ಅಟ್ಲಾಂಟಿಕ್ ಮಹಾಸಾಗರದಲ್ಲಿ ರಷ್ಯಾದ ಧ್ವಜ ಹೊಂದಿದ್ದ ತೈಲ ಹಡಗನ್ನು ಅಮೆರಿಕದ ಸೇನೆ ಸಿನಿಮಯ ಶೈಲಿಯಲ್ಲಿ ಬೆನ್ನಟ್ಟಿ ವಶಕ್ಕೆ ಪಡೆದಿದೆ.
ಉತ್ತರ ಸಮುದ್ರದಲ್ಲಿ ಕಳೆದೆರಡು ವಾರಗಳಿಂದ ಅನುಮಾನಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಹಡಗಿನ ಚಲನವಲನಗಳ ಮೇಲೆ ಕಣ್ಗಾವಲು ಇರಿಸಿದ್ದ ಅಮೆರಿಕ ಗುರುವಾರ ಹಡಗನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಹಡಗನ್ನು ರಕ್ಷಿಸಿಕೊಳ್ಳಲು ರಷ್ಯಾ ನೌಕಾಪಡೆಯನ್ನು ರವಾನಿಸುತ್ತಿರುವ ಸುಳಿವು ಪಡೆದ ಅಮೆರಿಕ ಸೇನೆ ಏಕಾಏಕಿ ದಾಳಿ ನಡೆಸಿ ಹಡಗನ್ನು ಬೆನ್ನಟ್ಟಿ ವಶಕ್ಕೆ ಪಡೆದಿದೆ.
ರಷ್ಯಾದ ಸುದ್ದಿ ಪ್ರಸಾರ ಸಂಸ್ಥೆಗಳು ಅಮೆರಿಕ ಸೇನೆಯ ಹೆಲಿಕಾಫ್ಟರ್ ಗಳು ರಷ್ಯಾದ ತೈಲ ಹಡಗಿನ ಸುತ್ತ ಸುತ್ತುವರಿಯುತ್ತಿರುವುದು ಹಾಗೂ ಹಡಗಿನ ಮೇಲೆ ಇಳಿಯುತ್ತಿರುವ ವೀಡಿಯೋಗಳನ್ನು ಪ್ರಸಾರ ಮಾಡಿವೆ.
ಬೆಲ್ಲಾ 1ಹೆಸರಿನ ಈ ಹಡಗಿಗೆ 2024ರಲ್ಲಿ ಅಮೆರಿಕ ಅನುಮೋದನೆ ನೀಡಿತ್ತು. ಮರಿನೆರಾ ಎಂದು ನಂತರ ಹಡಗಿನ ಹೆಸರು ಬದಲಾಯಿಸಲಾಗಿತ್ತು. ಈ ಹಡಗು ಇರಾನ್ ನಿಂದ ವೆನಿಜುವೆಲಾ ಕಡೆ ಪ್ರಯಾಣಿಸುತ್ತಿತ್ತು.,
ಇತ್ತೀಚೆಗಷ್ಟೇ ವೆನಿಜುವೆಲಾವನ್ನು ವಶಪಡಿಸಿಕೊಂಡಿದ್ದ ಅಮೆರಿಕ ಈ ಹಡಗಿನ ಚಲನವಲನಗಳ ಮೇಲೆ ಹೆಲಿಕಾಫ್ಟರ್ ಸೇರಿದಂತೆ ಹಲವು ವಿಮಾನಗಳ ಮೂಲಕ ನಿಗಾ ವಹಿಸಿತ್ತು ಎಂದು ಹೇಳಲಾಗಿದೆ.


