ಗಂಡನೊಬ್ಬ ಹೆಂಡತಿಯ ಪಣವಾಗಿಟ್ಟು ಜೂಜಿನಲ್ಲಿ ಸೋತ ಬಳಿಕ ಆಕೆಯ ಮೇಲೆ ಮಾವ, ಮೈದುನ ಸೇರಿ ಎಂಟು ಮಂದಿ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಮಹಿಳೆ ಮೀರತ್ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬಾತನನ್ನು ಮದುವೆಯಾಗಿದ್ದಳು. ಸ್ವಲ್ಪ ಸಮಯದ ಬಳಿಕ ಪತಿ ಮತ್ತು ಅತ್ತೆ, ಮಾವ ವರದಕ್ಷಿಣೆ ತೆಗೆದುಕೊಂಡು ಬರುವಂತೆ ದೈಹಿಕ ಹಿಂಸೆ ನೀಡಲಾರಂಭಿಸಿ ಹಲ್ಲೆ ನಡೆಸುತ್ತಿದ್ದರು.
ಡ್ಯಾನಿಶ್ಗೆ ಮದ್ಯಪಾನ ಹಾಗೂ ಜೂಜಿನ ಚಟವಿತ್ತು, ಕುಡಿದು ಬಂದು ಆಕೆಯನ್ನು ಹೊಡೆಯುತ್ತಿದ್ದ. ಆಕೆಯನ್ನು ಜೂಜುಕೋರರಿಗೆ ಪಣಕ್ಕಿಟ್ಟಿದ್ದ. ಜೂಜಿನಲ್ಲಿ ಸೋತ ಬಳಿಕ ಪರ ಪುರುಷರೊಂದಿಗೆ ಮಲಗುವಂತೆ ಒತ್ತಾಯಿಸುತ್ತಿದ್ದ, ನಂತರ ಉಮೇಶ್ ಗುಪ್ತಾ, ಮೋನು ಮತ್ತು ಅನ್ಶುಲ್ ಸೇರಿ 8 ಮಂದಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಗಂಡನ ಅಣ್ಣ ಶಾಹಿದ್ ಹಾಗೂ ಅತ್ತಿಗೆಯ ಪತಿ ಶೌಕೀನ್ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ. ತನ್ನ ಮಾವ ಯಾಮಿನ್ ಅತ್ಯಾಚಾರ ಎಸಗಿ ನೀನು ವರದಕ್ಷಿಣೆ ತರಲಿಲ್ಲ, ಆದ್ದರಿಂದ ನಾವು ಹೇಳುವುದೆಲ್ಲವನ್ನೂ ನೀನು ಪಾಲಿಸಬೇಕು, ನಮ್ಮನ್ನು ಸಂತೋಷ ಪಡಿಸಬೇಕೆಂದು ಹೇಳಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಗಂಡ ಮತ್ತು ಮನೆಯವರು ತಾನು ಗರ್ಭಿಣಿ ಆದಾಗ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದಾರೆ. ಆ್ಯಸಿಡ್ ಸುರಿದು, ನನ್ನನ್ನು ಕೊಲ್ಲುವ ಉದ್ದೇಶದಿಂದ ನದಿಗೆ ಎಸೆದಿದ್ದರು. ದಾರಿಹೋಕರು ನನ್ನನ್ನು ರಕ್ಷಿಸಿದ್ದಾರೆ, ಈಗ ಈ ಪ್ರಕರಣ ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಲಾಗುತ್ತಿದೆ ಎಂದೂ ಸಂತ್ರಸ್ತೆ ತಿಳಿಸಿದ್ದಾರೆ.
ಆಕೆ ಬಾಗ್‌ಪತ್‌ನಲ್ಲಿರುವ ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿದ್ದು, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಎಕ್ಸ್ ಅಧಿಕೃತ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


