Menu

ಬೀಟಾ ಜನರೇಶನ್ ಏನು, ಎತ್ತ ?

ನಾವು ಇಷ್ಟು ವರ್ಷ ಬದಲಾದ ಕಾಲಕ್ಕೆ ತಕ್ಕಂತೆ ಮೊಬೈಲ್ ನೆಟ್ವರ್ಕ್‌ಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿಗಳನ್ನು ನೋಡಿದ್ದೇವೆ ಮತ್ತು ಅವುಗಳ ಉಪಯೋಗ ಪಡೆದಿದ್ದೇವೆ. ಆದರೆ, ಮನುಷ್ಯರಲ್ಲಿಯೂ ಕಾಲಕ್ಕೆ ತಕ್ಕಂತೆ ಹೊಸ ಜನರೇಶನ್‌ಗಳು ಆರಂಭವಾಗಿವೆ. 2025ರ ಜನವರಿ 1ರಿಂದ 2039ರವರೆಗೂ ಹುಟ್ಟುವ ಮಕ್ಕಳನ್ನು ಜನರೇಶನ್ ಬೀಟಾ ಎಂದು ಕರೆಯುತ್ತಾರೆ. ಜನರೇಶನ್ ಬೀಟಾ ಕುರಿತು ತಿಳಿದುಕೊಳ್ಳುವುದಕ್ಕೂ ಮುಂಚೆ ಬೇರೆ ಜನರೇಶನ್‌ಗಳ ಕುರಿತು ತಿಳಿದುಕೊಳ್ಳುವುದು ಅವಶ್ಯಕ.

2025ರಿಂದ 45ರವರೆಗೂ ಜನಿಸಿದ ಮಕ್ಕಳನ್ನು ಬಿಲ್ಡರ್ ಜನರೇಷನ್ ಅಥವಾ ಸೈಲೆಂಟ್ ಜನರೇಷನ್ ಎನ್ನುತ್ತಾರೆ. ಏಕೆಂದರೆ ಎರಡನೇ ಜಾಗತಿಕ ಯುದ್ಧದ ನಂತರ ತಮ್ಮ ದೇಶಗಳನ್ನು ಪುನರ್ ನಿರ್ಮಿಸಲು ಪ್ರಮುಖ ಪಾತ್ರವನ್ನು ಈ ಜನರೇಶನ್ ವಹಿಸಿತ್ತು. ಈ ಪೀಳಿಗೆಯು ಅತ್ಯಂತ ಸಂಪ್ರದಾಯ ಬದ್ಧವರಾಗಿರು ತ್ತಾರೆ. ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡುವ ಲಕ್ಷಣಗಳನ್ನು ಹೊಂದಿದ್ದರು ಮತ್ತು ಅತ್ಯುತ್ತಮ ಪರಸ್ಪರ ಕೌಶಲ್ಯಗಳನ್ನು ಹೊಂದಿದ್ದರು. ಈ ಪೀಳಿಗೆಯು ಮೊದಲನೇ ಮತ್ತು ಎರಡನೇ ಮಹಾಯುದ್ಧಗಳನ್ನು ಕಂಡಿತ್ತು ಹಾಗೂ 1929ರ ಮಹಾಆರ್ಥಿಕ ಮುಗ್ಗಟ್ಟಿನ ಕಷ್ಟಗಳನ್ನು ಅನುಭವಿಸಿದ್ದರು. ಜೊತೆಗೆ ಈ ಪೀಳಿಗೆ ಯು ಆಟೋಮೊಬೈಲ್ಸ್ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿತು.

