ದೇಶಾದ್ಯಂತ ಯುಪಿಐ ಸರ್ವರ್ ಸ್ಥಗಿತಗೊಂಡ ಕಾರಣ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಲು ಆಗದೆ ಲಕ್ಷಾಂತರ ಗೂಗಲ್ ಪೇ ಮತ್ತು ಫೋನ್ ಪೇ ಗ್ರಾಹಕರು ಪರದಾಡಬೇಕಾದ ಸ್ಥತಿ ನಿರ್ಮಾಣಗೊಂಡಿತ್ತು.
ಗೂಗಲ್ ಪೇ, ಫೋನ್ ಪೇ ,ಮತ್ತು ಪೇಟಿಎಂನಂತಹಪೇಮೆಂಟ್ ಆಪ್ಲಿಕೇಷನ್‌ಗಳ ಪಾವತಿ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಇದರಿಂದ ಸ್ಮಾರ್ಟ್ ಫೋನ್ ಮೂಲಕ ಆನ್ಲೈನ್ ನಲ್ಲಿ ಹಣವನ್ನು ಕಳುಹಿಸಲು ಸಾಧ್ಯವಾಗದೆ ಗ್ರಾಹಕರುತೊಂದರೆಗೆ ಒಳಗಾದರು.
ಯುಪಿಐ ಸ್ಥಗಿತಕ್ಕೆ ಸಂಬಂಧಿಸಿದಂತೆ 2,750ಕ್ಕಿಂತ ಹೆಚ್ಚಿನ ದೂರುಗಳು ಬಂದಿವೆ. ಗೂಗಲ್ ಪೇ ಬಳಕೆದಾರರು 296 ದೂರುಗಳನ್ನು ನೀಡಿದ್ದಾರೆ. ಪೇಟಿಎಂ ಅಪ್ಲಿಕೇಶನ್‌ಗೆ ಸಂಬಂಧಿಸಿದ 119 ದೂರುಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ಲಾಟ್ಫಾರ್ಮ್ ಸ್ಥಗಿತದ ಬಗ್ಗೆ 376 ಮಂದಿ ದೂರು ಸಲ್ಲಿಸಿದ್ದಾರೆ.
ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಸಮಸ್ಯೆಯನ್ನು ಬಗೆಹರಿಸಿದೆ. ಇಂಟರ್ನೆಟ್ ತಾಂತ್ರಿಕ ದೋಷದಿಂದ ಸರ್ವರ್ ಸಮಸ್ಯೆ ಉಂಟಾಗಿದೆ. ಗ್ರಾಹಕರಿಗೆ ಸಮಸ್ಯೆ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.