Thursday, February 05, 2026
Menu

ಹೊಸಕೋಟೆಯಲ್ಲಿ ಪ್ರಿಯಕರನಿಗಾಗಿ ಗಂಡನನ್ನೇ ಹತ್ಯೆ ಮಾಡಿದ ಹೆಂಡತಿ

ಬೆಂಗಳೂರು ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೊಲೆ ಆರೋಪಿ ಹೆಂಡತಿಯೇ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಪ್ರಿಯಕರನಿಗಾಗಿ ಹೆಂಡತಿಯೇ ಗಂಡನನ್ನು ಹತ್ಯೆ ಮಾಡಿ ಅಪಘಾತವೆಂದು ನಂಬಿಸಿದ್ದ ಈ ಪ್ರಕರಣದ ಸತ್ಯವನ್ನು ಸೂಲಿಬೆಲೆ ಪೊಲೀಸರು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಗಳಾದ ಪುಷ್ಪಾ ಮತ್ತು ಆಕೆಯ ಪ್ರಿಯಕರ ದೇವರಾಜ್​​ನನ್ನು ಪೊಲೀಸರು ಬಂಧಿಸಿದ್ದಾರೆ. ದೇವರಾಜ್​ಗಾಗಿ ಪುಷ್ಪಾ ತನ್ನ ಪತಿ ಅಶೋಕ್ (40)ನನ್ನು ಕೊಲೆ ಮಾಡಿದ್ದಳು.

ಜನವರಿ 24ರಂದು ಅಶೋಕ್ ಮೃತದೇಹ ಗ್ರಾಮದ ಸಮೀಪದ ರಸ್ತೆಯ ತಿರುವಿನಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಇದೊಂದು ಅಪಘಾತವೆಂದು ಹೇಳಲಾಗಿದ್ದರೂ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಪೂರ್ವಯೋಜಿತ ಕೊಲೆ ಎಂಬುದು ದೃಢಪಟ್ಟಿದೆ.

ಪುಷ್ಪಾ ತನ್ನ ಪ್ರಿಯಕರ ದೇವರಾಜ್ ಹಾಗೂ ಸಹಚರರಾದ ಮುನಿಂದ್ರ ಮತ್ತು ಸಿದ್ದಪ್ಪ ಜೊತೆ ಸೇರಿ ಪಾರ್ಟಿ ನೆಪದಲ್ಲಿ ಅಶೋಕ್​​​ರನ್ನು ಕರೆದುಕೊಂಡು ಹೋಗಿ ಕೆರೆಯ ಬಳಿ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಶವವನ್ನು ರಸ್ತೆಯ ತಿರುವಿನಲ್ಲಿ ಬಿಸಾಡಿ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದರು.ಗರಾಮಸ್ಥರ ಅನುಮಾನದ ಕಾರಣ ಪೊಲೀಸರು ತನಿಖೆ ತೀವ್ರಗೊಳಿಸಿ ನಾಲ್ವರೂ
ಆರೋಪಿಗಳನ್ನು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *