Menu

ಪಾರ್ಲಿಮೆಂಟ್ ಸೆಷನ್ ಸಮಯದಲ್ಲಿ ಪಿಎಂ ವಿದೇಶಕ್ಕೆ ಏಕೆ ಹೋಗಬೇಕಿತ್ತು: ಸಚಿವ ಸಂತೋಷ್‌ ಲಾಡ್‌

ಪಾರ್ಲಿಮೆಂಟ್ ಸೆಷನ್ ನಡೆದಿದೆ, ಇಂಥ ಸಮಯದಲ್ಲಿ ಪಿಎಂ ಅವರು ವಿದೇಶಕ್ಕೆ ಏಕೆ ಹೋಗಬೇಕಿತ್ತು.  90 ದೇಶ ಒಳಗೊಂಡಂತೆ 180 ಸಲ ಮೋದಿ  ವಿದೇಶ ಪ್ರವಾಸ ಮಾಡಿದ್ದಾರೆ. ಪಾರ್ಲಿಮೆಂಟ್ ಸೆಷನ್ ನಡೆಯಬೇಕಾದ್ರೆ ವಿದೇಶ ಪ್ರವಾಸ ಏಕೆ ಮಾಡಬೇಕು, ಸದನದಲ್ಲಿ ಇದ್ದು ಉತ್ತರ ಕೊಡಬಾರದಾ? ಇದನನ್ನು ಕೇಳುವ ಅವಕಾಶ ಇಲ್ಲವೇ ಎಂದು ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದ್ದಾರೆ.

11 ವರ್ಷಗಳಿಂದ ಇಡೀ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲಾಗ್ತಿದೆ, ರಾಷ್ಟ್ರೀಯ ‌ಮಾಧ್ಯಮಗಳ ಪ್ರೈಮ್ ಟೈಮಲ್ಲಿ ಏನು ಬರುತ್ತೋ ಅದನ್ನೇ ನೋಡಿ ಸುಮ್ಮನಾಗೋದು, ರಾಷ್ಟ್ರೀಯ ಮಾಧ್ಯಮದ ಕೆಲvu ನಿರೂಪಕರು ಬಿಜೆಪಿ ವಕ್ತಾರರಂತೆ ಮಾತನಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ  ಸಂತೋಷ ಲಾಡ್ , ಬಡವರಿಗೆ,‌ ಕಟ್ಟ ಕಡೆಯ ವ್ಯಕ್ತಿಗೂ ಪ್ರಶ್ನಿಸುವ ಅಧಿಕಾರ ಇದೆ, ಆದರೆ ಅವರಿಗೆ ಕೇಳಬಾರದು. ಮೋದಿ ಸಾಹೇಬ್ರರನ್ನು ಯಾರೂ, ಏನೂ ಪ್ರಶ್ನಿಸಬಾರದು, ಬಿಜೆಪಿ ವಿರುದ್ಧ ಮಾತನಾಡಬಾರದು ಅಷ್ಟೇ, ಮಾಧ್ಯಮಗಳಿಗೂ ಇಂದು ಆ ಸ್ವಾತಂತ್ರ್ಯ ಇಲ್ಲದಾಗಿದೆ ಎಂದ ಸಂತೋಷ ಲಾಡ್ ಕಿಡಿ ಕಾರಿದ್ದಾರೆ.

Related Posts

Leave a Reply

Your email address will not be published. Required fields are marked *