1945ರಲ್ಲಿ ಎರಡನೇ ಜಾಗತಿಕ ಯುದ್ಧದ ನಂತರ ಪ್ರಪಂಚದಾದ್ಯಂತ ಭವಿಷ್ಯದ ಭರವಸೆಯಿಂದ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಆ ಜನರೇಶನ್ ಅನ್ನು ಅಂದರೆ 1946ರಿಂದ 64ರವರೆಗೆ ಜನಿಸಿದ ಮಕ್ಕಳನ್ನು ಬೇಬಿ ಬೂಮರ್ಸ್ ಎನ್ನುತ್ತಾರೆ. ಇವರು 20ನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿರುತ್ತಾರೆ. ಇವರಲ್ಲಿ ಕಿರಿಯರು ಮತ್ತು ಹಿರಿಯರು 2025ರ ವೇಳೆಗೆ ಕ್ರಮವಾಗಿ 61 ಮತ್ತು 79ವರ್ಷ ವಯಸ್ಸಿನವರಾಗಿರುತ್ತಾರೆ. ಹೆಚ್ಚಿನ ಬೇಬಿ ಬೂಮರ್‌ಗಳು ಶ್ರೇಷ್ಠ ಪೀಳಿಗೆಯ ಮಕ್ಕಳಾಗಿರುತ್ತಾರೆ. ಬೇಬಿ ಬೂಮರ್‌ಗಳ ಅವಧಿಯಲ್ಲಿ ಅಂದರೆ 1950-60ರ ದಶಕಗಳಲ್ಲಿ ಜಗತ್ತಿನ ಶೀತಲ ಸಮರದ ಸೈದ್ಧಾಂತಿಕ ಮುಖಾಮುಖಿಯ ಭಾಗ ವಾಗಿ ಮತ್ತು ಅಂತರ್ ಯುದ್ಧದ ಅವಧಿಯ ಮುಂದುವರಿಕೆಯಾಗಿ ಆರ್ಥಿಕ ಸಮೃದ್ಧಿ ಮತ್ತು ತ್ವರಿತ ತಾಂತ್ರಿಕ ಪ್ರಗತಿಯ ಸಮಯವಾಗಿತ್ತು. ಇವರು ತಮ್ಮ ಸಮೂಹದ ಸುತ್ತಲೂ ವಾಕ್ ಚಾತುರ್ಯ ಸೃಷ್ಟಿಸಿದರು. ಚೀನಾದಲ್ಲಿ ಬೂಮರ್‌ಗಳು ಸಾಂಸ್ಕೃತಿಕ ಕ್ರಾಂತಿಯ ಮೂಲಕ ಬದುಕಿದರು ಮತ್ತು ವಯಸ್ಕರಾಗಿದ್ದಾಗ ಒಂದು ಮಗು ನೀತಿಗೆ ಒಳಪಟ್ಟರು. ಈ ಸಾಮಾಜಿಕ ಬದಲಾವಣೆಗಳು ಮತ್ತು ವಾಕ್ ಚಾತುರ್ಯವು ಬೂಮರ್‌ಗಳ ಗ್ರಹಿಕೆಗಳಲ್ಲಿ ಪ್ರಮುಖ ಪ್ರಭಾವ ಬೀರಿತು. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಎರಡನೇ ಜಾಗತಿಕ ಯುದ್ಧಗಳ ನಂತರದ ವಸತಿ ಮತ್ತು ಶಿಕ್ಷಣದಲ್ಲಿ ಹೆಚ್ಚುತ್ತಿರುವ ಶ್ರೀಮಂತಿಕೆ ಮತ್ತು ವ್ಯಾಪಕ ಸರ್ಕಾರಿ ಸಬ್ಸಿಡಿಗಳ ಸಮಯದಲ್ಲಿ ಅನೇಕ ಬೂಮರ್‌ರ್‌ಗಳು ವಯಸ್ಸಿಗೆ ಬಂದರು ಮತ್ತು ಪ್ರಪಂಚವು ಕಾಲ ನಂತರದಲ್ಲಿ ಸುಧಾರಿಸುತ್ತಿದೆ ಎಂದು ಪ್ರಾಮಾಣಿಕ ವಾಗಿ ನಿರೀಕ್ಷಿಸುತ್ತಾ ಬೆಳೆದರು.

