2026ರ ಹೊಸ ವರ್ಷ ಆರಂಭವಾಗುತ್ತಿರುವಂತೆ ಇಂಧನ ಬೆಲೆಗಳಲ್ಲಿ ಇಳಿಕೆಯಾಗಲಿದೆ. ಜನವರಿ 1ರಿಂದ ಸಿಎನ್ಜಿ ಮತ್ತು ದೇಶೀಯ ಪಿಎನ್ಜಿ ಬೆಲೆಗಳು ಪ್ರತಿ ಯೂನಿಟ್ಗೆ 2 ರಿಂದ 3 ರೂಪಾಯಿ ಕಡಿಮೆಯಾಗಲಿವೆ. ಇದರಿಂದ ಸಾರಿಗೆ ವೆಚ್ಚ ಕಡಿಮೆ ಯಾಗಲಿದೆ, ಪೈಪ್ ಮೂಲಕ ಮನೆಗಳಲ್ಲಿ ಅಡುಗೆ ಅನಿಲ ಬಳಸುವವರಿಗೆ ನೇರ ಪ್ರಯೋಜನ ಲಭಿಸಲಿದೆ.
ಈಗ ಗೃಹ ಬಳಕೆ (14.2 ಕೆಜಿ) ಎಲ್ಪಿಜಿ ಸಿಲಿಂಡರ್ ಬೆಲೆ ಹೀಗಿದೆ, ದೆಹಲಿ: 853, ಕೋಲ್ಕತ್ತಾ: 879, ಮುಂಬೈ: 852.50, ಚೆನ್ನೈ: 868.50 ರೂಪಾಯಿ ಇದೆ. ಮಾರ್ಚ್ 2024ರಿಂದ ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಕಡಿಮೆಯಾದರೆ ಹೋಟೆಲ್ಗಳು ಮತ್ತು ವ್ಯಾಪಾರಗಳಿಗೆ ಪ್ರಯೋಜನವಾಗಿ ಹೊರಗಿನ ಆಹಾರ ಬೆಲೆಗಳಲ್ಲೂ ಇಳಿಕೆಯಾಗುವ ಸಾಧ್ಯತೆಯಿದೆ.ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ವರ್ಷಕ್ಕೆ 9 ಸಿಲಿಂಡರ್ಗಳಿಗೆ ತಲಾ 300 ರೂಪಾಯಿ ಸಬ್ಸಿಡಿ ಸಿಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 60 ಡಾಲರ್ ಇದೆ. ಕಳೆದ ಕೆಲವು ವರ್ಷಗಳಲ್ಲಿ ಇದಙೇ ಕಡಿಮೆ ಮಟ್ಟಕ್ಕೆ ತೈಲ ಬೆಲೆಗಳು ಶೇ.21 ಕುಸಿದಿವೆ. ಹೊಸ ವರ್ಷದಲ್ಲಿ ಇಂಧನ ಬೆಲೆಗಳ ಇಳಿಕೆಯಿಂದ ಸಾಮಾನ್ಯ ಜನರ ಕೈಲಿ ಹಣ ಉಳಿಯಲಿದೆ.


