ಬೆಂಗಳೂರಿನಲ್ಲಿ ನವ ವಿವಾಹಿತೆ ಗಾನವಿ ಆತ್ಮಹತ್ಯೆಗೆ ಆಕೆಯ ವಿವಾಹಪೂರ್ವ ಪ್ರೇಮ ಕಥೆಯೇ ಕಾರಣ ಎಂದು ಪತಿ ಸೂರಜ್ ಭಾವ ಜ್ಕುಮಾರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರು ಪತಿ ಸೂರಜ್ ಮತ್ತು ಅತ್ತೆ ಜಯಂತಿ ಕಾರಣವೆಂದು ಆರೋಪಿಸಿದ್ದರು. ವರದಕ್ಷಿಣೆ ಕಿರುಕುಳ ಆರೋಪಕ್ಕೆ ಮನನೊಂದ ಪತಿ ಸೂರಜ್ ನಾಗಪುರದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ಅವರ ತಾಯಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾನವಿಯ ಹಿಂದಿನ ಪ್ರೀತಿ ಕಥೆಯೇ ಇಷ್ಟಕ್ಕೆಲ್ಲ ಕಾರಣ ಎಂಬ ಆರೋಪ ಕೇಳಿಬಂದಿದೆ.
ಸೂರಜ್ ಕುಟುಂಬದವರು ಗಾನವಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು ಎಂದು ದೂರಿದ್ದು, ಆಕೆಯ ಕುಟುಂಬದ ಆರೋಪ ಸುಳ್ಳು ಎಂದು ಸೂರಜ್ ಭಾವ ರಾಜ್‌ಕುಮಾರ್ ಎಂಬವರು ವಿದ್ಯಾರಣ್ಯಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಗಾನವಿ ಈ ಹಿಂದೆ ಹರ್ಷ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗಲು ನಿರ್ಧರಿಸಿದ್ದಳು. ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್ನ ಮದುವೆಯಾಗಿದ್ದಾಳೆ. ಶ್ರೀಲಂಕಾಗೆ ಹನಿಮೂನ್ ಹೋದಾಗ ಪ್ರೀತಿ ವಿಚಾರವನ್ನು ಆಕೆ ಸೂರಜ್ಗೆ ತಿಳಿಸಿದ್ದಳು. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಹನಿಮೂನ್ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ವಾಪಸಾಗಿದ್ದರು. ನಂತರ ಗಾನವಿಯನ್ನು ಮನೆಗೆ ಕುಟುಂಬಸ್ಥರು ಕರೆದೊಯ್ದಿದ್ದು, ಡಿಸೆಂಬರ್ 24ರಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಬಳಿಕ ಸೂರಜ್ ಮೇಲೆ ಆಕೆಯ ತಾಯಿ ರುಕ್ಮಿಣಿ ಕಿರುಕುಳ ಆರೋಪ ಹೊರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಾದ ಬಳಿಕ ಸೂರಜ್ ಮತ್ತು ಆತನ ತಾಯಿ ಜಯಂತಿ ನಾಗಪುರಕ್ಕೆ ತೆರಳಿದ್ದರು. ನೊಂದಿದ್ದ ಸೂರಜ್ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾನವಿಯ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ, ರಾಧಾ, ಬಾಬುಗೌಡ, ಸತೀಶ್ ಕಾರಣ ಎಂದು ರಾಜ್‌ಕುಮಾರ್ ದೂರಿದ್ದಾರೆ.


