ಸ್ಫೋಟಕ ಬ್ಯಾಟ್ಸ್ ಮನ್ ವೆಂಕಟೇಶ್ ಅಯ್ಯರ್ 7 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.
ಅಬುಧಾಬಿಯಲ್ಲಿ ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲಧನ ಹೊಂದಿದ್ದ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ. ನೀಡಿ ಆರ್ ಸಿಬಿ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಳೆದ ಬಾರಿ 23.75 ಕೋಟಿ ರೂ.ಗೆ ಕೆಕೆಆರ್ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿಗೆ ಖರೀದಿಸುವಲ್ಲಿ ಆರ್ ಸಿಬಿ ಯಶಸ್ವಿಯಾಗಿದೆ.
ಮಧ್ಯಪ್ರದೇಶ ಪರ ಇತ್ತೀಚೆಗೆ 43 ಎಸೆತಗಳಲ್ಲಿ 70 ರನ್ ಗಳಿಸಿದ್ದ ವೆಂಕಟೇಶ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲು ಕೆಕೆಆರ್ ಪ್ರಯತ್ನಿಸಿತು. ಆದರೆ ಆರ್ ಸಿಬಿ ಪೈಪೋಟಿ ನೀಡಿ 7 ಕೋಟಿಗೆ ಖರೀದಿಸಿತು.
ಜೇಕಬ್ ಡುಫೆ 2 ಕೋಟಿಗೆ ಆರ್ ಸಿಬಿ ತಂಡ ಖರೀದಿಸಿತು. ಕಡಿಮೆ ಮೊತ್ತ ಹೊಂದಿರುವ ಆರ್ ಸಿಬಿ ಆಟಗಾರರ ಆಯ್ಕೆಯಲ್ಲಿ ಭಾರೀ ಎಚ್ಚರಿಕೆ ವಹಿಸಿದ್ದು, ದೊಡ್ಡ ಮೊತ್ತವನ್ನು ಯಾವುದೇ ಆಟಗಾರನ ಮೇಲೆ ಹೂಡಲು ಆಸಕ್ತಿ ತೋರಲಿಲ್ಲ.
ಆಸ್ಟ್ರೇಲಿಯಾದ ಆಲ್ ರೌಂಡರ್ ಕೆಮರೂನ್ ಗ್ರೀನ್ ಅವರನ್ನು 25.20 ಕೋಟಿ ರೂ.ಗೆ ಹಾಗೂ ಶ್ರೀಲಂಕಾದ ಮತೀಶ ಪತಿರಾಣ 18 ಕೋಟಿ ರೂ.ಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಖರೀದಿಸಿತು.
ಕೆಮರೂನ್ ಈ ಮೂಲಕ ಕೆಮರೂನ್ ನಿರೀಕ್ಷೆಯಂತೆ ದೊಡ್ಡ ಮೊತ್ತ ಜೇಬಿಗಿಳಿಸಿಕೊಂಡು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿದೇಶೀ ಆಟಗಾರ ಎಂಬ ದಾಖಲೆಗೆ ಬರೆದರು. ಪತಿರಾಣ ದೊಡ್ಡ ಮೊತ್ತ ಪಡೆದಿದ್ದೂ ಅತೀ ದೊಡ್ಡ ಮೊತ್ತಕ್ಕೆ ಇಬ್ಬರು ಆಟಗಾರರನ್ನು ಕೆಕೆಆರ್ ಖರೀದಿಸಿತು.
ಕೆಮರೂನ್ ಗ್ರೀನ್ ಗಾಗಿ ಕೆಕೆಆರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಟ್ಟು ಬಿಡದ ಬಾಲಿವುಡ್ ನಟ ಶಾರೂಖ್ ಖಾನ್ ಒಡೆತನದ ಕೆಕೆಆರ್ ಕೆಮರೂನ್ ಗ್ರೀನ್ ಅವರನ್ನು ದೊಡ್ಡ ಮೊತ್ತಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.
ಐಪಿಎಲ್ ಚಾಂಪಿಯನ್ ಆರ್ ಸಿಬಿ ತಂಡದ ಪರ ಆಡಿದ್ದ ಕೆಮರೂನ್ ಗ್ರೀನ್ ಅವರನ್ನು ಸೆಳೆಯುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ. ಈ ಹಿಂದೆ ಮಿಚೆಲ್ ಸ್ಟಾರ್ಕ್ 24.5 ಕೋಟಿಗೆ ಮಾರಾಟವಾಗಿದ್ದು, ಇದುವರೆಗಿನ ಅತೀ ದೊಡ್ಡ ಮೊತ್ತ ಪಡೆದ ವಿದೇಶೀ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಕೆಮರೂನ್ ಈ ದಾಖಲೆ ಮುರಿದಿದ್ದಾರೆ.
ಹರಾಜಿನಲ್ಲಿ ಆರ್ ಸಿಬಿ ತಂಡ ಕೈಬಿಟ್ಟ ಲಿಯಾಮ್ ಲಿವಿಂಗ್ ಸ್ಟೋನ್, ಪೃಥ್ವಿ ಶಾ, ಸರ್ಫಾರಾಜ್ ಖಾನ್ ಮಾರಾಟವಾಗದೇ ಅನ್ ಸೋಲ್ಡ್ ಆದರೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಮೂಲಧನ 2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಶ್ರೀಲಂಕಾದ ಸ್ಪಿನ್ನರ್ ಹಸರಂಗ 2 ಕೋಟಿ ರೂ. ಮೂಲಧನಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು.


