ಜನರ ಮೇಲೆ ಅತೀ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಅವರ ಬಳಿ ಸಾಕಷ್ಟು ಹಣವಿದೆ. ಅವರಿಗೆ ಯಾಕೆ ಹಣಕಾಸಿನ ನೆರವು ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫ್ಲೋರಿಡಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾನದ ಪ್ರಮಾಣ ಹೆಚ್ಛಳ ಮಾಡಲು ಭಾರತಕ್ಕೆ ನೀಡಲಾಗುತ್ತಿದ್ದ 21 ದಶಲಕ್ಷ ಡಾಲರ್ ಮೊತ್ತವನ್ನು ನಿಲ್ಲಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ನಾವು ಯಾಕೆ ಭಾರತಕ್ಕೆ 21 ದಶಲಕ್ಷ ಡಾಲರ್ ನೀಡಬೇಕು? ಅವರ ಬಳಿ ಸಾಕಷ್ಟು ಹಣವಿದೆ. ಅತೀ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ನನಗೆ ಭಾರತ ಮತ್ತು ಪ್ರಧಾನಿ ಮೋದಿ ಮೇಲೆ ಗೌರವವಿದೆ. ಆದರೆ ಯಾವ ಕಾರಣಕ್ಕೆ ನೆರವು ನೀಡಬೇಕು ಎಂದು ಅವರು ಪ್ರಶ್ನಿಸಿದರು.
ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಳ ಮಾಡಲು ನಾವು ಯಾಕೆ ಅವರಿಗೆ ಹಣ ನೀಡಬೇಕು? ನಮ್ಮ ದೇಶದಲ್ಲಿ ಮತ ಪ್ರಮಾಣ ಎಷ್ಟಿದೆ ಗೊತ್ತಾ? ನಾವು ನೆರವು ನೀಡುವುದರಿಂದ ಆ ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕಿದಂತೆ ಆಗುತ್ತದೆ. ತಮ್ಮ ಪ್ರಜೆಗಳು ಕಟ್ಟಿದ ತೆರಿಗೆಯನ್ನು ಬೇರೆ ದೇಶಗಳಿಗೆ ಯಾಕೆ ನೀಡಬೇಕು ಎಂದು ಅವರು ಪ್ರಶ್ನಿಸಿದರು.