಿತ್ಯವೂ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವಿದೆ. ಅಂಜನಾಬಾಯಿ ಪತಿ ಶೇಖರ್​​ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈ ಬಗ್ಗೆ ತಕರಾರು ಮಾಡಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದಳು. ಇದೇ ವಿಚಾರವಾಗಿ ಅತ್ತೆ ಮಾವ ಆಕೆ ಜೊತೆ ಜಗಳ ಮಾಡಿದ್ದಾರೆ.

ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ ಎಂದು ಹೀಯಾಳಿಸಿ ನೀನು ವೇಶ್ಯಾವಾಟಿಕೆ ಮಾಡು ಎಂದು ಆಕೆಯನ್ನು ಪೀಡಿಸಿದ್ದರೆಂದು ಅಂಜನಾಬಾಯಿ ಹೆತ್ತವರ ಬಳಿ ಹೇಳಿಕೊಂಡಿದ್ದರು, ಪೋಷಕರು ಆಕೆಗೆ ಸಮಾಧಾನ ಮಾಡಿದ್ದು, ಇಂದೆಲ್ಲ ನಾಳೆ ಸರಿಹೋಗಬಹುದು ಎಂದು ತಿಳುವಳಿಕೆ ಹೇಳಿದ್ದರು. ಈ ನಡುವೆ ಕಿರುಕುಳ ತಾಳಲಾರದೆ ಅಂಜನಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಕೆಯ ತಂದೆ ವಿಜಯಕುಮಾರ್ ದೂರಿನ ಅನ್ವಯ ಗಂಡ ಶೇಖರ್ ಸೇರಿ ಮೂವರ ವಿರುದ್ಧ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *