ಬೆಂಗಳೂರಿನ ಬಟ್ಟೆ ಅಂಗಡಿಯಲ್ಲಿ ಸೀರೆ ಕದ್ದ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಉಮೇದ್ ರಾಮ್ ಬಂಧಿತ, ಈತನ ವಿರುದ್ಧ ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಥಳಿಸುತ್ತಿದ್ದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಂಪಮ್ಮ ಎಂಬ ಮಹಿಳೆ 50ಕ್ಕೂ ಹೆಚ್ಚು ಸೀರೆಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಿ, ಉಮೇದ್ ರಾಮ್ ಸಿಬ್ಬಂದಿಯೊಂದಿಗೆ ಗುಪ್ತಾಂಗಕ್ಕೆ ಒದ್ದು ಕ್ರೌರ್ಯ ಮೆರೆದಿದ್ದಾನೆ. ಮಹಿಳೆ ನೋವಿನಿಂದ ಕಿರುಚುತ್ತಿದ್ದರೂ ನಿರ್ದಯವಾಗಿ ಥಳಿಸಿದ್ದಾನೆ. ಈ ದೃಶ್ಯವನ್ನು ಪಕ್ಕದಲ್ಲಿದ್ದ ವ್ಯಕ್ತಿ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಕೆ.ಆರ್. ಮಾರ್ಕೆಟ್ ಪೊಲೀಸರು ಮಹಿಳೆಯ ದೂರನ್ನು ದಾಖಲಿಸಿಕೊಳ್ಳದೆ ಆಕೆಯ ಮೇಲೆ ಕಳ್ಳತನದ ಆರೋಪದಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ಈ ಕಾರ್ಯ ವೈಖರಿ ಬಗ್ಗೆಯೂ ಸಾರ್ವಜನಿಕರ ಟೀಕೆ ವ್ಯಕ್ತವಾಗಿದೆ.
ವೀಡಿಯೊ ನೋಡಿದವರು, ಕಾನೂನನ್ನು ಕೈಗೆ ತೆಗೆದುಕೊಂಡು ಇಂತಹ ಕ್ರೌರ್ಯ ಮೆರೆಯುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಕಳ್ಳತನ ಮಾಡಿದ್ದರೆ ಕಾನೂನಿನ ಮೂಲಕ ಶಿಕ್ಷೆ ನೀಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಾರ್ಕ್ ಮಾಡಿದ್ದ ವಾಹನಗಳ ಮೇಲೆ ಲಾಂಗ್ ಬೀಸಿ ಪುಡಿ ರೌಡಿಗಳ ಪುಂಡಾಟ
ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳ ಗ್ಯಾಂಗ್ ಲಾಂಗ್ ಹಿಡಿದು ರಸ್ತೆ ಬದಿ ಪಾರ್ಕ್ ಮಾಡಿದ್ದ ವಾಹನಗಳ ಮೇಲೆ ಬೀಸಿ ಪುಂಡಾಟ ಪ್ರದರ್ಶಿಸಿದ್ದು, ಸ್ಥಳೀಯರಲ್ಲಿ ಆತಂಕವುಂಟು ಮಾಡಿದೆ. ಲ್ಲೂ ಆತಂಕ ಮೂಡುವಂತೆ ಮಾದನಾಯಕನಹಳ್ಳಿಯ ಮಾಗಡಿ ರೋಡ್ ವ್ಯಾಪ್ತಿಯಲ್ಲಿ ಗ್ಯಾಂಗ್ ಚಾಲಕನ ಮೇಲೆ ಲಾಂಗ್ ಬೀಸಿದೆ. ಮೊದಲಿಗೆ ಲಾರಿ ಗ್ಲಾಸ್ ಹೊಡೆದು ಚಾಲಕ ಮಲಗಿರುವುದನ್ನು ಗಮನಿಸಿ ಹಣಕ್ಕಾಗಿ ಬೆದರಿಕೆ ಹಾಕಿದೆ. ಹಣ ತೆಗೆದುಕೊಡುವಷ್ಟರಲ್ಲಿ ಲಾಂಗ್ ಬೀಸಿ ಕೈ ಕಟ್ ಮಾಡಿಮೊಬೈಲ್ ಹಾಗೂ 5 ಸಾವಿರ ರೂ. ದೋಚಿ ಪರಿಯಾಗಿದೆ.
ಈ ಗ್ಯಾಂಗ್ ದೊಡ್ಡಬಳ್ಳಾಪುರದ ಬಳಿ ಕೂಡ ಲಾಂಗ್ ಬೀಸಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬೆದರಿಕೆ ಹಾಕಿದೆ. ಲಾರಿಗಳನ್ನು ಅಡ್ಡಹಾಕಿ ಲಾಂಗ್ ತೋರಿಸಿ ಹಣ ವಸೂಲಿ ಮಾಡಿದೆ. ಸುಮಾರು 20 ವಾಹನಗಳ ಗ್ಲಾಸ್ ಪುಡಿ ಮಾಡಿದೆ.
ಅನ್ನಪೂರ್ಣೇಶ್ವರಿ ನಗರದ ಮುದ್ದಿನಪಾಳ್ಯದ ಬಳಿ ಐದಾರು ವಾಹನಗಳ ಗ್ಲಾಸ್ ಗಳನ್ನು ಪುಂಡರ ಗ್ಯಾಂಗ್ ಒಡೆದಿದೆ. ಎ.ಪಿ ನಗರ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಮತ್ತು ದೊಡ್ಡಬಳ್ಳಾಪುರ ಪೊಲೀಸರು ಆರೋಪಿಗಳ ಹುಡುಕಾಟಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.