Menu

ಉಸ್ಮಾನ್ ಖ್ವಾಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ

usman khwaja

ಸಿಡ್ನಿ: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ ಮನ್ ಉಸ್ಮಾನ್ ಖ್ವಾಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು, ಪ್ರಸ್ತುತ ನಡೆಯುತ್ತಿರುವ ಆಷಸ್ ಸರಣಿಯ ಸಿಡ್ನಿ ಟೆಸ್ಟ್ ಕೊನೆಯ ಪಂದ್ಯವಾಗಿದೆ.

39 ವರ್ಷದ ಉಸ್ಮಾನ್ ಖ್ವಾಜಾ 87 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 16 ಶತಕ ಸೇರಿದಂತೆ 6206 ರನ್ ಗಳಿಸಿದ್ದಾರೆ.

ನಿವೃತ್ತಿ ಬಗ್ಗೆ ಹಲವು ಸಮಯದಿಂದ ಚಿಂತನೆ ನಡೆಸಿದ್ದೆ. ಆದರೆ ಇದು ನನ್ನ ಕೊನೆಯ ಸರಣಿ ಎಂಬ ಭಾವನೆ ಕಾಡಲು ಆರಂಭಿಸಿತು. ಹಾಗಾಗಿ ನಿರ್ಧಾರ ಕೈಗೊಂಡೆ ಎಂದು ಅವರು ಹೇಳಿದರು.

ಇದೇ ವೇಳೆ ಖ್ವಾಜಾ ಬಿಬಿಎಲ್ ಟೂರ್ನಿಯಲ್ಲಿ ಬ್ರಿಸ್ಬೇನ್ ಹಿಟ್ಸ್ ತಂಡದ ಪರ ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

2011-12ರಲ್ಲಿ ಖ್ವಾಜಾ ಇಂಗ್ಲೆಂಡ್ ವಿರುದ್ಧದ ಸರಣಿ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದರು. ಎರಡು ವರ್ಷಗಳ ಬಿಡುವಿನ ನಂತರ ಮತ್ತೆ ತಂಡಕ್ಕೆ ಮರಳಿದ್ದರು.  ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 22 ಟೆಸ್ಟ್ ಗಳಲ್ಲಿ 60.48 ಸರಾಸರಿಯಲ್ಲಿ 7 ಶತಕ ಸಿಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *