Menu

ವಕ್ಫ್ ತಿದ್ದುಪಡಿ: ಭಾರತದ ನೆಲದಲ್ಲಿ ಸಂವಿಧಾನವೇ ಸಾರ್ವಭೌಮ

ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ೧೪ನೇ ವಿಧಿಯ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಿಯಮದ ಪಾಲನೆಗಾಗಿ ಸಂಸತ್ತಿನ ವಕ್ಫ್ ತಿದ್ದುಪಡಿ ವಿಧೇಯಕವು ಅಂಗೀಕೃತವಾಗಿ ಕಾಯಿದೆಯಾಗಿ ರೂಪುಗೊಳ್ಳುತ್ತಿದೆ. ಭಾರತದ ನೆಲದಲ್ಲಿ ಯಾವುದೇ ವೈಯಕ್ತಿಕವಿರಬಹುದು ಅಥವಾ ಇನ್ನಾವುದೇ ಕಾಯಿದೆಗಳು ಸಂವಿಧಾನಕ್ಕಿಂತ ದೊಡ್ಡವಲ್ಲ. ಸಂವಿಧಾನದಡಿ ಸೃಜನೆಗೊಂಡ ಕಾಯಿದೆಯೇ ಎಲ್ಲರಿಗಿಂಲೂ ದೊಡ್ಡದು. ಯಾವುದೇ ಕಾಯಿದೆಗಳೂ ನಮ್ಮ ಸಂವಿಧಾನವನ್ನು ಸೋಲಿಸಲು ಐತಿಹಾಸಿಕ ಪರಂಪರೆಯುಳ್ಳ ನಮ್ಮ ಸಂಸತ್ತು ಎಂದೂ ಅವಕಾಶ ಮಾಡಿಕೊಡಲೇಬಾರದು.

ಬಹು ನಿರೀಕ್ಷಿತ ವಕ್ಫ್ ಕಾಯಿದೆ ತಿದ್ದುಪಡಿಗೆ ಸಂಸತ್ತಿನ ಉಭಯ ಸದನಗಳ ಬಹುಮತದ ಬೆಂಬಲ ದೊರೆತಿದೆ. ಇದು ದೇಶದ ಅದರಲ್ಲೂ ವಿಶೇಷವಾಗಿ ಬಡ ಮುಸ್ಲಿಮರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಅತ್ಯಂತ ಶ್ಲಾಘನೀಯ ಕ್ರಮವಾಗಿದೆ.

ದೇಶ ವಿಭಜನೆಯ ನಂತರ ಅದರಲ್ಲೂ ಸರ್ವತಂತ್ರ ಸ್ವತಂತ್ರ ಗಣರಾಜ್ಯದವಾದ ಭಾರತ ದೇಶವು ತನ್ನದೇ ಆದ ಸಂವಿಧಾನವನ್ನು ಅಂಗೀಕರಿಸಿದಾಗಲೇ ಪ್ರಸ್ತುತವಿದ್ದ ವಕ್ಫ್ ಕಾಯಿದೆಗೆ ತಿಲಾಂಜಲಿ ನೀಡಬೇಕಿತ್ತು. ಆ ನಂತರ ನಮ್ಮ ದೇಶದ ಹಿತದೃಷ್ಟಿಗೆ ಅನುಸಾರವಾಗಿ ಹಾಗೂ ಭಾರತೀಯ ಬಡ ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿತ ಕಾಯ್ದೆ ಜಾರಿಗೊಳಿಸಬೇಕಿತ್ತು. ಆದರೆ ಆಗ ಆಗಿದ್ದೇ  ಬೇರೆ. ಅಷ್ಟಾಗಿಯೂ ಅದೇ ಕಾಯಿದೆಯನ್ನೇ ಮುಂದುವರೆಸಿಕೊಂಡು ಬಂದುದು ಮಾತ್ರ ನಿಜಕ್ಕೂ ದುರಂತದ ಸಂಗತಿ.

ದೇಶದ ಹಾಗೂ ಬಡ ಮುಸ್ಲಿಮರ ಹಿತದೃಷ್ಟಿಯಿಂದ ಅದು ಏನಾಗಬೇಕಿತ್ತೋ ಅದು ಈಗ ಆಗಿದೆ. ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷದ ನಂತರವಾದರೂ ಈ ಕ್ರಮಕ್ಕೆ ಸರ್ಕಾರ ಮುಂದಾಗಿರುವುದು ನಿಜಕ್ಕೂ ಐತಿಹಾಸಿಕ ನಡೆಯಾಗಿದೆ.

ಸ್ವಾತಂತ್ರ್ಯಾನಂತರ ಸ್ವತಂತ್ರ ಗಣರಾಜ್ಯವಾದ ಭಾರತವು ಸಂವಿಧಾನವನ್ನು ಅಂಗೀಕರಿಸಿದಾಗ ಸಂವಿಧಾನ ರಚನಾ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಅವರು, ಹೇಳಿದ್ದ ಮಾತು ಹೀಗಿದೆ:

“೧೯೫೦ ರ ಜನವರಿ ೨೬ರ ನಂತರ ದೇಶದಲ್ಲಿ ಅಸ್ತಿತ್ವದಲ್ಲಿದ್ದ ೧೯೩೫ರ ಭಾರತ ಸರ್ಕಾರದ ಕಾಯಿದೆಯೂ ಸೇರಿ ಎಲ್ಲ ಕಾಯಿದೆಗಳು ಹಾಗೂಅದರಡಿಯ ಎಲ್ಲ ನಿಯಮಗಳೂ ರದ್ದಾಗುತ್ತವೆ. ಮುಂದಿನ ಎಲ್ಲ ಕಾಯಿದೆ ಮತ್ತು ನಿಯಮಗಳು ಭಾರತವು ಅಂಗೀಕರಿಸಿರುವ ಸಂವಿಧಾನದಿಂದ ಸೃಜಿಸಲ್ಪಟ್ಟುವುಗಳಾಗಿರುತ್ತವೆ. ಪ್ರತಿಯೊಂದು ನಡೆಯೂ ಸಂವಿಧಾನದ ಆಶಯವನ್ನೇ ಬಿಂಬಿಸುತ್ತವೆ. ಭಾರತದ ಎಲ್ಲ ಪ್ರಜೆಗಳು ಈ ದಿವಸದಿಂದ ಅಂದರೆ ೧೯೫೦ರ ಜನವರಿ ೨೬ರಿಂದ ಸಂವಿ ಧಾನದ ನಿಯಮಗಳನ್ನೇ ಆಚರಿಸಬೇಕು, ಅನುಸರಿಸಬೇಕು”

ಸ್ವತಂತ್ರ ಭಾರತಕ್ಕೆ ಹಾಗೂ ಸರ್ವ ಧರ್ಮ, ಬಹು ಸಂಸ್ಕ ತಿಯ ಹಿನ್ನೆಲೆಯನ್ನು ಒಪ್ಪಿಕೊಂಡ ಹಾಗೂ ಒಳಗೊಂಡ ಭಾರತ ಮತ್ತು ಭಾರತದ ದೇಶವಾಸಿಗಳ ಹಿತದೃಷ್ಟಿಯಿಂದ ರೂಪಿಸಿಕೊಂಡ ನಮ್ಮದೇ ಆದ ಸಂವಿಧಾನದ ಆಶಯವು ಸರ್ವರ ಹಿತವನ್ನೊಳಗೊಂಡಿದ್ದಾಗಿದೆ. ಆ ಹಿನ್ನೆಲೆಯಲ್ಲಿಯೇ ಡಾ.  ಅಂಬೇಡ್ಕರ್‌ ಸಂವಿಧಾನವನ್ನು ಜಾರಿಗೊಳಿಸಿದ ದಿನದಿಂದ ನಮ್ಮದೇ ಆದ ಸಂವಿಧಾನವನ್ನು ದೇಶವಾಸಿಗಳಾದ ನಾವೆಲ್ಲರೂ ಅನುಸರಿಸಬೇಕು, ಆಚರಿಸಬೇಕೆಂದು ಹೇಳಿದ್ದ ರೆಂಬುದನ್ನು ನಾವೆಲ್ಲರೂ ಗಮನಿಸಬೇಕು.

ಆದರೆ ವಕ್ಫ್ ವಿಷಯದಲ್ಲಿ ಆಗಿದ್ದೇ ಬೇರೆ. ನಮ್ಮ ಸಂವಿಧಾನ ೧೯೫೦ರ ಜನವರಿ ೨೬ರಂದು ಅನುಷ್ಠಾನಕ್ಕೆ ಬಂದರೂ ೧೯೨೩ರ ವಕ್ಫ್ ಕಾಯಿದೆಯೇ ಮುಂದುವರೆ ದದ್ದು ಈ ದೇಶದ ದುರಂತ. ಅದು ೧೯೨೩ರಲ್ಲಿ ಸ್ಥಾಪನೆಯಾದ ವಕ್ಫ್ ಬೋರ್ಡ್ ಸಂವಿಧಾನ ಜಾರಿಯ ನಂತರವೂ ಧರ್ಮಾಧಾರಿತವಾಗಿ ಉಳಿದದ್ದು ಅಸಂವಿ ಧಾನಿಕ ನಡೆಯಾಗಿದೆ. ಅದು ೧೯೫೪, ೧೯೯೫ರಲ್ಲಿ ಕೆಲವು ತಿದ್ದುಪಡಿಗಳಾದರೆ, ೨೦೧೩ರಲ್ಲಿ ಕೆಲವು ತಿದ್ದುಪಡಿಗಳಾದವು. ಆದರೆ ನಾವು ಆಗೆಲ್ಲ ತಿದ್ದುಪಡಿ ಮಾಡಿದ್ದು ೧೯೨೩ರಲ್ಲಿ ಅಸ್ತಿತ್ವದಲ್ಲಿದ್ದ ಧರ್ಮಾಧಾರಿತ ವಕ್ಫ್ ಕಾಯಿದೆಗೆ ಎಂಬುದನ್ನು ನಾವು ತಿಳಿದುಕೊಳ್ಳಲೇ ಇಲ್ಲ.

ಇಂತಹ ಕಾಯ್ದೆಯನ್ನು ಮೊನ್ನೆ ಲೋಕಸಭೆಯಲ್ಲಿ ಮಂಡಿಸಿದಾಗ ಮಧ್ಯಪ್ರದೇಶದಲ್ಲಿ ಬಡ ಮುಸ್ಲಿಮರು ಗುಲಾಬಿ ಹೂವಿನ ಮೂಲಕ ಕರತಾಡನದ ಮೂಲಕ ಅದನ್ನು ಸ್ವಾಗತಿಸಿದರು. ಈ ಹಿಂದಿನ ವಕ್ಫ್ ಮಂಡಳಿಯಲ್ಲಿ ಇದುವರೆಗೂ ಸಾಕಷ್ಟು ಮಂದಿ ಧರ್ಮಾತೀತವಾಗಿ ವಕ್ಫ್ ಆಸ್ತಿಯನ್ನು  ದುರುಪಯೋಗಪಡಿಸಿಕೊಂಡಿ ದ್ದಾರೆ. ಕೊಳ್ಳೆ ಹೊಡೆದಿದ್ದಾರೆ. ಅದನ್ನು ಒಂದು ಧರ್ಮದವರು ಮಾತ್ರವೇ ತಿಂದು ಹಾಕಿಲ್ಲ. ಇನ್ನು ವಕ್ಫ್ ಆಸ್ತಿಗಳನ್ನು ಅಷ್ಟು ಸುಲಭವಾಗಿ ಯಾರೂ ಕಬಳಿಸಲಾ ಗದು. ಯಾರದೋ ಆಸ್ತಿಗೆ ವಕ್ಫ್ ಎಂದು ನಮೂದಿಸಲಾಗಿದು. ಅದಕ್ಕಾಗಿ ಯಾರು ಬೇಕಾದರೂ ನ್ಯಾಯಾಲಯದ ಮೆಟ್ಟಿಲು ಹತ್ತಲು ಅವಕಾಶವಾಗಿದೆ. ಮೊದಲಿದ್ದ ವಕ್ಫ್ ನ್ಯಾಯಮಂಡಲಿಯೇ ಸುಪ್ರೀಂ ಅಲ್ಲ ಎಂಬುದು ಇಲ್ಲಿ ದೇಶವಾಸಿಗಳೆಲ್ಲರಿಗೂ ಅತ್ಯಂತ ಸಮಾಧಾನದ ಸಂಗತಿ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಲಕ್ಷ ಲಕ್ಷ ಗಟ್ಟಲೇ ವಕ್ಫ್ ಆಸ್ತಿ ದುರುಪಯೋಗವಾಗಿರುವುದನ್ನು ಮಣಿಪ್ಪಾಡಿ ವರದಿ ಬಹು ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ಯಾರೂ ಗಮನಿಸಲೇ ಇಲ್ಲ. ಅದನ್ನು ಜಾರಿಗೊಳಿಸಲೂ ಯಾರೂ ಮುಂದಾಗಲಿಲ್ಲ.  ದೇಶದ ತುಂಬೆಲ್ಲಾ ವಕ್ಫ್ ಆಸ್ತಿ ದುರುಪಯೋಗದ ಕಮಟು ವಾಸನೆ ಬೀರಿ ದೇಶವಾಸಿಗಳು ಹೊಟ್ಟೆ ಕಿವುಚುವಂತಾಗಿತ್ತು. ಈಗ ವಕ್ಫ್ ರೋಗಕ್ಕೆ ತಕ್ಕ ಮದ್ದು ದೊರೆತಿದೆ. ಕೇಂದ್ರ ಸರ್ಕಾರವು ದೇಶದ ಸರ್ವಜನರ ಹಿತದೃಷ್ಟಿಯಿಂದಾಗಿಯೇ ವಕ್ಫ್ ಬಿಲ್ ಅನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ ಅದು ನೀಡಿದ ಶಿಫಾರಸುಗಳನ್ನು ವಿಧೇಯಕದಲ್ಲಿ ಅಳವಡಿಸಿಕೊಂಡ ನಂತರವೇ ಲೋಕಸಭೆಯಲ್ಲಿ  ಮಂಡಿಸಲಾಯಿತು. ಲೋಕಸಭೆಯೂ ದೇಶದ ಹಿತದೃಷ್ಟಿಯಿಂದ ಮಸೂದೆಯನ್ನು ಅಂಗೀಕರಿಸಿದ್ದು ಐತಿಹಾಸಿಕ ಸಂಗತಿಯಾಗಿದೆ.

೧೯೯೫ರಲ್ಲಿ ತಿದ್ದುಪಡಿ ಆದಾಗಲೂ ಪ್ರಸ್ತುತ ಇದ್ದ ವಕ್ಫ್ ಬೋರ್ಡ್ ಗೆ ಸಂವಿಧಾನದ ಹಿಡಿತ ಬೀಳಲೇ ಇಲ್ಲ. ಭಾರತದಲ್ಲಿರುವ ಯಾವುದೇ ಎಷ್ಟೇ ದೊಡ್ಡ ವ್ಯಕ್ತಿ ಗಾಗಲೀ, ಯಾವುದೇ ಸಂಸ್ಥೆಯು ಭಾರತ ಸರಕಾರಕ್ಕೆ ಇರುವ ಪರಮಾಧಿಕಾರವನ್ನಾಗಲೀ, ಸರ್ವೋಚ್ಚ ನ್ಯಾಯಾಲಯಕ್ಕಿರುವ ನ್ಯಾಯಿಕ ವಿಮರ್ಶೆಯ ಅಧಿಕಾರ ವನ್ನು ಮೀರಿ ನಿಲ್ಲಲು ಅವಕಾಶವೇ ಇಲ್ಲ. ಭಾರತದಲ್ಲಿರುವುದು ಶಾಸನ ನಿಯಮ ಅಂದರೆ ರೂಲ್ ಆಫ್ ಲಾ. ಭಾರತದ ಕಾನೂನು ಎಲ್ಲರಿಗೂ ಒಂದೇ. ಭಾರತದ ಕಾನೂನಿನಡಿ ಎಲ್ಲ ಭಾರತೀಯರೂ ಸಮಾನರು. ಸಂವಿಧಾನ ಮತ್ತು ಅದರಡಿ ಸೃಜಿತ ಕಾನೂನೇ ಎಲ್ಲರಿಗಿಂತಲೂ ಎತ್ತರವಾದುದು. ಎಲ್ಲ ಜನರು, ಎಲ್ಲ ಸಂಸ್ಥೆ ಗಳು ಭಾರತ ಸಂವಿಧಾನ ರೂಪಿತ ಕಾಯ್ದೆಗಳಿಡಿಯೇ ಕೆಲಸ ಮಾಡಬೇಕಿದೆ.

ಪ್ರಸ್ತುತ ಇರುವ ವಕ್ಫ್ ಬೋರ್ಡ್ ಕಾರ್ಯ ಸ್ವರೂಪದ ಕುರಿತು ಭಾರತೀಯ ದೇಶವಾಸಿಗಳಿಗೆ ಅದೆಷ್ಟು ಅಸಮಾಧಾನ -ಆಕ್ರೋಶ ಇತ್ತೆಂದರೆ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ಮುಂದೆ ಅಲ್ಪಸಂಖ್ಯಾತರು ಸೇರಿದಂತೆ ಧರ್ಮಾತೀತವಾಗಿ ಒಂದು ಕೋಟಿಯಷ್ಟು ಅರ್ಜಿಗಳು ಬಂದಿದ್ದುಂಟು. ಈ ಅರ್ಜಿಗಳ ಸಂಖ್ಯೆಯ ರಾಶಿಯನ್ನೇ ಗಮನಿಸಿದರೆ ನಿಮಗೆ ಗೊತ್ತಾದೀತು ಆ ಕಾಯ್ದೆ ಅದೆಷ್ಟು ದುರುಪಯೋಗವಾಗಿತ್ತೆಂಬುದು. ಅದರಲ್ಲಿದ್ದ ಯಾವುದೇ ಪ್ರಕರಣವೂ ವಕ್ಫ್ ಟ್ರಿಬುನಲ್ ತೀರ್ಮಾನವೇ ಅಂತಿಮ ಎಂಬ ಕಲಂನಿಂದಾಗಿ ಯಾವುದೇ ಜನಸಾಮಾನ್ಯನ ಇಲ್ಲವೇ ಯಾವುದೇ ಗುಡಿ ಗುಂಡಾರಗಳ, ಮಠ ಮಾನ್ಯಗಳ ಆಸ್ತಿಯಲ್ಲವೂ ವಕ್ಫ್ ಆಸ್ತಿ ಎಂದು ಬರೆದುಕೊಂಡರೂ ಕೊನೆಗೆ ತೀರ್ಮಾನಿಸುವವರು ವಕ್ಫ್ ನ್ಯಾಯಮಂಡಳಿಯೇ ಎಂಬುದು ನಿಜಕ್ಕೂ ಭಯಾನಕ ಸಂಗತಿಯಾಗಿತ್ತು. ಈಗ ಅದಕ್ಕೆ ಕಡಿವಾಣ ಬಿದ್ದಿದೆ. ಈಗ ಯಾರೇ ಆಗಲಿ, ನ್ಯಾಯಾಲಯದ ಮೊರೆ ಹೋಗಲು ಅವಕಾಶ ದೊರೆತಿರುವುದು ನಿಜಕ್ಕೂ ಸಮಾಧಾನದ ಸಂಗತಿಯಾಗಿದೆ.

ಈ ವಕ್ಫ್ ನ್ಯಾಯಮಂಡಳಿಯ ತೀರ್ಪೇ ಅಂತಿಮ ಎಂಬ ನಿಯಮದ ದುರ್ಬಳಕೆಯಿಂದಾಗಿಯೇ ಯಾವುದೇ ಮಠ ಮಾನ್ಯ, ಗುಡಿ ಗುಂಡಾರಗಳ ಆಸ್ತಿಯೂ ವಕ್ಫ್ ಆಸ್ತಿಯಾಗಿ ಪರಿವರ್ತನೆಯಾಗಿ ವಕ್ಫ್ ಸಂಸ್ಥೆಯ ಆಸ್ತಿ ಹೆಚ್ಚಿ ದೇಶದ ಮೂರನೇ ಅತ್ಯಂತ ದೊಡ್ಡ ಸಂಸ್ಥೆಯಾಗಿರುವುದನ್ನು ಭಾರತೀಯ ದೇಶವಾಸಿಗಳೆಲ್ಲರೂ ಪ್ರಮುಖವಾಗಿ ಗಮನಿಸಬೇಕಿದೆ.

ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ೧೪ನೇ ವಿಧಿಯ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಿಯಮದ ಪಾಲನೆಗಾಗಿ ಸಂಸತ್ತಿನ ವಕ್ಫ್ ತಿದ್ದು ಪಡಿ ವಿಧೇಯಕವು ಅಂಗೀಕೃತವಾಗಿ ಕಾಯಿದೆಯಾಗಿ ರೂಪುಗೊಳ್ಳುತ್ತಿದೆ. ಭಾರತದ ನೆಲದಲ್ಲಿ ಯಾವುದೇ ವೈಯಕ್ತಿಕವಿರಬಹುದು, ಇನ್ನಾವುದೇ ಕಾಯಿದೆಗಳು ಸಂವಿಧಾನಕ್ಕಿಂತ ದೊಡ್ಡವಲ್ಲ. ಸಂವಿಧಾನದಡಿ ಸೃಜನೆಗೊಂಡ ಕಾಯಿದೆಯೇ ಎಲ್ಲರಿಗಿಂಲೂ ದೊಡ್ಡದು. ಯಾವುದೇ ಕಾಯಿದೆಗಳೂ ನಮ್ಮ ಸಂವಿಧಾನವನ್ನು ಅಡಿ ಮಾಡಲು ಇಲ್ಲವೇ ಸೋಲಿಸಲು ಐತಿಹಾಸಿಕ ಪರಂಪರೆಯುಳ್ಳ ನಮ್ಮ ಸಂಸತ್ತು ಎಂದೂ ಅವಕಾಶ ಮಾಡಿಕೊಡಲೇಬಾರದು.

ಭಾರತವು ಬಹುತ್ವ, ಬಹು ಸಂಸ್ಕೃತಿ, ಬಹುಧರ್ಮವನ್ನು ಒಪ್ಪಿಕೊಂಡ ಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಶಾಂತಿಯುತವಾಗಿ ಬದುಕುತ್ತಾರೆ. ಇಲ್ಲಿ ಪಾರ್ಸಿಗಳು, ಜೊರಾಷ್ಟ್ರೀಯನ್ನರಂತಹ ಅತ್ಯಂತ ಕಡಿಮೆ ಸಂಖ್ಯೆಯುಳ್ಳ ಜನರು ನೆಮ್ಮದಿಯಾಗಿಯೇ ಬದುಕುತ್ತಿದ್ದಾರೆ. ಆದರೆ ಕೆಲವರ ತುಷ್ಟೀಕರಣ ಮನೋಭಾವದಿಂದಾಗಿ ಕೆಲ ಅಲ್ಪಸಂಖ್ಯಾತರ ವಕ್ಫ್ ಕಾಯಿದೆ ತಿದ್ದುಪಡಿ ಕುರಿತು ಗುಲ್ಲೆಬ್ಬಿಸುತ್ತಿದ್ದಾರೆ. ‘ವಕ್ಫ್ ಕಾಯಿದೆ ತಿದ್ದುಪಡಿಯಾಗಿ ಅದರಡಿ ನಿಮಯಗಳು ರೂಪುಗೊಂಡು ಒಂದು ವರ್ಷದ ನಂತರ ನೀವೇ ಬಂದು ಹೇಳುತ್ತೀರಿ: ಇದೊಂದು ಉತ್ತಮ ನಿರ್ಧಾರ, ಇದು ಎಂದೋ ಆಗಬೇಕಿತ್ತು. ಈಗಲಾದರೂ ಆಯಿತಲ್ಲ. ಲೇಟಾಗಿಯಾದರೂ ಒಳ್ಳೆಯದೇ ಆಯಿತು ಎಂದು ಹೇಳುತ್ತೀರಿ’ ಎಂದು ವಿಧೇಯಕ ಮಂಡಿಸಿ ವಿಧೇಯಕದ ಸಾಫಲ್ಯ ಕುರಿತು ಸಂಸತ್ತಿಗೆ ವಿವರಿಸಿದ ಸ್ವತಃ ಅಲ್ಪ ಸಂಖ್ಯಾತರೇ ಆದ ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಕಿರಣ್ ರಿಜಿಜು ಮಾತಿನಲ್ಲಿ ಹುರುಳಿಲ್ಲದೇ ಇಲ್ಲ ಎನ್ನಬಹುದು.

ವಕ್ಫ್‌ ಕಾಯಿದೆ ತಿದ್ದುಪಡಿ ಧರ್ಮದ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಹಾಗೆಯೇ ಅದು ದುರುಪಯೋಗವಾಗುತ್ತಿರುವ ವಕ್ಫ್ ಆಸ್ತಿಯ ರಕ್ಷಣೆಗೆ ಮಾತ್ರ ಸಂಬಂಧಿಸಿ ದ್ದಾಗಿದೆ ಎಂಬುದನ್ನು ನಾವೆಲ್ಲ ಮನಗಾಣಬೇಕಿದೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ಕುರಿತಂತೆ ಜನರಲ್ಲಿ ಧರ್ಮದ ವಿಷಯವೆಂಬಂತೆ ಬಿಂಬಿಸಿ ಇಲ್ಲದ ವದಂತಿ ಸೃಷ್ಟಿಸಿ ಗೊಂದಲ ಎಬ್ಬಿಸುತ್ತಿರುವುದು ದೇಶದ ಹಿತದೃಷ್ಟಿಯಿಂದಂತೂ ನಿಜಕ್ಕೂ ಒಳ್ಳೆಯ ನಡೆಯಲ್ಲ. ಅದನ್ನು ವದಂತಿಕೋರರು ಎಷ್ಟು ಬೇಗ ಅರಿತು ಕೊಳ್ಳು ತ್ತಾರೋ ಅಷ್ಟು ಒಳ್ಳೆಯದು.

ಕೇಂದ್ರ ಸರಕಾರವು ಕೈಗೊಳ್ಳುವ ಯಾವುದೇ ನಡೆಗಳನ್ನು ಪೂರ್ವಾಗ್ರಹ ಪೀಡಿತ ದೃಷ್ಟಿಯಿಂದಲೇ ನೋಡುವ ಪೂರ್ವಾಗ್ರಹಿಪೀಡಿತ ಮನಸುಗಳು ವಿಚಾರ ಪೂರ್ವಕವಾಗಿ ಚಿಂತನೆ ಮಾಡಬೇಕಿದೆ. ಒಟ್ಟಾರೆಯಾಗಿ ವಕ್ಫ್ ಕಾಯಿದೆ ತಿದ್ದುಪಡಿ ದೇಶವಾಸಿಗಳೆಲ್ಲರ ಹಿತದೃಷ್ಟಿಯಿಂದಂತೂ ಐತಿಹಾಸಿಕ ನಿರ್ಧಾರ. ವಕ್ಫ್ ಕಾಯ್ದೆ ತಿದ್ದುಪಡಿಯು ಸಂವಿಧಾನವೇ ಸಾರ್ವಭೌಮ ಎಂಬುದನ್ನು ಎತ್ತಿ ತೋರಿಸಿದೆ. ಕೇಂದ್ರ ಸರಕಾರದ ಈ ನಡೆ ಸಂವಿಧಾನದ ಗೆಲುವನ್ನು ಎತ್ತಿ ತೋರಿಸಿದೆ. ಅದನ್ನು ಬಹು ಗಟ್ಟಿಯಾಗಿ ಬಿಂಬಿಸಿದೆ.

-ಬೆನಕನಹಳ್ಳಿ ಶೇಖರಗೌಡ, ಹಿರಿಯ ಪತ್ರಕರ್ತ

ಹೊರಮಾವು- ಬೆಂಗಳೂರು.  ದೂರವಾಣಿ: ೯೭೩೧೪೯೦೦೫೯

Related Posts

Leave a Reply

Your email address will not be published. Required fields are marked *