Wednesday, February 11, 2026
Menu

ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಕಡ್ಡಾಯ

‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಷ್ಟ್ರಗೀತೆಗೂ ಮುನ್ನ ʻವಂದೇ ಮಾತರಂʼ ಗೀತೆ ಹಾಡಬೇಕು ಅಥವಾ ನುಡಿಸಬೇಕು ಎಂದು ಹೊಸ ಮಾರ್ಗಸೂಚಿ ಹೊರಡಿಸಿದೆ.

ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ್ದು, ಪದ್ಮ ಪ್ರಶಸ್ತಿ ಸೇರಿದಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ರಾಷ್ಟ್ರಪತಿಗಳು ಭಾಗವಹಿಸುವ ಇತರ ಎಲ್ಲಾ ಕಾರ್ಯಕ್ರಮಗಳು, ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು, ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸಬೇಕು ಅಥವಾ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ.

ತ್ರಿವರ್ಣ ಧ್ವಜ ಹಾರಿಸುವಾಗ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ಸಮಯ ಮತ್ತು ಅವರ ಭಾಷಣದ ಮೊದಲು ಮತ್ತು ನಂತರ, ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರವೂ ಇದನ್ನು ಪಾಲಿಸಬೇಕಿದೆ.

ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆಗೆ ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನು ತಡೆಯುವ ವ್ಯಕ್ತಿಗೆ ಗರಿಷ್ಠ ಮೂರು ವರ್ಷ ಜೈಲು ವಿಧಿಸಲು ʻರಾಷ್ಟ್ರದ ಗೌರವಕ್ಕೆ ಅಪಮಾನ ತಡೆʼ ಕಾಯ್ದೆ ಅಡಿ ಅವಕಾಶವಿರುತ್ತದೆ. ಆರು ಚರಣಗಳಿರುವ ‘ವಂದೇ ಮಾತರಂ’ ಗೀತೆ ಹಾಡುವುದು ಕಡ್ಡಾಯ. ಈ ನಿರ್ದೇಶನವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ನೀಡಲಾಗಿದೆ.

Related Posts

Leave a Reply

Your email address will not be published. Required fields are marked *