ಅಮೆರಿಕದ ಕ್ಯಾಲಿಫೋರ್ನಿಯಾ ಸಾಂತಾ ಕ್ಲಾರಾದಲ್ಲಿ ಪೊಲೀಸರು ಭಾರತೀಯ ಮೂಲದ ಟೆಕ್ಕಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮೃತ ಭಾರತೀಯ ಮೂಲದ ಟೆಕ್ಕಿಯನ್ನು ತೆಲಂಗಾಣದ ಮೆಹಬೂಬ್‌ನಗರದ ಮೊಹಮ್ಮದ್ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಉನ್ನತ ಶಿಕ್ಷಣಕ್ಕಾಗಿ ಯುಎಸ್‌ಗೆ ತೆರಳಿದ್ದರು. ಫ್ಲೋರಿಡಾ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಮುಗಿಸಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು.
ಸೆ.3ರಂದು ಬೆಳಗ್ಗೆ ಸಾಂತಾ ಕ್ಲಾರಾದ ನಿವಾಸವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಹತ್ಯೆ ಮಾಡಲಾಗುತ್ತಿದೆ ಎಂದು ಕರೆ ಬಂದಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಮೊಹ್ಮದ್ ಚಾಕು ಹಿಡಿದು ರೂಮ್‌ಮೇಟ್‌ಗೆ ಬೆದರಿಕೆ ಹಾಕುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಗುಂಡು ಹಾರಿಸಿದ್ದಾರೆ. ಮೊಹಮ್ಮದ್ ಮೃತಪಟ್ಟಿದ್ದು, ಆತನ ರೂಮ್‌ಮೇಟ್‌ಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಸದ್ಯ ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಹತ್ಯೆಯಾದ ಎರಡು ವಾರಗಳ ಬಳಿಕ ಕುಟುಂಬಸ್ಥರಿಗೆ ಲಭಿಸಿದೆ. ನನ್ನ ಮಗನಿಗೆ ಕರೆ ಮಾಡಿದೆ. ಆದರೆ ಮೊಬೈಲ್ ಸ್ವಿಚ್ಢ್ ಆಫ್ ಬಂತು. ಬಳಿಕ ಆತನ ಸ್ನೇಹಿತ ಮೊಹಮ್ಮದ್ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ.
ಮೊಹಮ್ಮದ್‌ಗೆ ಆತನ ಕಂಪನಿಯಲ್ಲಿ ಕಿರುಕುಳ ನೀಡುತ್ತಿದ್ದರು. 6 ತಿಂಗಳ ಹಿಂದೆಯೇ ನಿಜಾಮುದ್ದೀನ್ ಅನ್ನು ಕೆಲಸದಿಂದ ತೆಗೆದಿದ್ದರು. ಜೊತೆಗೆ ಆತನ ರೂಮ್‌ಮೇಟ್ ಕೂಡ ತುಂಬಾ ಪೀಡಿಸುತ್ತಿದ್ದ ಎಂದು ಸ್ನೇಹಿತು ಹೇಳಿದ್ದಾರೆ.