Menu

ಮತದಾರರ ಪಟ್ಟಿ: ರಾಹುಲ್‌ ಗಾಂಧಿ ಆರೋಪ ಆಧಾರರಹಿತವೆಂದ ಆರ್‌. ಅಶೋಕ್‌

“ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಯ ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಒಂದು ವೇಳೆ ನಿಮ್ಮ ಆರೋಪಗಳಿಗೆ ಪುರಾವೆ ಇದ್ದರೆ, ಮುಂದಿನ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ, ಇಲ್ಲದಿದ್ದರೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು” ಎಂದು ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಈಗಾಗಲೇ
ಪ್ರತ್ಯುತ್ತರ ಕೊಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌  ಸಾಮಾಜಿಕ ಮಾಧ್ಗಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹುರುಳಿದ್ದರೆ ಚುನಾವಣಾ ಆಯೋಗಕ್ಕೆ ಪುರಾವೆ ಒದಗಿಸಬೇಕು. ಇಲ್ಲವಾದರೆ ದೇಶದ ಮತದಾರರಲ್ಲಿ ಕ್ಷಮೆ ಯಾಚಿಸಬೇಕು. ಅದು ಬಿಟ್ಟು ಹೀಗೆ ಹಾದಿ ಬೀದಿಯಲ್ಲಿ ಪೋಸ್ಟರ್ ಅಂಟಿಸಿ ನಮ್ಮ ದೇಶದ ಚುನಾವಣಾ ವ್ಯವಸ್ಥೆಗೆ, ಮತದಾರರಿಗೆ, ಜನಾದೇಶಕ್ಕೆ ಅಪಮಾನ ಮಾಡುವುದು ಯಾವ ಸೀಮೆ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ ಅವರೇ, ಮತಗಳ್ಳತನ ಎಂಬ ಈ ನಾಟಕ ತಮ್ಮ ಮೂರ್ಖತನ ಪ್ರದರ್ಶನ ಮಾಡುತ್ತದೆಯೇ ಹೊರತು ಮತ್ತೇನೂ ಅಲ್ಲ. ನಿಮ್ಮ ಸೋಲಿನ ಹತಾಶೆಯಿಂದ ನಮ್ಮ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಊಹಾಪೋಹ ಸೃಷ್ಟಿಸುವ ಪಾಪದ ಕೆಲಸ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *