ಮಡಿಕೇರಿಯ ಮಲ್ಮ, ಕಕ್ಕಬ್ಬೆ ವ್ಯಾಪ್ತಿಯ ಇಗ್ಗುತಪ್ಪ ಹಾಗೂ ನಾಲಾಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬುಧವಾರ ಸಂಜೆ ಕಾಣಿಸಿಕೊಂಡ ಕಾಡ್ಗಿಚ್ಚು 20 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಮಡಿಕೇರಿ ಭಾಗಮಂಡಲ ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚಿನಿಂದ ಚಂದ್ರದ್ರೋಣ ಪರ್ವತಗಳ ಸಾಲಿನ ರಕ್ಷಣೆ ಮಾಡಲು ಅರಣ್ಯ ಇಲಾಖೆ ಮುಂದಾಗಿ ಡ್ರೋನ್ ಕಣ್ಗಾವಲು ಅಳವಡಿಸಲು ಕ್ರಮ ಕೈಗೊಂಡಿದೆ.
ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕಾಡ್ಗಿಚ್ಚು ಎಕರೆಗಟ್ಟಲೆ ಪ್ರಮಾಣದ ಅರಣ್ಯ ಸಂಪ ತ್ತನ್ನು ಬಲಿ ತೆಗೆದುಕೊಂಡಿದೆ. ನಿಯಂತ್ರಿಸಲು ಇಲಾಖೆಗೆ ಎರಡು, ಮೂರು ದಿನಗಳೇ ಬೇಕಾದವು. ಮುಳ್ಳಯ್ಯನ ಗಿರಿ ಮತ್ತು ಕಲ್ಲತ್ತಗಿರಿ ಪ್ರದೇಶದಲ್ಲಿ ಕಾಡ್ಗಿಚ್ಚು ಅಮೂಲ್ಯ ವನಸಂಪತ್ತನ್ನು ದಹಿಸಿರುವುದು ವರದಿಯಾಗಿದೆ.
ಬೇಸಿಗೆಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಸಹಜ ವಿದ್ಯಮಾನವಾಗಿದ್ದು, ಪ್ರತಿವರ್ಷ ಇದನ್ನು ಎದುರಿಸಲು ಅಧಿಕಾರಿ ಗಳು ಸಾಕಷ್ಟು ಮುಂಜಾಗ್ರತೆ ವಹಿಸಿರುತ್ತಾರೆ. ಆದರೆ ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಕಾಡಿಗೆ ಬೆಂಕಿ ಬಿದ್ದಿರು ವುದು ಅನುಮಾನಗಳಿಗೂ ಕಾರಣವಾಗಿದೆ.