ಪರಿಶಿಷ್ಟರು, ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅಭೂತಪೂರ್ವ ಬೆಂಬಲದಿಂದಲೇ ತಮಿಳುನಾಡು ಮತ್ತು ಆಂಧ್ರದಲ್ಲಿ ಡ್ರಾವಿಡ ಪಕ್ಷಗಳು ಮತ್ತು ತೆಲುಗುದೇಶಂ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂಬುದು ಕಟುಸತ್ಯ. ತಮಿಳುನಾಡಿನ ರಾಜಕೀಯ ಒಂದು ಮತ -ಜಾತಿ ಹಾಗೂ ಧರ್ಮದ ಮೇಲೆ ಅವಲಂಬಿತವಾಗಿಲ್ಲ. ದ್ರಾವಿಡ ನೆಲದಲ್ಲಿ ಎಂಜಿಆರ್, ಕರುಣಾನಿಧಿ, ಎನ್ಟಿಆರ್, ಜಯಲಲಿತ, ಚಂದ್ರಬಾಬು- ಇವರೆಲ್ಲರೂ ರಾಜಕೀಯದಲ್ಲಿ ಮೇಲೆರಲು ಕಾರಣವಾಗಿದ್ದು ಮೇಲ್ವರ್ಗದ ಜಾತಿ ಮತ್ತು ಸಮುದಾಯಗಳ ಮತಗಳು ಅಲ್ಲವೇ ಅಲ್ಲ.
ತಮಿಳುನಾಡು ಮೈತ್ರಿ ರಾಜಕೀಯ ಗರಿಗೆದರಿದೆ. ಪ್ರಾ ದೇಶಿಕ ಪಕ್ಷಗಳ ನೆರವು ಇಲ್ಲದೆ ಇಲ್ಲಿ ರಾಷ್ಡ್ರೀಯ ಪಕ್ಷಗಳ ಗೆಲುವು ಸಾಧ್ಯವಿಲ್ಲ . ಇದು ಇಂದಿನ ರಾಜಕೀಯ ಕಟುಸತ್ತವಲ್ಲ . ದಶಕಗಳ ಹಿಂದಿನಿಂದಲೂ ಇಲ್ಲಿ ಇದೇ ಮಾದರಿಯ ರಾಜಕಾರಣ. ಈ ಸಮೀಕರಣವನ್ನು ಬದಲಾಯಿಸಿ ಕೇಸರಿ ಪತಾಕೆ ಹಾರಿಸಬೇಕೆಂಬ ದಿಲ್ಲಿ ಬಿಜೆಪಿಯ ಕನಸು ಈ ಚುನಾವಣೆಯಲ್ಲಿಯೂ ನನಸಾಗದು. ಇವರ ಆಶಯಗಳಿಗೆ ಪೂರಕವಾಗುವ ರಾಜಕೀಯ ಸನ್ನಿವೇಶ ತಮಿಳುನಾಡಿನಲ್ಲಿ ರೂಪುಗೊಂಡಿಲ್ಲ.
ಚುನಾವಣೆ ವೇಳಾಪಟ್ಟಿ ಘೋಷಣೆಯಾದ ದಿನವೇ ಕೆಲ ಖಾಸಗಿ ಸಂಸ್ಥೆಗಳು ನಡೆಸಿರುವ ಚುನಾವಣೆ ಪೂರ್ವ ಸಮೀಕ್ಷೆಗಳು ಬಹಿರಂಗವಾಗಿವೆ. ಆಡಳಿತಾರೂಢ ಡಿಎಂಕೆ ಗೆಲುವಿನ ಅಂತರ ಕಡಿಮೆಯಿದ್ದು, ಇದನ್ನು ಗಮನಿಸಿದ ಬಿಜೆಪಿ ಸಿನಿಮಾ ತಾರೆ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಜೊತೆ ಕೈ ಜೋಡಿಸಲು ಆಸಕ್ತಿ ತೋರಿದೆ. ಈ ವಿದ್ಯಮಾನವನ್ನು ಕಂಡು ಎನ್ಡಿಎ ಸಂಪ್ರದಾಯಿಕ ಮಿತ್ರ ಅಣ್ಣಾ ಡಿಎಂಕೆ ಮುನಿಸಿಕೊಂಡಿದೆ. ವಿಜಯ್ ಪಕ್ಷವನ್ನು ಟೀಕಿಸುವ ಅಣ್ಣಾಡಿಎಂಕೆ ಹೇಗೆ ಬಿಜೆಪಿ ಸಖ್ಯವನ್ನು ಒಪ್ಪಿಕೊಳ್ಳಲು ಸಾಧ್ಯ ? ಟಿವಿಕೆ ಪಕ್ಷಕ್ಕೆ ಇಲ್ಲಿನ ಜನತೆಯ ಒಲವಿದೆ ಎಂಬ ನಾಡಿಮಿಡಿತದ ಸಂಪೂರ್ಣ ಲಾಭವನ್ನು ಪಡೆಯಲು ಮೋದಿ ಮತ್ತು ಅಮಿತ್ಷಾ ಸರ್ವ ಪ್ರಯತ್ನ ನಡೆಸಿರುವುದು ಸ್ಪಷ್ಟ.
ಬಿಜೆಪಿ ಮತ್ತು ಟಿವಿಕೆ ಮೈತ್ರಿ ಮೂಲಕ ಚುನಾವಣೆಯಲ್ಲಿ ಇಲ್ಲಿನ ಜನತೆಗೆ ಮೋಡಿ ಮಾಡಲು ಬಿಜೆಪಿ ಆಲೋಚಿಸಿದೆ. ೨೪೦ಕ್ಕೂ ಅಧಿಕ ಸೀಟುಗಳ ಸಂಖ್ಯಾಬಲವನ್ನು ಹೊಂದಿರುವ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಟಿವಿಕೆ ಪಕ್ಷಕ್ಕೆ ೮೦ಕ್ಕೂ ಅಧಿಕ ಸೀಟುಗಳು ಲಭ್ಯವಿದೆ ಎಂಬ ಸಮೀಕ್ಷೆಯ ವರದಿ ಆಧಾರದ ಮೇರೆಗೆ ಬಿಜೆಪಿ ಈಗ ವಿಜಯ್ ಜೊತೆ ಮಾತುಕತೆ ನಡೆಸಿದೆ. ಅಲ್ಲದೆ ವಿಜಯ್ಗೆ ಡಿಸಿಎಂ ಹುದ್ದೆ ನೀಡುವ ಅಮಿಷವೊಡ್ಡಿದೆ. ಆದರೆ ಇದಕ್ಕೆ ವಿಜಯ್ ಒಪ್ಪಿಲ್ಲ. ಏಕೆಂದರೆ ತಮಿಳುನಾಡಿನ ರಾಜಕೀಯ ಕೇವಲ ಒಂದು ಮತ, ಜಾತಿ ಮತ್ತು ಧರ್ಮದವರ ಮೇಲೆ ಅವಲಂಬಿತವಾಗಿಲ್ಲ. ದ್ರಾವಿಡ ನೆಲದಲ್ಲಿ ಎಂಜಿಆರ್ ಮತ್ತು ಎನ್ಟಿಆರ್, ಇವರಿಬ್ಬರೂ ರಾಜಕೀಯದಲ್ಲಿ ಮೇಲೆರಲು ಕಾರಣವಾಗಿದ್ದು ಮೇಲ್ವರ್ಗದ ಜಾತಿ ಮತ್ತು ಸಮುದಾಯಗಳ ಮತಗಳಲ್ಲ. ಪರಿಶಿಷ್ಟರು, ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅಭೂತಪೂರ್ವ ಬೆಂಬಲದಿಂದಲೇ ಡ್ರಾವಿಡ ಪಕ್ಷಗಳು ಮತ್ತು ತೆಲುಗುದೇಶಂ ಅಧಿಕಾರದಲ್ಲಿರಲು ಸಾಧ್ಯವಾಗಿದೆ ಎಂಬುದು ರಾಜಕೀಯ ಕಟುಸತ್ಯ .
ಇಲ್ಲಿನ ಈ ಓಟ್ಬ್ಯಾಂಕುಗಳ ಮನಸು ಮತ್ತು ಮತವನ್ನು ತನ್ನತ್ತ ತಿರುಗಿಸಿಕೊಳ್ಳಲು ಬಿಜೆಪಿಗೆ ಇದುವರೆಗೂ ಸಾಧ್ಯವಾಗಿಲ್ಲ ! ಈ ಚುನಾವಣೆಗಳಲ್ಲಿ ಟಿವಿಕೆ ಒಂದರ್ಥದಲ್ಲಿ, ಡಿಎಂಕೆ ಮತ್ತು ಅಣ್ಣಾಡಿಎಂಕೆ – ಈ ಎರಡೂ ಪಕ್ಷಗಳಿಗೆ ಸೆಡ್ಡು ಹೊಡೆಯುವ ಸಾಧ್ಯತೆ ಇದೆ. ಇದೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ತನ್ನದೇ ಆದ ರಾಜಕೀಯ ನೆಲೆಯನ್ನು ಕಳೆದುಕೊಳ್ಳಲು ವಿಜಯ್ ಒಪ್ಪುತ್ತಿಲ್ಲ. ಈ ಹಿಂದೆ ಕಮಲ್ಹಾಸನ್ ಪಾರ್ಟಿಯನ್ನು ಹುಟ್ಟು ಹಾಕಿದಾಗಲೂ ಇದೇ ಬಗೆಯ ಅನುಕೂಲಸಿಂಧು ರಾಜಕೀಯ ವಿದ್ಯಮಾನಗಳು ಸಂಭವಿಸಿತ್ತು. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ವಿಜಯ್ ಸಹಕರಿಸಬೇಕು. ಆದರೆ ಇದೀಗ ಕಾಲ ಮಿಂಚಿದ ವಿಷಯವಷ್ಟೆ.


