ನಟ ದರ್ಶನ್ ಕೊಲೆ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಿರ್ಜರ್ ಲೆಂಡ್ ವೀಸಾ ನಿರಾಕರಿಸಿದ್ದು, ಡೆವಿಲಿ ಚಿತ್ರ ತಂಡ ಯುರೋಪ್ ಬದಲು ಥಾಯ್ಲೆಂಡ್ ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ.
ದರ್ಶನ್ ಗೆ ವಿದೇಶಕ್ಕೆ ತೆರಳಲು ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮುಂದಿನ ವಾರ ಡೆವಿಲ್ ಚಿತ್ರದ ಚಿತ್ರೀಕರಣಕ್ಕಾಗಿ ಯುರೋಪ್ ಪ್ರವಾಸ ಕೈಗೊಳ್ಳಲು ನಿರ್ಧರಿಸಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್ ಜೊತೆ ಚಿತ್ರತಂಡ ಮುಂದಿನ ವಾರ ಸ್ವಿಜರ್ ಲೆಂಡ್ ಗೆ ತೆರಳಬೇಕಿತ್ತು.
ಆದರೆ ಕೊಲೆ ಆರೋಪದ ಹಿನ್ನೆಲೆಯಲ್ಲಿ ದರ್ಶನ್ ಗೆ ವೀಸಾ ನೀಡಲು ನಿರಾಕರಿಸಿದೆ. ಇದರಿಂದ ಚಿತ್ರ ತಂಡ ಥಾಯ್ಲೆಂಡ್ ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ ಡೆವಿಲ್ ಚಿತ್ರ ದರ್ಶನ್ ಕೊಲೆ ಪ್ರಕರಣಗಳಿಂದಾಗಿ ಸಾಕಷ್ಟು ಅಡ್ಡಿಗಳನ್ನು ಎದುರಿಸುತ್ತಿದ್ದು, ದೀಪಾವಳಿ ಅಥವಾ ಈ ವರ್ಷದ ಅಂತ್ಯದಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.