ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರಿನಲ್ಲಿ ಪತಿಯನ್ನು ಹತ್ಯೆ ಮಾಡಿ ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ನಂಬಿಸಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಲ್ಲಾಪುರಿ ಎಂಬಾಕೆ ವಿಷ ಹಾಕಿ ಪತಿ ವೆಂಕಟಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ನಾಟಕವಾಡಿದ್ದಾಳೆ. ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದ್ದಾರೆ ಅಂದರೆ ಪರಿಹಾರ ಸಿಗುತ್ತದೆ ಎಂದು ಈ ಕೃತ್ಯವೆಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿ ಅಡಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಪತಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ದೂರು ನೀಡಿದ್ದಳು. ಮನೆಯಿಂದ ಹೊರಹೋಗಿದ್ದ ಪತಿಯನ್ನು ಹುಲಿ ಕೊಂದು ಎಳೆದುಕೊಂಡು ಹೋಗಿರಬಹುದೆಂದು ನಾಟಕವಾಡಿದ್ದಳು.
ಈ ಬಗ್ಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಿಂಟಿ ಆಗಿ ಪರಿಶೀಲನೆ ಮಾಡಿದ್ದು, ಈ ವೇಳೆ ಯಾವುದೇ ಪ್ರಾಣಿ ಬಂದ ಕುರುಹು ಇರಲಿಲ್ಲ. ಅನುಮಾನಗೊಂಡು ಮನೆಯಲ್ಲಿ ಹುಡುಕಾಟ ನಡೆಸಿದ ಪೊಲೀರು ಮನೆಯ ಹಿಂದಿನ ತಿಪ್ಪೆಗುಂಡಿಯಲ್ಲಿ ವೆಂಕಟಸ್ವಾಮಿಯ ಶವ ಪತ್ತೆ ಹಚ್ಚಿದ್ದಾರೆ.
ಬೆಂಗಳೂರಲ್ಲಿ ಬಾಗಿಲು ಮುರಿಯದೆ ಬೀಗ ಒಡೆಯದೆ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು
ಕಳ್ಳನೊಬ್ಬ ಬಾಗಿಲು ಮುರಿಯದೆ ಬೀಗ ಒಡೆಯದೆ ಮನೆ ಒಳಗೆ ನುಗ್ಗಿ ಹಣ, ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಾಗಲಗುಂಟೆಯರಾಮಯ್ಯ ಬಡಾವಣೆಯಲ್ಲಿ ದರ್ಶನ್ ಎಂಬವರ ಮನೆಯ ವಿಂಡೋ ಓಪನ್ ಮಾಡಿ ಲಾಕ್‌ನ ಸ್ಕ್ರೂ ಬಿಚ್ಚಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿಕೊಂಡು ಹೋಗಿದ್ದಾನೆ. 45 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ಮೂರು ಲಕ್ಷ ನಗದು ದೋಚಿದ್ದಾನೆ.
ಕಳ್ಳ ಬರುವಾಗ ಬರಿಗೈಲಿ ಬಂದು ವಾಪಸ್ ಆಗುವಾಗ ಬ್ಯಾಗ್ ಸಮೇತ ಹೋಗುವ ದೃಶ್ಯ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.