1964ರಿಂದ 79ರವರೆಗೆ ಜನಿಸಿದವರಿಗೆ ಜನರೇಶನ್ ಎಕ್ಸ್ (ಜೆನ್ ಎಕ್ಸ್) ಎನ್ನುತ್ತಾರೆ. ಏಕೆಂದರೆ, ಅಲ್ಲಿಯವರೆಗೂ ಇದ್ದಂತಹ ಸಂಪ್ರದಾಯಗಳನ್ನು ಮತ್ತು ವ್ಯವಸ್ಥೆಗಳನ್ನು ಎದುರಿಸಿ ಪ್ರಶ್ನಿಸುತ್ತಿದ್ದ ಕಾರಣ ಎಕ್ಸ್ ಎಂಬ ಟರ್ಮ್ ಬಂದಿತು. 2019ರ ಹೊತ್ತಿಗೆ ಅಮೆರಿಕದಲ್ಲಿ 65.2 ಮಿಲಿಯನ್ ಜನರೇಶನ್ ಎಕ್ಸ್‌ಗಳು ಇದ್ದಾರೆ ಎಂಬ ಮಾಹಿತಿ ಲಭಿಸಿದೆ. ಹೆಚ್ಚಿನ ಜೆನ್ ಎಕ್ಸ್‌ಗಳು ಸೈಲೆಂಟ್ ಜನರೇಷನ್ ಮತ್ತು ಆರಂಭಿಕ ಬೇಬಿ ಬೂಮರ್‌ಗಳ ಮಕ್ಕಳು. ರಾಜಕೀಯವಾಗಿ ಎಕ್ಸ್ ಜನರೇಶನ್ ಸೋವಿಯತ್ ಒಕ್ಕೂಟ ಮತ್ತು ಮಧ್ಯ ಹಾಗೂ ಪೂರ್ವ ಯೂರೋಪಿನ ದೇಶಗಳಲ್ಲಿ ಕಮ್ಯುನಿಸಂನ ಕೊನೆಯ ದಿನಗಳನ್ನು ಅನುಭವಿಸಿತು. ಈ ಪ್ರದೇಶಗಳಲ್ಲಿ ಬಂಡವಾಳಶಾಹಿ ಪರಿವರ್ತನೆಗೆ ಸಾಕ್ಷಿಯಾದರು. ಪಾಶ್ಚಿಮಾತ್ಯ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಇದೇ ರೀತಿಯ ಅವಧಿಯನ್ನು ಸಂಪ್ರದಾಯವಾದ ಮತ್ತು ಮುಕ್ತ ಮಾರುಕಟ್ಟೆ ಅರ್ಥಶಾಸ್ತ್ರದ ಪ್ರಾಬಲ್ಯದಿಂದ ವ್ಯಾಖ್ಯಾನಿಸಲಾಗಿದೆ.

1980ರಿಂದ 95ರ ನಡುವೆ ಹುಟ್ಟಿದವರನ್ನು ಜನರೇಶನ್ ವೈ ಅಥವಾ ಮಿಲೇನಿಯಲ್ಸ್ ಎನ್ನುತ್ತಾರೆ. ಮಿಲೇನಿಯಲ್ಸ್ ಎಂದು ಕರೆಯಲು ಕಾರಣವೆಂದರೆ ಇವರ ಜೀವನದ ಪ್ರಮುಖ ಘಟ್ಟಗಳನ್ನು 20ನೇ ಶತಮಾನ ಮುಗಿದು 21ನೇ ಶತಮಾನದಲ್ಲಿ ಅನುಭವಿಸುತ್ತಿದ್ದಾರೆ. ಇಂಟರ್‌ನೆಟ್ ಅನ್ನು ಬಳಸಿದ ಮೊದಲ ಪೀಳಿಗೆ ಗಾಗಿ ಮಿಲೇನಿಯನ್ಸ್ ಅನ್ನು ಮೊದಲ ಜಾಗತಿಕ ಪೀಳಿಗೆಯಾಗಿ ಗುರುತಿಸಲಾಗಿದೆ. ಈ ಪೀಳಿಗೆಯನ್ನು ಸಾಮಾನ್ಯವಾಗಿ ಇಂಟರ್ನೆಟ, ಮೊಬೈಲ್ ಸಾಧನಗಳು, ಸಾಮಾಜಿಕ ಮಾಧ್ಯಮ ಮತ್ತು ಸಾಮಾನ್ಯವಾಗಿ ತಂತ್ರeನದ ಹೆಚ್ಚಿನ ಬಳಕೆ ಮತ್ತು ಪರಿಚಿತತೆಯಿಂದ ಗುರುತಿಸಲಾಗುತ್ತದೆ. ಪ್ರಪಂಚದಾದ್ಯಂತ ಮಿಲೇನಿಯರ್‌ ಗಳು ತಮ್ಮ ಕೆಲಸದ ಜೀವನವನ್ನು ಪ್ರಾರಂಭಿಸಿದಾಗಿನಿಂದ ಗಮನಾರ್ಹ ಆರ್ಥಿಕ ಅಡಚಣೆ ಅನುಭವಿಸಿದ್ದಾರೆ. ಮಹಾ ಆರ್ಥಿಕ ಹಿಂಜರಿತ ಮತ್ತು ಕೋವಿಡ್ -19 ಹಿಂಜರಿತದ ನಂತರ ಅನೇಕರು ಹೆಚ್ಚಿನ ಮಟ್ಟದ ಯುವ ನಿರುದ್ಯೋಗ ಅನುಭವಿಸುತ್ತಿದ್ದಾರೆ.

