Menu

ಸೆಮಿ ಕಂಡಕ್ಟರ್ ಪವರ್‌ಹೌಸ್ ನಿರ್ಮಾಣಕ್ಕೆ ಸಂದರ್ಶಕರ ನೋಂದಣಿಗಳ ಆರಂಭ

semi condector

2025 ಸೆಪ್ಟೆಂಬರ್ 2 ರಿಂದ 4 ರ ವರೆಗೆ ನವದೆಹಲಿಯಲ್ಲಿನ ಯಶೋಭೂಮಿಯಲ್ಲಿ (ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಆಂಡ್ ಎಕ್ಸ್‌ಪೋ ಸೆಂಟರ್) ನಡೆಯಲಿರುವ ಸೆಮಿಕಾನ್ ಇಂಡಿಯಾ 2025 ಕ್ಕೆ ಸಂದರ್ಶಕರ ನೋಂದಣಿ ಆರಂಭವಾಗಿದೆ.

ಉದ್ಯಮದ ಪಾಲುದಾರರ ಸಹಭಾಗಿತ್ವದಲ್ಲಿ ಸೆಮಿ ಮತ್ತು ಐಎಸ್‌ಎಂ ಇದನ್ನು ನಡೆಸುತ್ತಿದೆ. “ಭವಿಷ್ಯದ ಸೆಮಿಕಂಡಕ್ಟರ್ ಪವರ್‌ಹೌಸ್ ನಿರ್ಮಾಣ” ಎಂಬ ಥೀಮ್ ಅಡಿಯಲ್ಲಿ ಕಾರ್ಯಕ್ರಮವು ನಡೆಯಲಿದ್ದು, ಮೈಕ್ರೋಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಚೈನ್ ವ್ಯಾಲ್ಯೂದಲ್ಲಿ ಭಾರತದ ಸಾಮರ್ಥ್ಯ ಮತ್ತು ಮಹತ್ವಾಕಾಂಕ್ಷೆಗಳನ್ನು ಇದು ಪ್ರದರ್ಶಿಸಲಿದೆ.

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (ಎಂಇಐಟಿವೈ) ಸಚಿವಾಲಯದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ ಅಡಿಯಲ್ಲಿ ಆಯೋಜಿಸಲಾಗಿರುವ ಸೆಮಿಕಾನ್ ಇಂಡಿಯಾ 2025 ಕ್ಕೆ ಸೆಮಿಕಾನ್ ಇಂಡಿಯಾ 2024 ರ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಿದೆ. ನೀತಿ, ಉದ್ಯಮ, ಶೈಕ್ಷಣಿಕ ವ್ಯವಸ್ಥೆ ಮತ್ತು ಹೂಡಿಕೆ ಸಮುದಾಯಗಳಲ್ಲಿ ಜಾಗತಿಕ ಮತ್ತು ದೇಶೀಯ ಪಾಲುದಾರರನ್ನೂ ಈ ಕಾರ್ಯಕ್ರಮವು ಒಳಗೊಳ್ಳಲಿದೆ.

ಸೆಮಿ ಇಡೀ ವಿಶ್ವದಲ್ಲಿ ನಡೆಸುತ್ತಿರುವ ಎಂಟು ಸೆಮಿಕಾನ್ ಪ್ರದರ್ಶನಗಳ ಪೈಕಿ ಸೆಮಿಕಾನ್ ಇಂಡಿಯಾ ಒಂದಾಗಿದ್ದು, ಜಾಗತಿಕ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆ ವಲಯದಲ್ಲಿನ ಎಕ್ಸೆಕ್ಯೂಟಿವ್‌ಗಳು ಮತ್ತು ಪ್ರಮುಖ ಪರಿಣಿತರನ್ನು ಇದು ಒಟ್ಟಾಗಿಸಲಿದೆ. ಸೆಮಿಕಾನ್ ಇಂಡಿಯಾ 2025 ಅಭೂತಪೂರ್ವ ಯಶ್ಸಸನ್ನು ನಿರೀಕ್ಷಿಸಲಾಗಿದ್ದು, ಭಾರತವು ಈ ವಲಯದಲ್ಲಿ ಭವಿಷ್ಯದ ಕೇಂದ್ರವಾಗುವುದಕ್ಕೆ ಇರುವ ಪ್ರಾಮುಖ್ಯತೆಯನ್ನು ಇದು ಸೂಚಿಸುತ್ತದೆ.

ಸೆಮಿ ಅಧ್ಯಕ್ಷರು ಮತ್ತು ಸಿಇಒ ಶ್ರೀ ಅಜಿತ್ ಮನೋಚಾ ಹೇಳುವಂತೆ “ನಮ್ಮ ಸೆಮಿಕಾನ್ ಪ್ರದರ್ಶನ ಮತ್ತು ಕಾರ್ಯಕ್ರಮಗಳ ಮೂಲಕ ಗ್ರೀನ್‌ಫೀಲ್ಡ್‌ ದೇಶಗಳಲ್ಲಿ ಸೆಮಿಕಂಡಕ್ಟರ್ ಉದ್ಯಮವನ್ನು ವಿಸ್ತರಿಸುವಲ್ಲಿ ಉತ್ತಮ ಹಿನ್ನೆಲೆಯನ್ನು ಸೆಮಿ ಹೊಂದಿದೆ. ಚಿಪ್ ಉದ್ಯಮವು ಪೂರೈಕೆ ಸರಣಿಯಲ್ಲಿನ ತೊಂದರೆಯನ್ನು ಕಡಿಮೆ ಮಾಡುವುದಕ್ಕೆ ಎದುರು ನೋಡುತ್ತಿದೆ ಹಾಗೂ ಪ್ರತಿಭಾವಂತ ಇಂಜಿನಿಯರುಗಳನ್ನು ಸೇರಿಸಿಕೊಳ್ಳಲು ಮತ್ತು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್ ಮಾರ್ಕೆಟ್‌ಗೆ ವಿಸ್ತರಿಸುವ ಗುರಿಯನ್ನು ಇದು ಹೊಂದಿದೆ. ಇದು ಭಾರತವನ್ನು ಬೆಳೆಯುತ್ತಿರುವ ಒಂದು ಕೇಂದ್ರವನ್ನಾಗಿಸುವ ಅವಕಾಶವನ್ನು ಒದಗಿಸುತ್ತಿದೆ.

ನಾವು ಉದ್ಯಮದ ನಾಯಕರು, ಅನ್ವೇಷಕರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಪಾಲಿಸಿದಾರರನ್ನು ಸೆಮಿಕಾನ್ ಇಂಡಿಯಾ 2025 ಕ್ಕೆ ಸೇರುವಂತೆ ಆಹ್ವಾನಿಸುತ್ತಿದ್ದೇವೆ ಮತ್ತು ಸೆಮಿಕಂಡರ್ ಉದ್ಯಮವನ್ನು ಭಾರತದಲ್ಲಿ ಬೆಳೆಸಲು ಸಹಕರಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ” ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್ ಕೃಷ್ಣನ್‌ ಹೇಳಿದ್ದಾರೆ.

ಭಾರತವು ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಒಂದು ಮಹತ್ವದ ಘಟ್ಟದಲ್ಲಿದೆ. ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರದಲ್ಲಿ ಬೆಳವಣಿಗೆ ಮತ್ತು ಅನ್ವೇಷಣೆಯನ್ನು ವರ್ಧಿಸುವುದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಸೆಮಿ ಇಂಡಿಯಾ ಮತ್ತು ಐಇಎಸ್‌ಎ ಅಧ್ಯಕ್ಷ ಶ್ರೀ ಅಶೋಕ್ ಚಂದಕ್ ಹೇಳಿದ್ದಾರೆ. “ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ವಲಯವು ಬದಲಾವಣೆಗೆ ಸಾಕ್ಷಿಯಾಗುತ್ತಿರುವುದನ್ನು ಈ ವರ್ಷದ ಕಾರ್ಯಕ್ರಮವು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಅಲ್ಲದೆ, ಇದು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಬೆಳೆಯುತ್ತಿರುವ ಕೇಂದ್ರವನ್ನಾಗಿ ಭಾರತವನ್ನು ರೂಪಿಸಲು ಇದು ಸಹಾಯ ಮಾಡಲಿದೆ.

ಸಹಭಾಗಿತ್ವ ಮತ್ತು ಬೆಳವಣಿಗೆಗೆ ವೇದಿಕೆ

ಸೆಮಿಕಾನ್ ಇಂಡಿಯಾ 2025 ಇಡೀ ಜಾಗತಿಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಸಹಭಾಗಿತ್ವವನ್ನು ರೂಪಿಸಲಿದ್ದು, ವಿಶ್ವಾಸಾರ್ಹ ಮತ್ತು ವಿಸ್ತರಿಸಬಹುದಾದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಕೇಂದ್ರವನ್ನಾಗಿ ಭಾರತವನ್ನು ರೂಪಿಸಲಿದೆ. ಸೆಮಿ ಮತ್ತು ಐಎಸ್ಎಂ (ಎಂಇಐಟಿವೈ) ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಕ್ರಮವು ವಿಶ್ವದರ್ಜೆಯ ಸೆಮಿಕಂಡಕ್ಟರ್ ಉದ್ಯಮವನ್ನು ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಸಂದರ್ಶಕರ ನೋಂದಣಿಯು ಈಗ ಸೆಮಿಕಾನ್ ಇಂಡಿಯಾ 2025 ಕ್ಕೆ ತೆರೆದಿದೆ. ಇಲ್ಲಿ ನೋಂದಣಿ ಮಾಡಿ: semiconindia.org
ಇನ್ನಷ್ಟು ವಿವರಗಳಿಗಾಗಿ, ದಯವಿಟ್ಟು www.semiconindia.org ಗೆ ಭೇಟಿ ನೀಡಿ ಮತ್ತು ಲಿಂಕ್ಡ್‌ಇನ್‌ ಮತ್ತು ಎಕ್ಸ್‌ನಲ್ಲಿ ಸೆಮಿ ಇಂಡಿಯಾವನ್ನು ಕನೆಕ್ಟ್ ಮಾಡಿ.

Related Posts

Leave a Reply

Your email address will not be published. Required fields are marked *