Tuesday, February 10, 2026
Menu

ಭಿಕ್ಷುಕನೊಂದಿಗೆ ಪ್ರೇಮಾಂಕುರ, ಪತಿ, ಮಕ್ಕಳ ತೊರೆದು ಮಹಿಳೆ ಪರಾರಿ

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ಮಹಿಳೆ ಭಿಕ್ಷುಕನ ಪ್ರೇಮಪಾಶಕ್ಕೆ ಸಿಲುಕಿ ಆತನ ಜೊತೆ ಪರಾರಿಯಾಗಿದ್ದಾಳೆ.

36 ವರ್ಷದ ರಾಜೇಶ್ವರಿ ಗಂಡ ಮತ್ತು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಳು. ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ ಮೇಲೆ ಪ್ರೇಮಾಂಕುರವಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಪರಾರಿಯಾಗಿದ್ದಾಳೆ.

ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ತೆರಳಿದ ರಾಜೇಶ್ವರಿ ಏಕಾಏಕಿ ನಾಪತ್ತೆಯಾಗಿದ್ದಳು. ಆತಂಕಗೊಂಡ ಪತಿ ರಾಜು ಪೊಲೀಸ್‌ಗೆ ದೂರು ನೀಡಿದ್ದಾರೆ. ಪತಿಯ ದೂರು ಆಧರಿಸಿ ತನಿಖೆಗಿಳಿದ ಪೊಲೀಸರ ಎದುರು ನಿಜ ಬಯಲಾಗಿದೆ.

ಪೊಲೀಸರ ತನಿಖೆ ವೇಳೆ ನಾಪತ್ತೆಯಾಗಿದ್ದ ರಾಜೇಶ್ವರಿ ನನ್ಹೇ ಪಂಡಿತ್ ಎಂಬ ಭಿಕ್ಷುಕನೊಂದಿಗೆ ಪತ್ತೆಯಾಗಿದ್ದಾಳೆ. ಈತ ಭಿಕ್ಷೆಯ ನೆಪದಲ್ಲಿ ಮನೆಯ ಮುಂದೆ ಬಂದು ರಾಜೇಶ್ವರಿ ಜೊತೆ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಆಕೆಗೆ ಈತನ ಮೇಲೆ ಪ್ರೀತಿಯಾಗಿದೆ. ಇಬ್ಬರೂ ಪರಸ್ಪರ ನಂಬರ್ ಶೇರ್ ಮಾಡಿಕೊಂಡು ಮೊಬೈಲ್‌ನಲ್ಲೇ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *