ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ಪತಿಯ ಸಾವಿನ ಸುದ್ದಿ ತಿಳಿದು ಪತ್ನಿಗೂ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಪತಿ ಈಶ್ವರಪ್ಪಾ(79), ಪಾರ್ವತೆವ್ವಾ(74) ಮೃತ ದಂಪತಿ.
ಭಾನುವಾರ ರಾತ್ರಿ 10 ಗಂಟೆ ಇಬ್ಬರೂ ಕುಳಿತು ಊಟ ಮಾಡಿದ್ದರು. ಆಗ ಏಕಾಏಕಿ ಈಶ್ವರಪ್ಪಾಗೆ ಹೃದಯಾಘಾತ ವಾಗಿ ಮೃತಪಟ್ಟಿದ್ದರು. ಪತಿ ಸತ್ತಿರದ್ದಾರೆಂದು ತಿಳಿದ ಪಾರ್ವತೆವ್ವಾ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಈ ದಂಪತಿ ನಾಲ್ಕು ಮಕ್ಕಳು, 12 ಮೊಮ್ಮಕ್ಕಳನ್ನು ಅಗಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾವಂತೂರು ಗ್ರಾಮದಲ್ಲಿ ಕೂಡ ಕಳೆದ ವರ್ಷ ಜನವರಿಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಹೊಳೆಯಪ್ಪ (90) ಎಂಬವರು ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟ ವಿಷಯ ತಿಳಿದು ಪತ್ನಿ 84ರ ಗಂಗಮ್ಮ ಹೃದಯಾಘಾತದಿಂದ ಅಸು ನೀಗಿದ್ದರು.