ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನ ಜೊತೆಗೆ ಸೇರಿಕೊಂಡು ಪತ್ನಿ ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆದಿದ್ದಾಳೆ.
ಬಸ್ತವಾಡ ಗ್ರಾಮದ ಅಪ್ಪಾಸಾಬ ಕೊಲೆಯಾ ಗಿದ್ದು, ಆರೋಪಿ ಪತ್ನಿ ಸಿದ್ದವ್ವ ಓಲೇಕಾರ್ ಮತ್ತು ಆಕೆಯ ಪ್ರಿಯಕರ ಗಣಪತಿ ಕಾಂಬಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜ.5ರಂದು ಸುಗಂಧಾದೇವಿ ದರ್ಶನಕ್ಕೆ ಎಂದು ಅಪ್ಪಾಸಾಬ ಅವರನ್ನು ಕರೆದುಕೊಂಡು ಬಂದು ಕೃಷ್ಣಾ ನದಿ ದಂಡೆ ಮೇಲೆ ಸ್ನಾನ ಮಾಡುವಾಗ ಪತ್ನಿ ಸಿದ್ದವ್ವ ಮತ್ತು ಗಣಪತಿ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಶವವನ್ನು ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.
ನದಿಯಲ್ಲಿ ಶವ ಸಿಕ್ಕ ಬಳಿಕ ರಾಯಬಾಗ ಪೊಲೀಸರು ಕೊಲೆ ಕೇಸ್ ದಾಖಲಿಸಿ ತನಿಖೆ ನಡೆಸಿದಾಗ ಹೆಂಡತಿ ಮತ್ತು ಪ್ರಿಯಕರ ಕೊಲೆ ಮಾಡಿದ್ದು ತಿಳಿದು ಬಂದಿದೆ. ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.