Menu

ವಿಜಯಪುರ ಬ್ಯಾಂಕ್ ದರೋಡೆ ಮಾಡಿದ್ದ 12 ಮಂದಿ ಅರೆಸ್ಟ್: 39 ಕೋಟಿ ಮೌಲ್ಯದ ಸ್ವತ್ತು ವಶ!

vijayapura bank dacait

ವಿಜಯಪುರ: ಸಿನಿಮೀಯ ರೀತಿಯಲ್ಲಿ ವಿಜಯಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿನ 10.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿಸಿದ್ದ 12 ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಮೂಲದ ಬಾಲರಾಜ್ ಮಣಿಕಮ್ ಯರೆಕುಲಾ, ಚಂದನರಾಜ್ ಪಿಳ್ಳೈ, ಗುಂಡು ಜೋಸೆಫ್ ಶ್ಯಾಮಬಾಬು, ಪೀಟರ್ ಚಂದ್ರಪಾಲ್, ಇಜಾಜ್ ಧಾರವಾಡ, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ್, ಮಹಮ್ಮದ್ ಆಸೀಫ್ ಕಲ್ಲೂರ, ಅನಿಲ್ ಮಿರಿಯಾಲ್, ಮೋಹನಕುಮಾರ, ಸುಲೇಮನ್‌ವೇಸ್ಲಿ ಪಲುಕುರಿ, ಮರಿಯಾದಾಸ ಗೋನಾ ಬಂಧಿತರು.

ಬಂಧಿತರಿಂದ ಒಟ್ಟು 39 ಕೆಜಿ ಗಟ್ಟಿ ಬಂಗಾರ, 1.16 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಒಂದು ಲಾರಿ, 5 ಕಾರು, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟರ್ ಸೇರಿದಂತೆ 39.26 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.

ಕಳೆದ ಮೇ 25ರಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದಲ್ಲಿನ ಕೆನೆರಾ ಬ್ಯಾಂಕ್ ಕಳ್ಳತನ ಮಾಡಿದ್ದ ದರೋಡೆಕೊರರು ಹಾಡುಹಗಲೇ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ರಾಜ್ಯಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿದ್ದ ಬ್ಯಾಂಕ್ ದರೋಡೆ ಪ್ರಕರಣವನ್ನು ಜಿಲ್ಲಾ ಪೊಲೀಸರು 45 ದಿನಗಳಲ್ಲೇ ಭೇದಿಸಿದ್ದಾರೆ.

ಪ್ರಕರಣದ ಮೂವರು ಪ್ರಮುಖ ಆರೋಪಿಗಳಾದ ವಿಜಯಕುಮಾರ ಮೋಹನರಾವ ಮಿರಿಯಾಲ (41), ಚಂದ್ರಶೇಖರ ಕೊಟಿಲಿಂಗಮ್ ನೆರೆಲ್ಲಾ (38), ಸುನೀಲ್ ನರಸಿಂಹಲು ಮೋಕಾ (40) ಅವರನ್ನು ಜೂ. 26ರಂದು ಬಂಧಿಸಲಾಗಿತ್ತು. ಬಂಧಿತರಿಂದ 10 ಕೋಟಿ 75 ಲಕ್ಷ ರೂ ಮೌಲ್ಯದ 10.5 ಕೆಜಿ ಬಂಗಾರದ ಆಭರಣಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು.

Related Posts

Leave a Reply

Your email address will not be published. Required fields are marked *