Menu

ಬಬಲಾದಿ ಸದಾಶಿವ ಮುತ್ಯಾ ನುಡಿದ ಕಾಲಜ್ಞಾನ ಭವಿಷ್ಯ ಏನು

ರಾಜ್ಯ ರಾಜಕೀಯ ಹಾಗೂ ಮುಂದಿನ ವರ್ಷದ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಶ್ರೀ ಸದಾಶಿವ ಮುತ್ಯಾ ಸ್ಪೋಟಕ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಂದು ನಡೆಯುವ ಜಾತ್ರೆ ವೇಳೆ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಸದಾಶಿವ ಮುತ್ಯಾ ನುಡಿವ ಕಾಲಜ್ಞಾನ ಭವಿಷ್ಯವಾಣಿ ಪ್ರಸಿದ್ಧಿ ಪಡೆದಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆಯೂ ಭವಿಷ್ಯ ನುಡಿದಿರುವ ಮುತ್ಯಾ, ಕರ್ನಾಟಕ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ.

ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಿಯಣ್ಣ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವು ಆಗಲಿದೆ. ಹಣದ ಹಿಂದೆ ಹೋಗುವರ ಬಂಧುತ್ವದ ಸಮಯ ತಿಳಿಯಿರಿಯಣ್ಣ. ಈ ವರ್ಷ ವಿದ್ಯುಚ್ಛಕ್ತಿ, ನೀರಿನ ಕೊರತೆ ಬಹಳ ಆಗುತ್ತದೆ ಎಂದು ಸದಾಶಿವ ಮುತ್ಯಾ ಎಂದು ಭವಿಷ್ಯ ನುಡಿಯುವ ಮೂಲಕ ಬರಗಾಲದ ಮುನ್ಸೂಚನೆ ನೀಡಿದ್ದಾರೆ.

ಭೂಕಂಪ, ಅಗ್ನಿ ದುರಂತಗಳು ಹೆಚ್ಚಾಗಲಿವೆ. ಧರ್ಮ ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗುತ್ತದೆ. ಈ ವರ್ಷದಲ್ಲಿ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ಮೂಡಲಿದೆ ಎಂದಿದ್ದಾರೆ.  ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ವಿದ್ಯಮಾನಗಳು ಮತ್ತು ಅಚ್ಚರಿಯ ಘಟನೆಗಳು ನಡೆಯುತ್ತಿರುವ ಸಂದರ್ಭ ದಲ್ಲೇ ಮುತ್ಯಾ ಈ ರೀತಿ ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ.

Related Posts

Leave a Reply

Your email address will not be published. Required fields are marked *