Menu

ಹುಣಸೂರಿನಲ್ಲಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಪ್ರಿಯಕರನೊಂದಿಗೆ ಸರಸ: ಗಂಡನಿಂದಲೇ ಪತ್ನಿಯ ಕೊಲೆ

ಮೈಸೂರಿನ ಹುಣಸೂರು ತಾಲೂಕು ಮೂಕನಹಳ್ಳಿಯಲ್ಲಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಪ್ರಿಯಕರನೊಂದಿಗೆ ಸರಸವಾಡುತ್ತಿದ್ದ ಪತ್ನಿಯನ್ನು ಗಂಡನೇ ಕೊಲೆಗೈದಿರುವ ಘಟನೆ ನಡೆದಿದೆ.

ಮೂಕನಹಳ್ಳಿಯಲ್ಲಿ ಗೀತಾ ಎಂಬಾಕೆಯ ಗಂಡ ವಿಜಯ್‌ ಕೊಲೆ ಆರೋಪಿ. ಗೀತಾ ಪ್ರಿಯಕರ ದಿಲೀಪ್​ ಜೊತೆ ಓಡಾಡುತ್ತಿದ್ದಳು ಎನ್ನುವ ಆರೋಪವಿದೆ. ಪ್ರಿಯಕರನ ಜೊತೆ ಸುತ್ತಾಡುತ್ತಿರುವುದನ್ನು ಕಂಡು ಪತ್ನಿಗೆ ವಿಜಯ್‌ ಬುದ್ದಿವಾದ ಹೇಳಿದ್ದ. ಆದರೆ ಆಕೆ ಮಾತು ಕೇಳದೆ ಅಕ್ರಮ ಸಂಬಂಧ ಮುಂದುವರಿಸಿದ್ದಳು ಎಂದು ಹೇಳಲಾಗಿದೆ.

ಪ್ರಿಯಕರನೊಂದಿಗೆ ಮಜಾ ಮಾಡುವುದಕ್ಕಾಗಿ ಗೀತಾ ಗಂಡ ವಿಜಯ್‌ಗೆ ನಿದ್ರೆ ಮಾತ್ರೆ ನೀಡುತ್ತಿದ್ದಳು ಎನ್ನಲಾಗಿದೆ. ಮಂಗಳವಾರ ರಾತ್ರಿ ಪತಿ ಹೊರಗಡೆ ಹೋಗಿದ್ದಾಗ ಪ್ರಿಯಕರ ದಿಲೀಪ್ ಮನೆಗೆ ಬಂದಿದ್ದನಂತೆ. ವಾಪಸ್ ಬಂದಾಗ​​ ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡ ವಿಜಯ್​ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಮೂವರ ನಡುವೆ ಜಗಳ ನಡೆದಿದೆ. ಆಗ ಗೀತಾ. ಪತಿಗೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಳು. ಗೀತಾ ಕೈನಿಂದ ಮಚ್ಚು ಕಿತ್ತುಕೊಂಡು ಅಟ್ಟಾಡಿಸಿಕೊಂಡ ಹೋದ ವಿಜಯ್​, ಪತ್ನಿ ಗೀತಾಗೆ ಹಲ್ಲೆ ಮಾಡಿದ್ದಾನೆ, ಸ್ಥಳದಲ್ಲೇ ಗೀತಾ ಮೃತಪಟ್ಟಿದ್ದಾಳೆ.

ಪತ್ನಿಯ ಪ್ರಿಯಕರ ದಿಲೀಪ್​ನನ್ನು ಅಟ್ಟಾಡಿಸಿಕೊಂಡು ಹೋದ ವಿಜಯ್​ ಆತನ ಕಾಲು ಮುರಿದಿದ್ದಾನೆ. ಆತನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *