ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಐಷಾರಾಮಿ ಜೀವನದ ವೀಡಿಯೊ ವೈರಲ್ ಆಗಿದೆ. ಜೈಲಿನಲ್ಲಿ ಕೈದಿಗಳ ಮೊಬೈಲ್ ಬಳಕೆ, ಗಾಂಜಾ ಸೇವನೆ, ನಾನ್‌ವೆಜ್ ಅಡುಗೆ ತಯಾರಿ, ಆಂಡ್ರಾಯ್ಡ್ ಮೊಬೈಲ್, ಪೋಟೋಗೆ ಕೈದಿಗಳ ಪೋಸ್ ಸೇರಿದಂತೆ ಹಲವು ವೀಡಿಯೊ ವೈರಲ್ ಆಗಿದೆ.
ಕೈದಿಗಳು ಜೈಲು ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಕೂಡ ಮಾಡುತ್ತಾರೆ ಎನ್ನಲಾಗಿದೆ. ಜೈಲಿನಲ್ಲಿ ಈ ಹಿಂದಿನ ಕೈದಿಗಳು ಐಷಾರಾಮಿಯಾಗಿ ಜೀವನ ನಡೆಸಿದ್ದ ಪೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗೆ ಜೈಲಿನಲ್ಲಿ ಕೈದಿಗಳ ಐಷಾರಾಮಿ ಜೀವನದ ಹಳೆಯ ಪೋಟೊ ಇಟ್ಟುಕೊಂಡು ಬೆದರಿಸಿ ಸಿಬ್ಬಂದಿಯಿಂದ ಈಗಿನ ಕೈದಿಗಳು ಹೆಚ್ಚಿನ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆಂಬ ಆರೋಪವಿದೆ. ಈಗಲೂ ಜೈಲಿನಲ್ಲಿ ಕೆಲವರಿಗೆ ಎಲ್ಲಾ ಸೌಲಭ್ಯ ಸಿಗುತ್ತವೆ, ಸೌಲಭ್ಯ ಸಿಗದವರು ಈ ರೀತಿ ಪೋಟೋ ವೈರಲ್ ಮಾಡ್ತಿದ್ದಾರೆ ಎನ್ನಲಾಗಿದೆ.