ಬೇಸಿಗೆ ಮಧ್ಯೆ ಮಳೆಯೊಂದಿಗೆ ವಾತಾವರಣ ಬದಲಾಗುತ್ತಿದ್ದಂತೆ ಬೆಂಗಳೂರು ನಗರ ಒಳಗೊಂಡಂತೆ ರಾಜ್ಯದಲ್ಲಿ ವೈರಲ್ ಜ್ವರ ಕೇಸ್‌ಗಳು ಹೆಚ್ಚುತ್ತಿವೆ. ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ನಿಗಾ ಘಟಕವು ಈ ಸಂಬಂಧ ಮಾಹಿತಿ ಪ್ರಕಟಿಸಿ ಅಂಕಿ ಅಂಶಗಳನ್ನು ನೀಡಿದೆ.
ಮಾರ್ಚ್ ಆರಂಭದಲ್ಲಿ ಸಂಪೂರ್ಣ ಇಳಿಕೆ ಕಂಡಿದ್ದ ವೈರಲ್ ಜ್ವರ, ಶೀತ, ನೆಗಡಿ ಮತ್ತಿತರ ಆರೋಗ್ಯ ಸಮಸ್ಯೆಗಳು ಮತ್ತೆ ತೀವ್ರಗತಿ ಕಂಡಿವೆ.
ಕಳೆದ ವಾರದಲ್ಲಿ 122 ಹೊಸ ಪ್ರಕರಣಗಳು ದಾಖಲಾಗಿವೆ. ಈಗಿನ ಬಿಸಿಲು ಮಳೆ ವಾತಾವರಣದಲ್ಲಿ ಈ ಕಾಯಿಲೆಗಳ ಆರ್ಭಟ ಮತ್ತಷ್ಟು ಹೆಚ್ಚುತ್ತಿದೆ.
ಬೆಂಗಳೂರು ನಗರದಲ್ಲಿ ಈ ವೈರಲ್ ಕಾಯಿಲೆ ಹೆಚ್ಚುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ.