ನವದೆಹಲಿ: ಪಾಕಿಸ್ತಾನದ ಮೇಲಿನ ದಾಳಿ ಐತಿಹಾಸಿಕವಾಗಿದ್ದು, ಈ ಬಾರಿ ನಡೆಸಿದ ದಾಳಿಯಲ್ಲಿ ಒಬ್ಬ ನಾಗರಿಕ ಕೂಡ ಮೃತಪಟ್ಟಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಭಾರತೀಯರ ಪ್ರವಾಸಿಗರನ್ನು ಹತ್ಯೆಗೈದ ಉಗ್ರರಿಗೆ ತಕ್ಕ ಪಾಠ ಕಲಿಸಲಾಗಿದೆ ಎಂದರು.
ಮುಗ್ಧ ಭಾರತೀಯರನ್ನು ಹತ್ಯೆಗೈದವರನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಭಾರತೀಯ ಸೇನೆ ಹೆಮ್ಮೆ ಪಡುವಂತಹ ದಾಳಿ ಇದಾಗಿದೆ ಎಂದು ಅವರು ಹೇಳಿದರು.