1996ರಿಂದ 2010ರ ನಡುವೆ ಜನಿಸಿದವರನ್ನು ಜನರೇಶನ್ ಝೆಡ್ ಅಥವಾ ಜೂಮರ್ಸ್ ಎನ್ನುತ್ತಾರೆ. ಪೂರ್ತಿಯಾಗಿ ಡಿಜಿಟಲ್ ಪ್ರಪಂಚದಲ್ಲಿಯೇ ಬೆಳೆದ ಮೊದಲ ಜನರೇಶನ್ ಇದಾಗಿದೆ. ಜನರೇಷನ್ ಝೆಡ್ ಹಿಂದಿನ ತಲೆಮಾರುಗಳಿಗಿಂತ ನಿಧಾನಗತಿಯಲ್ಲಿ ಬದುಕುತ್ತಿದೆ. ಇವರು ಶಾಲೆ ಮತ್ತು ಉದ್ಯೋಗದ ನಿರೀಕ್ಷೆಗಳ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ಈ ಗುಂಪಿನಲ್ಲಿ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಅಲರ್ಜಿಯ ಹರಡುವಿಕೆಯು ಸಾಮಾನ್ಯ ಜನ ಸಂಖ್ಯೆ ಗಿಂತ ಹೆಚ್ಚಾಗಿದೆ ಮತ್ತು ನಿದ್ರಾಹೀನತೆಯು ಹೆಚ್ಚಾಗಿ ವರದಿಯಾಗಿದೆ. ಅನೇಕ ದೇಶಗಳಲ್ಲಿ ಜನರೇಷನ್ ಝೆಡ್ ಯುವಕರು ಹಳೆಯ ತಲೆಮಾರುಗಳಿ ಗಿಂತ ಬೌದ್ಧಿಕ ವಿಕಲಚೇತನರು ಮತ್ತು ಮನೋವೈದ್ಯಕೀಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸಾಧ್ಯತೆಗಳು ಹೆಚ್ಚಿವೆ.

ನಂತರ 2010ರಿಂದ 2024ರ ಡಿಸೆಂಬರ್ 31ರ ನಡುವೆ ಜನಿಸಿದ ಪೀಳಿಗೆಯನ್ನು ಜನರೇಶನ್ ಆಲ್ಫಾ ಎನ್ನುವರು. ಪ್ರಪಂಚದಾದ್ಯಂತ ಫಲವತ್ತತೆಯ ದರಗಳು ಕುಸಿಯುತ್ತಿರುವ ಸಮಯದಲ್ಲಿ ಆಲ್ಫಾ ಪೀಳಿಗೆ ಜನಿಸಿದ್ದು ಮತ್ತು ಚಿಕ್ಕ ಮಕ್ಕಳು ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ಅನುಭವಿಸಿದ್ದಾರೆ. ಎಲೆಕ್ಟ್ರಾನಿಕ್ ತಂತ್ರeನ, ಸಾಮಾಜಿಕ ನೆಟ್ವರ್ಕ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳಿಂದ ಈ ಪೀಳಿಗೆಯು ಹೆಚ್ಚು ಪ್ರಾಬಲ್ಯ ಹೊಂದಿದೆ. ಸಾಂಪ್ರ ದಾಯಿಕ ದೂರದರ್ಶನ ಮಾಧ್ಯಮದಲ್ಲಿನ ಆಸಕ್ತಿಯು ಈ ಪೀಳಿಗೆಯಲ್ಲಿ ಏಕಕಾಲದಲ್ಲಿ ಕುಸಿಯುತ್ತಿದೆ. ತರಗತಿಯ ಕೊಠಡಿಗಳು ಮತ್ತು ಜೀವನದ ಇತರ ಅಂಶ ಗಳಲ್ಲಿ ತಂತ್ರeನದ ಬಳಕೆಯಲ್ಲಿನ ಬದಲಾವಣೆಗಳು ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಈ ಪೀಳಿಗೆಯಲ್ಲಿ ಹೆಚ್ಚಾಗಿದೆ.

ಜನರೇಷನ್ ಬೀಟಾ ಈಗ ತಾನೇ ಜನ್ಮತಾಳಿದ ಪೀಳಿಗೆ. ಭಾರತದಲ್ಲಿ ಜನಿಸಿದ ಜನರೇಶನ್ ಬೀಟಾ ವರ್ಗದ ಮೊದಲ ಮಗುವಿನ ಹೆಸರು ಫ್ರಾಂಕಿ. 2025ರ ಜನವರಿ 1ರ ಬೆಳಗ್ಗೆ 12.03 ನಿಮಿಷಕ್ಕೆ ಮಿಜೋರಾಮ್ ರಾಜಧಾನಿ ಐಸ್ವಾಲ್‌ನಲ್ಲಿ ಈ ಮಗು ಜನಿಸಿತು. ಬೀಟಾ ಜನರೇಶನ್ ಮಕ್ಕಳು ಅಡ್ವಾನ್ಸ್‌ಡ್ ಎಐ ಅಪ್ಲಿ ಕೇಶನ್ಸ್‌ಗಳ ಮಧ್ಯೆ ಬೆಳೆಯಲಿದ್ದಾರೆ. ಜನರೇಶನ್ ಆಲ್ಫಾ ಹೆಸರು ನೀಡಿದ ಮಾರ್ಕ್ ಮೆಕ್ ಕ್ರಿಂಡಲ್ ರವರೇ ಜನರೇಷನ್ ಬೀಟಾ ಹೆಸರನ್ನು ನೀಡಿದ್ದಾರೆ. ಇವರ ಪ್ರಕಾರ 2025ರ ವೇಳೆಗೆ ಈ ಪೀಳಿಗೆಯ ಜನಸಂಖ್ಯೆಯು ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 16ರಷ್ಟಿರುತ್ತದೆ. ಈ ಪೀಳಿಗೆಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸುತ್ತಿರುವವರು ಜೇಸನ್ ಡೋರ್ಸೆ.

ಪ್ರತಿ 15-20 ವರ್ಷಗಳಿಗೊಮ್ಮೆ ಪೀಳಿಗೆಗಳು ಬದಲಾಗಲಿದ್ದು, ಪ್ರತಿ ಪೀಳಿಗೆಯಲ್ಲೂ ಹೊಸ-ಹೊಸ ಪದ್ಧತಿ ಹಾಗೂ ತಂತ್ರಜ್ಞಾನದಲ್ಲಿ ಬದಲಾವಣೆಯಾಗಲಿದೆ. ಸೋಶಿಯಲ್ ಈವೆಂಟ್ಸ್‌ಗಳ ಆಧಾರದ ಮೇಲೆ ಹೊಸ ಪೀಳಿಗೆಗಳಿಗೆ ಹೆಸರುಗಳನ್ನು ನೀಡಲಾಗುತ್ತದೆ. ಈಗ ಜನಿಸಿರುವ ಜನರೇಶನ್ ಬೀಟಾ ಕುರಿತು ಸಾಕಷ್ಟು ನಿರೀಕ್ಷೆಗಳಿದ್ದು, ಅತ್ಯಾಧುನಿಕ ತಂತ್ರಜ್ಞಾನ ನಡುವೆ ಈ ಪೀಳಿಗೆ ಬೆಳೆಯಲಿದೆ. ಹಿಂದಿನ ಸಂಪ್ರದಾಯಗಳನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

– ಶಶಿಕುಮಾರ್ ಕೆ.
ಲೇಖಕ
ಮೊ: 7829676981  

Related Posts

Leave a Reply

Your email address will not be published. Required fields are marked *