Menu

ಕೊಲೆ ಆರೋಪದಡಿ ಪತಿ ಜೈಲಿನಲ್ಲಿದ್ದರೆ ಲವರ್‌ ಮನೆಯಲ್ಲಿ ಪತ್ನಿ ಪತ್ತೆ

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಪತ್ನಿಯನ್ನು ಕೊಲೆ ಮಾಡಿರುವ ಆರೋಪದಡಿ ಪತಿ ಜೈಲು ಸೇರಿರುವ ಕೊಲೆ ಕೇಸ್‌ನ ತನಿಖೆ ನಡೆಸಿದ ಪೊಲೀಸರೇ ಅಚ್ಚರಿಪಡುವಂತೆ ಕೊಲೆಯಾಗಿದ್ದಾಳೆ ಎನ್ನಲಾದ ಪತ್ನಿ ಪ್ರಿಯಕರನ ಮನೆಯಲ್ಲಿ ಆರಾಮವಾಗಿ ಇರುವುದು ಪತ್ತೆಯಾಗಿದೆ.

ಕೌಶಂಬಿಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪಡಿ ಜೈಲು ಸೇರಿದ್ದ ವ್ಯಕ್ತಿ ಈಗ ನಿಟ್ಟುಸಿರು ಬಿಡುವಂತಾಗಿದೆ. ಕೌಶಂಬಿಯ ಮಹವಾಗತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಲ್ವಾರ ಗ್ರಾಮದ ನಿವಾಸಿ ರಾಜು ತಿವಾರಿ ಎಂಬಾತನನ್ನು ಪೊಲೀಸರು ತಿಂಗಳ ಹಿಂದೆ ಪತ್ನಿ ಕೊಲೆ ಪ್ರಕರಣದಲ್ಲಿ ಬಂಧಿಸಿದ್ದರು. ರಾಜು ತಿವಾರಿ ತನ್ನ ಪತ್ನಿ ಅಂಕಿತಾಳನ್ನು ವರದಕ್ಷಿಣೆ ಕಿರುಕುಳ ನೀಡಿ ಹೊಡೆದು ಕೊಂದು ಶವ ನಾಪತ್ತೆ ಮಾಡಿದ್ದಾನೆ ಎಂಬ ದೂರನ್ನು ಪರಿಗಣಿಸಿ ಆತ ಮತ್ತು ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಅಂಕಿತಾ ದೆಹಲಿಯಲ್ಲಿ ಲವರ್‌ ಮನೆಯಲ್ಲಿ ಆರಾಮವಾಗಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಆಕೆಯ ಚಿಕ್ಕಮ್ಮನ ಮಗ ರಾಮು ಅಲಿಯಾಸ್ ಸಂಕಲ್ಪ್ ಮಿಶ್ರಾ ಜೊತೆ ಅಂಕಿತಾ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಪತಿ ರಾಜು ತಿವಾರಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಅಂಕಿತಾ, ಆಕೆಯ ತಂದೆ ಸೇರಿದಂತೆ 4 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ೨016 ರಲ್ಲಿ ರಾಜು ತಿವಾರಿ ಮತ್ತು ಅಂಕಿತಾ ಮದುವೆಯಾಗಿತ್ತು. ಅಂಕಿತಾ ಸದರ್ ಕೋಟ್ವಾಲಿ ಪ್ರದೇಶದ ತೆವಾನ್ ಗ್ರಾಮದ ನಿವಾ, ಮದುವೆ ಬಳಿಕ ಆಕೆಯ ವರ್ತನೆ ಉತ್ತಮವಾಗಿರಲಿಲ್ಲ. ಹೆಚ್ಚಾಗಿ ತಾಯಿ ಮನೆಯಲ್ಲೇ ವಾಸಿಸುತ್ತಿದ್ದಳು ಎನ್ನಲಾಗಿದೆ.

2024ರಲ್ಲಿ ಸೊಸೆ ಅಂಕಿತಾ ಚಿಕ್ಕಮ್ಮನ ಮಗ ಫತೇಪುರದ ನಿವಾಸಿ ರಾಮು ಅಲಿಯಾಸ್ ಸಂಕಲ್ಪ್ ಮಿಶ್ರಾ ಅವರೊಂದಿಗೆ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಓಡಿ ಹೋಗಿದ್ದಳು ಎಂದು ಕುಟುಂಬಸ್ಥರು ಹೇಳಿದ್ದಾರೆ. ಪಂಚಾಯಿತಿ ನಡೆದು ಸಂಕಲ್ಪ್ ಜೊತೆ ಹೋಗುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಆಕೆಯನ್ನು ರಾಜು ತಿವಾರಿ ಕುಟುಂಬಸ್ಥರು ವಾಪಸ್ ಕರೆದುಕೊಂಡಿದ್ದರು.

ಜನವರಿ 21, 2026 ರಂದು ಮತ್ತೆ ತಿಳಿಸದೆ ಮನೆಯಿಂದನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಳು. ಜನವರಿ 22 ರಂದು ರಾಜು ಕುಟುಂಬ ದೂರು ದಾಖಲಿಸಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

Related Posts

Leave a Reply

Your email address will not be published. Required fields are marked *