ವಾಟ್ಸಾಪ್ ಬಳಕೆದಾರರಿಗೆ ಇಷ್ಟು ದಿನ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತಿದ್ದ ಮೆಸೇಜಿಂಗ್ ಸೇವೆಗೆ ಇನ್ನು ಮುಂದೆ ಹಣ ಪಾವತಿಸಬೇಕಾದ ದಿನಗಳು ದೂರವಿಲ್ಲ. ಡೇಟಾ ರೀಚಾರ್ಜ್ ಜೊತೆಗೆ ಮಾಸಿಕ ಸಬ್‌ಸ್ಕ್ರಿಪ್ಷನ್ ಬಗ್ಗಯೂ ಯೋಚಿಸಬೇಕಾಗುತ್ತದೆ.
ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ ವಾಟ್ಸಾಪ್ ಮೂಲಕ ಆದಾಯ ಗಳಿಸಲು ಹೊಸ ಮಾದರಿ ಜಾರಿಗೆ ತರಲು ಮುಂದಾಗಿದೆ. ವಾಟ್ಸಾಪ್‌ನಲ್ಲಿ ಈವರೆಗೆ ಕಿರಿಕಿರಿ ಇಲ್ಲದೆ ಚಾಟ್ ಮಾಡುತ್ತಿದ್ದೆವು. ವಾಟ್ಸಾಪ್ ಶೀಘ್ರದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಚಿಂತನೆ ನಡೆಸಿದೆ. ಸ್ಟೇಟಸ್ ಮತ್ತು ಚಾನೆಲ್ಸ್ ವಿಭಾಗಗಳಲ್ಲಿ ಈ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಾದರಿಯಲ್ಲೇ ಇಲ್ಲೂ ಮೆಟಾ ಹನ ಗಳಿಕೆಯ ಕಾರ್ಯತಂತ್ರ ರೂಪಿಸುತ್ತಿದೆ. ಬಳಕೆದಾರರಿಗೆ ಜಾಹೀರಾತುಗಳು ಬೇಡವೆಂದಾದಲ್ಲಿ, ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಪಡೆದುಕೊಂಡು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಪಾವತಿಸಬೇಕಾಗಬಹುದು.
ಈ ಮಾದರಿಯ ಪರೀಕ್ಷಾರ್ಥ ಪ್ರಯೋಗಗಳು ಈಗಾಗಲೇ ಯುರೋಪ್‌ನ ಕೆಲವು ದೇಶಗಳಲ್ಲಿ ಆರಂಭವಾಗಿವೆ. ಭಾರತವು ವಾಟ್ಸಾಪ್‌ಗೆ ಅತಿದೊಡ್ಡ ಮಾರುಕಟ್ಟೆಯಾಗಿರುವುದರಿಂದ ಇಲ್ಲಿಯೂ ಶೀಘ್ರ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ.


