Thursday, November 20, 2025
Menu

ಬಳ್ಳಾರಿಯಲ್ಲಿ ಜೀನ್ಸ್‌ಪಾರ್ಕ್‌ ಎಲ್ಲಿ: ರಾಹುಲ್‌ ಗಾಂಧಿಗೆ ಆರ್‌ ಅಶೋಕ ಪ್ರಶ್ನೆ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ “ಜೀನ್ಸ್ ಪಾರ್ಕ್” ಮಾಡುತ್ತೇವೆ, ಬಳ್ಳಾರಿಯನ್ನು “ಜೀನ್ಸ್ ರಾಜಧಾನಿ” ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದ @INCKarnataka ಪಕ್ಷ ಈಗ ಸರಿಯಾದ ಮೂಲಸೌಕರ್ಯವಿಲ್ಲದೆ 36 ಜೀನ್ಸ್ ತಯಾರಿಕಾ ಘಟಕಗಳು ಮುಚ್ಚುವ ಪರಿಸ್ಥಿತಿ ತಂದಿಟ್ಟಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಪ್ರಶ್ನಿಸಿದ್ದಾರೆ.

Mr @RahulGandhi ಅವರೇ, ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಇನ್ನೂ take off ಆಗದ ನಿಮ್ಮ ಕಾಂಗ್ರೆಸ್ ಸರ್ಕಾರವನ್ನು ಈಗಲಾದರೂ ಎಬ್ಬಿಸದಿದ್ದರೆ ನಿಮ್ಮ ಪಕ್ಷಕ್ಕೆ ಬಿಹಾರದಲ್ಲಿ ಬಂದ ಗತಿಯೇ ಕರ್ನಾಟಕದಲ್ಲೂ ಬರುವುದು ನಿಶ್ಚಿತ. ಸಿಎಂ @siddaramaiah ಅವರೇ, ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿ. ಜೀನ್ಸ್ ಪಾರ್ಕ್ ನಿರ್ಮಾಣವಾಗಿ ಜೀನ್ಸ್ ತಯಾರಿಕಾ ಘಟಕಗಳಿಗೆ ಅಗತ್ಯವಾದ STP ಗಳು ಇದ್ದಿದ್ದರೆ, ಹೀಗೆ ರಾತ್ರೋರಾತ್ರಿ ಘಟಕಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತಿರಲಿಲ್ಲ. ಏಳಿ ಸ್ವಾಮಿ, ಎದ್ದೇಳಿ. ಕರ್ನಾಟಕವನ್ನು ಉಳಿಸಿ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮತ್ತೊಂದು ಪೋಸ್ಟ್‌ ಮಾಡಿರುವ ಅವರು, ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಮೆಕ್ಕೆಜೋಳ ಬೆಳೆಗಾರರ ಆಕ್ರೋಶ ಭುಗಿಲೆದ್ದಿದೆ. ಪ್ರತಿ ಬಾರಿಯೂ ರೈತರ ಪರವಾಗಿದ್ದೇವೆ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್‌ನ ಬಣ್ಣ ಈಗ ಬಯಲಾಗಿದೆ. ರೈತರೇ ಬೀದಿಗಿಳಿದು ಕೈ ಸರ್ಕಾರದ ರೈತ ವಿರೋಧಿ ನೀತಿಯನ್ನು ಬಯಲಿಗೆಳೆಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಮೆಕ್ಕೆಜೋಳ ಬೆಳೆಗಾರರು ನ್ಯಾಯಯುತ ಬೆಲೆ ನೀಡಿ ಖರೀದಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ರೈತರ ಈ ಕೂಗಿಗೆ ಕಿವಿ ಮುಚ್ಚಿ ಕುಳಿತಿರುವ ಕಾಂಗ್ರೆಸ್ ಸರ್ಕಾರ ಮೆಕ್ಕೆಜೋಳ ಬೆಳೆಗಾರರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ, ಈ ಪ್ರತಿಭಟನೆಯ ಜ್ವಾಲೆ ಇಡೀ ರಾಜ್ಯಕ್ಕೆ ವ್ಯಾಪಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *